ದಲಿತ ಯವಕನ ಹತ್ಯೆ ಖಂಡಿಸಿ ಪ್ರತಿಭಟನೆ | 50 ಲಕ್ಷ ರೂ ಪರಿಹಾರಕ್ಕೆ ಆಗ್ರಹ
ಮಂಗಳೂರು: ದಲಿತ ದಿನೇಶ್ ಕನ್ಯಾಡಿ ಹತ್ಯೆಗೆ ನ್ಯಾಯ ದೊರಕಿಸಬೇಕೆಂದು ಎಸ್ ಡಿಪಿಐ ಕಾರ್ಯಕರ್ತರು ಮಂಗಳೂರಿನಲ್ಲಿ ಬೃಹತ್ ಜಾಥಾ ಮಾಡಿದರು.
ಮಂಗಳವಾರ ಬೆಳ್ತಂಗಡಿಯಿಂದ ಮಂಗಳೂರುವರೆಗೆ ಬೃಹತ್ ಜಾಥಾ ನಡೆಯಿತು. ಈ ಜಾಥಾ ಬೆಳಿಗ್ಗೆ 9:30ಕ್ಕೆ ಪ್ರಾರಂಭವಾಗಿ ಸಾಯಂಕಾಲ 4:30ಕ್ಕೆ ಕೊನೆಗೊಂಡಿತು. ನಂತರ ಬೆಳ್ತಂಗಡಿಯ ಕ್ಲಾಕ್ ಟವರ್ ಬಳಿ ನಡೆದ ಪ್ರತಿಭಟನಾ ಸಭೆ ನಡೆಯಿತು.
ಈ ಸಭೆಯಲ್ಲಿ ಮಾತನಾಡಿದ ಎಸ್ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಶಿವಮೊಗ್ಗದಲ್ಲಿ ಬಜರಂಗದಳ ಕಾರ್ಯಕರ್ತ ಹರ್ಷನ ಕೊಲೆಯಾಗಿದ್ದು, ಅವರ ಮನೆಗೆ ಬಿಜೆಪಿ ಎಲ್ಲ ಮುಖಂಡರು ಮನೆಗೆ ಹೋಗುತ್ತಾರೆ. ಅಲ್ಲದೇ ಸರಕಾರದವತಿಯಿಂದ 25 ಲಕ್ಷ ಹಣ ನೀಡುತ್ತಾರೆ. ಆದರೆ ಅದೇ ದಿನೇಶ್ ಕನ್ಯಾಡಿ ಕೊಲೆಯಾದರೆ ಯಾವ ನಾಯಕರು ಹೋಗುವುದಿಲ್ಲ. ಈ ರೀತಿ ತಾರತಮ್ಯ ಮಾಡುವುದು ಸರಿಯಲ್ಲ ಎಂದು ಹೇಳಿದರು.
ಸರಕಾರ ನಡೆಸುವವರಿಗೆ ಎಲ್ಲರೂ ಒಂದೆ, ಈ ರೀತಿ ತಾರತಮ್ಯ ಮಾಡುವುದು ಸರಿಯಲ್ಲ. ರಾಜ್ಯದ 6 ಕೋಟಿ ಕನ್ನಡಿಗರಿಂದ ಸರಕಾರ ರಚನೆಯಾಗಿರುತ್ತೆ. ಎಲ್ಲರಿಗೂ ನ್ಯಾಯ ಮತ್ತು ರಕ್ಷಣೆ ನೀಡಬೇಕು. ಈ ಪ್ರತಿಭಟನೆ ಮೂಲಕ ನಾವು ಸರಕಾರವನ್ನು ಮನವಿ ಮಾಡುತ್ತೇವೆ ಮೃತನ ಕುಟುಂಬಕ್ಕೆ 50 ಲಕ್ಷ ಪರಿಹಾರ, 2.50 ಕರೆ ಜಮೀನು ಮತ್ತು ಕುಟುಂಬದ ಸದಸ್ಯನಿಗೆ ಸರಕಾರಿ ಕೆಲಸ ಕೊಡಿಸಬೇಕು ಎಂದು ಆಗ್ರಹಿಸಿದರು
ಅಲ್ಲದೇ ದಲಿತ ಯುವಕನ್ನು ಕೊಲೆ ಮಾಡಿದ ಬಿಜೆಪಿ ಮುಖಂಡ 15 ದಿನಗಳಲ್ಲಿ ಜಾಮೀನು ತೆಗೆದುಕೊಂಡು ಹೊರಗೆ ಬರುತ್ತಾರೆ. ಹಾಗಾದರೆ ಇಲ್ಲಿ ಕಾನೂನು ಇದೆಯೇ?, ಸರಕಾರ ಇದೆಯೇ?, ನ್ಯಾಯ ಇದೆಯೇ? ತಕ್ಷಣ ಹತ್ಯೆ ಆರೋಪಿ ಕೃಷ್ಣ ಎಂಬಾತನ ಜಾಮೀನು ರದ್ದು ಮಾಡಿ ಮತ್ತೆ ಜೈಲಿಗೆ ಕಳುಹಿಸಬೇಕು ಎಂದರು.