ರಾಹುಲ್ ಗಾಂಧಿಯಿಂದಲೇ 113 ಬಾರಿ ಭದ್ರತಾ ಶಿಷ್ಟಾಚಾರ ಉಲ್ಲಂಘನೆ – CRPF
ಮಾರ್ಗಸೂಚಿಗಳ ಪ್ರಕಾರವೇ ರಾಹುಲ್ ಗಾಂಧಿಗೆ ಭದ್ರತಾ ವ್ಯವಸ್ಥೆಗಳನ್ನ ಮಾಡಲಾಗಿದೆ. ಆದರೇ ರಾಹುಲ್ ಗಾಂಧಿಯೇ ಭಾರತ್ ಜೋಡೋ ಯಾತ್ರೆಯಲ್ಲಿ ಮಾರ್ಗಸೂಚಿಗಳನ್ನ ಉಲ್ಲಂಘಿಸಿದ್ದಾರೆ ಎಂದು ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್) ಕೇಂದ್ರ ಗೃಹ ಸಚಿವಾಲಯಕ್ಕೆ ಮಾಹಿತಿ ನೀಡಿದೆ.
ಭಾರತ್ ಜೋಡೋ ಯಾತ್ರೆ ಹಲವಾರು ಬಾರಿ ಭದ್ರತೆ ಲೋಪ ಉಂಟಾಗಿದೆ ಎಂದು ಕಾಂಗ್ರೆಸ್ ನಾಯಕ ಕೆಸಿ ವೇಣುಗೋಪಾಲ್ ಹೇಳಿದ ಒಂದು ದಿನದ ನಂತರ ಸಿ ಆರ್ ಪಿ ಎಫ್ ಪ್ರತಿಕ್ರಿಯಿಸಿದೆ.
“ 2020 ರಿಂದ ರಾಹುಲ್ ಗಾಂಧಿಯಿಂದಲೇ ಸ್ವತಃ 113 ಭಾರಿ ಭದ್ರತಾ ಶಿಷ್ಟಾಚಾರ ಉಲ್ಲಂಘನೆಯಾಗಿದೆ. ಎಲ್ಲಾ ಭದ್ರತಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸಲಾಗಿದೆ ಮತ್ತು ಸಾಕಷ್ಟು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ”
ಡಿಸೆಂಬರ್ 24 ರಂದು ದೆಹಲಿಯನ್ನ ಪ್ರವೇಶಿಸಿದಾಗಿನಿಂದ ಯಾತ್ರೆಯ ಭದ್ರತೆಯಲ್ಲಿ ಹಲವಾರು ಬಾರಿ ರಾಜಿ ಮಾಡಿಕೊಳ್ಳಲಾಗಿದೆ ಎಂದು ಕಾಂಗ್ರೆಸ್ ನಾಯಕ ಕೆಸಿ ವೇಣುಗೋಪಾಲ್ ಬುಧವಾರ ಅಮಿತ್ ಶಾ ಗೆ ಪತ್ರದಲ್ಲಿ ತಿಳಿಸಿದ್ದಾರೆ.
security violat: 113 times violation of security protocol by Rahul Gandhi – CRPF