ಸಚಿನ್ ನಂತೆ ಬ್ಯಾಟಿಂಗ್ ಮಾಡಲು ಸೆಹ್ವಾಗ್ ಕಂಡುಕೊಂಡ ದಾರಿ ಏನು ?

1 min read
Virender Sehwag and Sachin Tendulkar saakshatv

ಸಚಿನ್ ನಂತೆ ಬ್ಯಾಟಿಂಗ್ ಮಾಡಲು ಸೆಹ್ವಾಗ್ ಕಂಡುಕೊಂಡ ದಾರಿ ಏನು ?

Virender Sehwag and Sachin Tendulkar saakshatvಸಚಿನ್ ತೆಂಡುಲ್ಕರ್ ಬ್ಯಾಟಿಂಗ್ ಶೈಲಿಯನ್ನು ಅನುಕರಣೆ ಮಾಡಿಕೊಂಡು ವಿಶ್ವ ಕ್ರಿಕೆಟ್ ನಲ್ಲಿ ಅಪಾಯಕಾರಿ ಬ್ಯಾಟ್ಸ್ ಮೆನ್ ಎಂಬ ಖ್ಯಾತಿ ಪಡೆದವರು ವೀರೇಂದ್ರ ಸೆಹ್ವಾಗ್.
ಪಂದ್ಯದ ಮೊದಲ ಎಸೆತವನ್ನೇ ಬೌಂಡರಿ ಅಥವಾ ಸಿಕ್ಸರ್ ಗಟ್ಟಬೇಕು. ಶತಕದಂಚಿನಲ್ಲಿ ಸಿಕ್ಸರ್ ಬಾರಿಸಿ ಸಂಭ್ರಮ ಆಚರಿಸಿಕೊಳ್ಳಬೇಕು ಅನ್ನೋ ಮನೋಭಾವನ್ನು ಸೆಹ್ವಾಗ್ ಹೊಂದಿದ್ದರು. ಈ ಧೈರ್ಯವನ್ನು ಹಲವು ಬಾರಿ ಮಾಡಿ ಯಶ ಕೂಡ ಸಾಧಿಸಿದ್ದರು.
ಹೌದು, ಸೆಹ್ವಾಗ್ ಬ್ಯಾಟಿಂಗ್ ಶೈಲಿಯಲ್ಲಿ ಸಚಿನ್ ತೆಂಡುಲ್ಕರ್ ಅವರ ಛಾಯೆ ಎದ್ದು ಕಾಣುತ್ತಿದೆ. ಅದರಲ್ಲಿ ಎರಡು ಮಾತಿಲ್ಲ. ಆದ್ರೆ ಸಚಿನ್ ನಂತೆ ನಾನು ಬ್ಯಾಟಿಂಗ್ ಮಾಡಲು ಸೆಹ್ವಾಗ್ ಸಾಕಷ್ಟು ಕಠಿಣ ಶ್ರಮ ಪಟ್ಟಿದ್ದಾರೆ.
ಇದೀಗ ಸೆಹ್ವಾಗ್ ತನ್ನ ಬ್ಯಾಟಿಂಗ್ ಶೈಲಿಯ ಗುಟ್ಟನ್ನು ಬಹಿರಂಗ ಪಡಿಸಿದ್ದಾರೆ. ಸೆಹ್ವಾಗ್ ತನ್ನ 12ನೇ ವಯಸ್ಸಿನಲ್ಲಿ ಸಚಿನ್ ಬ್ಯಾಟಿಂಗ್ ಶೈಲಿಯನ್ನು ಅನುಕರಣೆ ಮಾಡಲು ಶುರು ಮಾಡಿದ್ದರು. ಬಳಿಕ ಎಂಟು ವರ್ಷಗಳ ಬಳಿಕ ಸಚಿನ್ ಜೊತೆ ಆಡುವ ಅವಕಾಶವನ್ನು ಪಡೆದುಕೊಂಡಿದ್ದಲ್ಲದೆ ಸಚಿನ್ ಜೊತೆ ಟೀಮ್ ಇಂಡಿಯಾದ ಪರ ಇನಿಂಗ್ಸ್ ಕೂಡ ಶುರು ಮಾಡಿದ್ದರು.
ಸೆಹ್ವಾಗ್ ಹೇಳುವಂತೆ, 1992ರ ವಿಶ್ವಕಪ್ ಟೂರ್ನಿಯಲ್ಲಿ ಸಚಿನ್ ಅವರ ಬ್ಯಾಟಿಂಗ್ ಶೈಲಿಯನ್ನು ನೋಡಿ Virender Sehwag and Sachin Tendulkar saakshatvತಾನು ಕೂಡ ಅವರಂತೆ ಬ್ಯಾಟಿಂಗ್ ಮಾಡಬೇಕು ಎಂಬ ಹಠಕ್ಕೆ ಬಿದ್ದರಂತೆ. ಸಚಿನ್ ಬ್ಯಾಟಿಂಗ್ ಮಾಡುತ್ತಿರುವ ವಿಡಿಯೋ ನೋಡುಕೊಂಡು ಅವರಂತೆ ಬ್ಯಾಟಿಂಗ್ ಮಾಡುವುದನ್ನು ಕಲಿತುಕೊಂಡೆ ಎಂದು ಸೆಹ್ವಾಗ್ ಹೇಳಿದ್ದಾರೆ.
ಬ್ಯಾಕ್ ಫುಟ್ ಹೊಡೆತಗಳು, ಸ್ಟ್ರೈಟ್ ಡ್ರೈವ್ ಸಚಿನ್ ಅವರ ಸಿಗ್ನೇಚರ್ ಶಾಟ್ಸ್ ಗಳು. ಅದೇ ರೀತಿಯಲ್ಲಿ ಸೆಹ್ವಾಗ್ ಕೂಡ ಬ್ಯಾಟಿಂಗ್ ಮಾಡುತ್ತಿದ್ದರು.
ಆಗಿನ ಕಾಲದಲ್ಲಿ ನಮಗೆ ವಿಡಿಯೋಗಳು ಹೆಚ್ಚು ಸಿಗುತ್ತಿರಲಿಲ್ಲ. ಆದ್ರೆ ಈಗ ಹಾಗಲ್ಲ. ಹಳೆಯ ವಿಡಿಯೋಗಳು ಯೂಟ್ಯೂಬ್ ನಲ್ಲಿ ಸಿಗುತ್ತವೆ. ಆದ್ರೆ ನಮ್ಮ ಕಾಲದಲ್ಲಿ ವಿಡಿಯೋಗಳು ಸಿಗೋದು ಕಷ್ಟವಾಗಿರುತ್ತಿತ್ತು. ಈಗಿನಂತೆ ನಮ್ಮ ಕಾಲದಲ್ಲಿ ಸೌಲಭ್ಯಗಳು ಇರುತ್ತಿದ್ರೆ ಬಹುಶಃ ನಾನು ಟೀಮ್ ಇಂಡಿಯಾಗೆ ಇನ್ನೂ ಬೇಗವಾಗಿ ಎಂಟ್ರಿಯಾಗುತ್ತಿದೆ ಎಂದು ಸೆಹ್ವಾಗ್ ಹೇಳಿದ್ದಾರೆ.
ಇನ್ನು ಬ್ಯಾಟ್ಸ್ ಮೆನ್ ಗಳಿಗೆ ಮಾನಸಿಕ ಗಟ್ಟಿತನವಿರಬೇಕು. ಮಾನಸಿಕವಾಗಿ ಸ್ಟ್ರಾಂಗ್ ಆಗಿದ್ರೆ ನೀವು ಯಶ ಸಾಧಿಸಬಹುದು. ಜೊತೆಗೆ ಬ್ಯಾಟಿಂಗ್ ಕೌಶಲ್ಯಗಳು ಇರಬೇಕು ಎನ್ನುವ ಸೆಹ್ವಾಗ್, ತನ್ನ ಕ್ರಿಕೆಟ್ ಬದುಕಿನಲ್ಲಿ ಸಂಜಯ್ ಬಂಗಾರ್ ಅವರು ಸಾಕಷ್ಟು ಸಹಾಯ ಮಾಡಿದ್ದಾರೆ. ಸಂಜಯ್ ಬಂಗಾರ್ ಅವರು ಟೀಮ್ ಇಂಡಿಯಾದ ಬ್ಯಾಟಿಂಗ್ ಕೋಚ್ ಕೂಡ ಆಗಿದ್ದರು. ಪ್ರತಿ ಬಾರಿಯೂ ಮಾನಸಿಕವಾಗಿ ಗಟ್ಟಿಯಾಗಿಬೇಕು. ಜೊತೆಗೆ ಬ್ಯಾಟಿಂಗ್ ಕೌಶಲ್ಯಗಳು ಇರಬೇಕು ಎಂದು ಹೇಳುತ್ತಿದ್ದರು ಎಂದು ಸೆಹ್ವಾಗ್ ಹೇಳಿಕೊಂಡಿದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd