ಅಕ್ಕಿ ಮತ್ತು ಗೋಧಿ ಬೆಲೆಗಳನ್ನು ನಿಯಂತ್ರಿಸಲು ಹಾಗೂ ದೇಶೀಯ ಲಭ್ಯತೆ ಹೆಚ್ಚಿಸಲು ಸರ್ಕಾರವು ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಈಗ ಈ ಆಹಾರ ಧಾನ್ಯಗಳನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ನಿರ್ಧರಿಸಿದೆ.
ಸದ್ಯ ಸರ್ಕಾರವು 50 ಲಕ್ಷ ಟನ್ ಗೋಧಿ ಮತ್ತು 25 ಲಕ್ಷ ಟನ್ ಅಕ್ಕಿಯನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಮುಂದಾಗಿದೆ. ಮುಕ್ತ ಮಾರುಕಟ್ಟೆಯಲ್ಲಿ ಅಕ್ಕಿ ಬೆಲೆ ಇಳಿಸಿ ಕೆ.ಜಿಗೆ 29 ರೂ.ನಂತೆ ಮಾರಾಟ ಮಾಡಲು ಸರ್ಕಾರ ನಿರ್ಧರಿಸಿದೆ. ಗೋಧಿ ಆಮದು ಸುಂಕವನ್ನು ಕಡಿತಗೊಳಿಸುವ ಸಾಧ್ಯತೆ ಕುರಿತು ಕ್ರಮ ಕೈಗೊಳ್ಳುವುದಾಗಿ ಕೂಡ ಸರ್ಕಾರ ಹೇಳಿದೆ.
ಒಎಂಎಸ್ಎಸ್ ಮೂಲಕ 50 ಲಕ್ಷ ಟನ್ ಗೋಧಿ ಹಾಗೂ 25 ಲಕ್ಷ ಟನ್ ಅಕ್ಕಿಯನ್ನು ಮುಕ್ತ ಮಾರುಕಟ್ಟೆಗೆ ತರಲು ಸರ್ಕಾರ ನಿರ್ಧರಿಸಿದೆ. ಅಕ್ಕಿ ಬೆಲೆಯನ್ನು ಕೆಜಿಗೆ 2 ರೂ.ನಂತೆ ಇಳಿಸಿ 31 ರೂ. ಬದಲು 29 ರೂ. ನಿಗದಿ ಪಡಿಸಲಾಗಿದೆ. ಗೋಧಿ ಆಮದು ಸುಂಕವನ್ನು ಕಡಿತಗೊಳಿಸುವ ಸಾಧ್ಯತೆಯ ಕುರಿತು ಕೂಡಾ ಸರ್ಕಾರ ತಿಳಿಸಿದೆ.








