IPL 2022 | ಈ ಸೀಸನ್ ನಲ್ಲಿ ಅತಿ ಹೆಚ್ಚು ತಪ್ಪುಗಳನ್ನ ಮಾಡಿದ ವಿರಾಟ್
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆರಂಭಿಕ ಆಟಗಾರ ಹಾಗೂ ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಐಪಿಎಲ್-2022ರಲ್ಲಿ ಅತ್ಯಂತ ಕೆಟ್ಟ ಪ್ರದರ್ಶನ ನೀಡಿದ್ದಾರೆ.
ಕ್ಯಾಪ್ಟನ್ಸಿ ಒತ್ತಡದಿಂದ ಕೆಳಗಿಳಿದ ಬಳಿಕ ವಿರಾಟ್ ಕೊಹ್ಲಿ ಮತ್ತಷ್ಟು ಆಕ್ರಮಣಕಾರಿಯಾಗಿ ಆಡುತ್ತಾರೆ ಅಂತಾ ಎಲ್ಲರೂ ಅಂದುಕೊಂಡಿದ್ದರು.
ಆದ್ರೆ ಅದು ಆಗಲೇ ಇಲ್ಲ. ಮೊದಲು ಒನ್ ಡೌನ್ ಮತ್ತು ನಂತರ ಆರಂಭಿಕರಾಗಿ ಬಂದರೂ ಯಾವುದೇ ಪ್ರಯೋಜನೆ ಆಗಲಿಲ್ಲ.
ಅದರಲ್ಲೂ ಕ್ವಾಲಿಫೈಯರ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮೊದಲ ಓವರ್ ನ ಕೊನೆಯ ಎಸೆತದಲ್ಲಿ ಸಿಕ್ಸರ್ ಸಿಡಿಸಿದರು. ಇದರಿಂದ ಅಭಿಮಾನಿಗಳು ಖುಷ್ ಆಗಿದ್ದರು.
ಆದ್ರೆ ಆ ಖುಷಿ ಕೆಲವೇ ನಿಮಿಷಗಳಲ್ಲಿ ಮಾಯವಾಯ್ತು. ಪ್ರಸಿದ್ಧ್ ಕೃಷ್ಣ ಬೌಲಿಂಗ್ ನಲ್ಲಿ ವಿರಾಟ್ ಕೊಹ್ಲಿ ಸಂಜು ಸ್ಯಾಮ್ಸನ್ ಗೆ ಕ್ಯಾಚ್ ನೀಡಿ ನಿರ್ಗಮಿಸಿದರು.

ಕೊಹ್ಲಿ ಈ ಋತುವಿನಲ್ಲಿ 16 ಇನ್ನಿಂಗ್ಸ್‌ಗಳಲ್ಲಿ 341 ರನ್ ಗಳಿಸಿದ್ದಾರೆ. ಗರಿಷ್ಠ ಸ್ಕೋರ್ 73. ಎರಡು ಅರ್ಧ ಶತಕಗಳಿವೆ.
ಐಪಿಎಲ್ ನಲ್ಲಿ ರನ್ ಶಿಖರವನ್ನು ಕಟ್ಟುತ್ತಿದ್ದ ವಿರಾಟ್ ಕೊಹ್ಲಿ, ಈ ಸೀಸನ್ ನಲ್ಲಿ ಘನಘೋರ ವೈಫಲ್ಯ ಅನುಭವಿಸಿರೋದು ಅಭಿಮಾನಿಗಳಿಗೆ ಚೇತರಿಸಿಕೊಳ್ಳಲಾಗುತ್ತಿಲ್ಲ.
ಕೊಹ್ಲಿಯ ಈ ಪ್ರದರ್ಶನದ ಬಗ್ಗೆ ಟೀಂ ಇಂಡಿಯಾದ ಮಾಜಿ ಆರಂಭಿಕ ವೀರೇಂದ್ರ ಸೆಹ್ವಾಗ್ ಮಾತನಾಡಿದ್ದು, ವಿರಾಟ್ ಕೊಹ್ಲಿ ಒಟ್ಟಾರೆ ಐಪಿಎಲ್ ಕೆರಿಯರ್ ನಲ್ಲಿ ಈ ಸೀಸನ್‌ನಲ್ಲಿ ಹೆಚ್ಚು ತಪ್ಪುಗಳನ್ನು ಮಾಡಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಫಾರ್ಮ್‌ನಲ್ಲಿ ಇಲ್ಲದಿರುವಾಗ ಪ್ರತಿ ಚೆಂಡನ್ನು ಎಚ್ಚರಿಕೆಯಿಂದ ಆಡುತ್ತಾ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಬೇಕು. ಒಮ್ಮೆ ಸೆಟ್ ಆದ್ರೆ ನಿಮ್ಮದೇಯಾದ ಶೈಲಿಯಲ್ಲಿ ಮುನ್ನುಗ್ಗಬೇಕು ಎಂದಿದ್ದಾರೆ.








