ಮಂಡ್ಯದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಏರಿಕೆ: 144 ಸೆಕ್ಷನ್ ಜಾರಿ

1 min read
Corona shock to police in Mandya saaksha tv

ಮಂಡ್ಯದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಏರಿಕೆ: 144 ಸೆಕ್ಷನ್ ಜಾರಿ Saaksha Tv

ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಏರಿಕೆಯಾಗಿದ್ದರಿಂದ ಜಿಲ್ಲೆಯಾದ್ಯಂತ 144 ಸೆಕ್ಷನ್ ಜಾರಿಮಾಡಲಾಗಿದೆ. ಇದು ಇಂದಿನಿಂದ ಜ. 19ರ ವರೆಗೆ ನಿಷೇಧಾಜ್ಞೆ ಜಾರಿಯಾಗಲಿದೆ. ಮತ್ತು  ನೈಟ್ ಕರ್ಫ್ಯೂ ವೇಳೆ ರಾತ್ರಿ 10 ರಿಂದ ಬೆಳಿಗ್ಗೆ 5ರ ವರೆಗೆ ಸಾರ್ವಜನಿಕರ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್.ಅಶ್ವತಿಯಿಂದ ಆದೇಶ ಹೊರಡಿಸಿದ್ದಾರೆ.

ಅಲ್ಲದೆ ಶುಕ್ರವಾರ ರಾತ್ರಿ 10 ರಿಂದ ಸೋಮವಾರ ಬೆಳಿಗ್ಗೆ 5 ರ ವರಗೆ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿರಲಿದ್ದು ಸಾರ್ವಜನಿಕರು ಕಡ್ಡಾಯವಾಗಿ ನಿಯಮ ಪಾಲಿಸಬೇಕು. ಈ ನಿಯಮಗಳ ಮದ್ಯೆ ಕೆಲವೊಂದಕ್ಕೆ ವಿನಾಯಿತಿಯನ್ನು ನೀಡಿದ್ದಾರೆ. ಆಹಾರ, ದಿನಸಿ ಅಂಗಡಿ, ಹಣ್ಣು ಮತ್ತು ತರಕಾರಿ ಅಂಗಡಿ, ಮೀನು ಮಾಂಸದ ಅಂಗಡಿ, ಹಾಲಿನ ಬೂತ್, ಬೀದಿ ಬೀದಿ ವ್ಯಾಪಾರಕ್ಕೆ ವಿನಾಯತಿ ನೀಡಲಾಗಿದೆ. ಪಬ್, ಬಾರ್ ಮತ್ತು ರೆಸ್ಟೋರೆಂಟ್, ಹೋಟೆಲ್, ಚಿತ್ರಮಂದಿರ, ಸಭಾಂಗಣ, ರಂಗಮಂದಿರ, ಈಜುಕೊಳ, ಹಾಗೂ ಜಿಮ್ ಕೇಂದ್ರಕ್ಕೆ ಶೇ 50ರಷ್ಟು ಜನರಿಗೆ ಮಾತ್ರ ಅವಕಾಶ. ಇನ್ನೂ ಮದುವೆ, ನಿಶ್ಚಿತಾರ್ಥ, ಬೀಗರ ಔತಣಕ್ಕೆ 100 ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ.

144 Section Saaksha tv

ಇದೇ ನಿಯಮದಡಿ ಅಂತ್ಯ ಸಂಸ್ಕಾರ, ಹಾಗೂ ತಿಥಿ ಕಾರ್ಯಕ್ಕೆ ಕೇವಲ 30 ಜನರಿಗೆ ಅವಕಾಶ ಕಲ್ಪಿಸಲಾಗಿದೆ. ದೇವರ ದರ್ಶನಕ್ಕೆ ಒಂದು ಸಮಯಕ್ಕೆ 50 ಜನರಿಗೆ ಅವಕಾಶ ಕಲ್ಪಿಸಲಾಗಿದೆ. ಸ್ಪೋರ್ಟ್ಸ್, ಕ್ರೀಡಾಂಗಣ ಹಾಗೂ ಕಾಂಪ್ಲೆಕ್ಸ್ ಗೆ ಶೇ 50 ಜನರಿಗೆ ಪ್ರವೇಶ ನೀಡಲಾಗಿದೆ. ವಿಶೇಷ ದಿನಗಳಲ್ಲಿ ದೇವಾಲಯ, ಧಾರ್ಮಿಕ ಕೇಂದ್ರಗಳಿಗೆ ಸಾರ್ವಜನಿಕರ ಪ್ರವೇಶಕ್ಕೆ ಸಂಪೂರ್ಣವಾಗಿ ನಿರ್ಬಂಧ ಹೇರಲಾಗಿದೆ.

ಅಲ್ಲದೆ ಜಿಲ್ಲೆಯಲ್ಲಿ ಜಾತ್ರೆ, ಧನದ ಜಾತ್ರೆ, ಗ್ರಾಮ ದೇವತೆ ಹಬ್ಬ, ಕೊಂಡೊತ್ಸವ, ಹಾಗೂ ಸಾಮೂಹಿಕ ಪ್ರಾರ್ಥನೆಗೆ ನಿಷೇಧಿಸಲಾಗಿದೆ. ಬೃಹತ್ ರ್ಯಾಲಿ, ಧರಣಿ, ಪ್ರತಿಭಟನೆ ಮತ್ತು ವೀಕೆಂಡ್ ಕರ್ಫ್ಯೂ ವೇಳೆ ಅಗತ್ಯ ಸೇವೆ ಹೊರತು ಪಡಿಸಿ ಉಳಿದೆಲ್ಲಾ ಸೇವೆಗೆ ತಡೆಯೊಡ್ಡಲಾಗಿದೆ. ಪ್ರವಾಸಿತಾಣಕ್ಕೆ ಪ್ರವಾಸಿಗರಿಗೆ ನಿಷೇಧಿಸಲಾಗಿದೆ. ಹೋಟೆಲ್- ರೆಸ್ಟೊರೆಂಟ್ ಗಳಲ್ಲಿ ಪಾರ್ಸಲ್ ಗೆ ಮಾತ್ರ ಅವಕಾಶ. ಉಳಿದಂತೆ ಎಲ್ಲಾ ಸೇವೆಗಳಿಗೆ ನಿರ್ಬಂಧ ಹೇರಲಾಗಿದೆ. ಕೊರೊನಾ ನಿಯಮದ ಆದೇಶ ಉಲ್ಲಂಘಿಸಿದ್ರೆ ಕಾನೂನು ಕ್ರಮ ಕೈಗೊಳ್ಳಲಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd