ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆಯ ವಾತಾವರಣದ ನಡುವೆ, ಪಾಕಿಸ್ತಾನದ ಮಾಜಿ ಕ್ರಿಕೆಟ್ ಮಂಡಳಿ (ಪಿಸಿಬಿ) ಮುಖ್ಯಸ್ಥ ಹಾಗೂ ರಾಜಕೀಯ ವಿಶ್ಲೇಷಕ ನಜಮ್ ಸೇಥಿ ನೀಡಿರುವ ವಿವಾದಿತ ಹೇಳಿಕೆ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ಭಾರತದ ರಾಜತಾಂತ್ರಿಕ ಪ್ರಭಾವವನ್ನು ತಗ್ಗಿಸಲು ನೀಡಿರುವ ಸಲಹೆ ಭಾರೀ ವಿವಾದಕ್ಕೆ ಕಾರಣವಾಗಿದೆ.
ಅಮೆರಿಕದ ರಾಜತಾಂತ್ರಿಕ ವಲಯದಲ್ಲಿ ಭಾರತದ ಬಲಿಷ್ಠತೆ ಬಗ್ಗೆ ಮಾತನಾಡುತ್ತಾ ನಜಮ್ ಸೇಥಿ,
ನಾವು ಅಮೆರಿಕದಲ್ಲಿ ಭಾರತದ ಪ್ರಭಾವವನ್ನು ಕಡಿಮೆ ಮಾಡಲು ಬಯಸಿದರೆ, ಪಾಕ್ ಸುಂದರ ಮಹಿಳೆಯರನ್ನು ಪಬ್‌ಗಳಿಗೆ ಕಳುಹಿಸಬೇಕು. ಅದು ಅಲ್ಲಿನ ಸಂಸ್ಕೃತಿಗೆ ಹೊಂದಿಕೊಳ್ಳುವ ನಿಜವಾದ ರಾಜತಾಂತ್ರಿಕತೆ. ನಮ್ಮ ರಾಜತಾಂತ್ರಿಕರು ಈಗಿರುವ ಸ್ಥಿತಿಗೆ ಸ್ಪರ್ಧಾತ್ಮಕವಾಗಿ ತಡೆ ನೀಡಲು ಸಾಕಷ್ಟು ಸಮರ್ಥವಿಲ್ಲ ಎಂದು ಅವರು ಹೇಳಿದ್ದಾರೆ.
ಸೇಥಿ ತಮ್ಮ ಹೇಳಿಕೆಯಲ್ಲಿ ಭಾರತದ ರಾಜತಾಂತ್ರಿಕ ಶಕ್ತಿಯನ್ನೇ ಪರೋಕ್ಷವಾಗಿ ಪ್ರಶಂಸಿಸಿರುವಂತೆ ತೋರುತ್ತಿದ್ದು, ಅವರು ಸ್ಪಷ್ಟಪಡಿಸಿದಂತೆ, ಪಾಕಿಸ್ತಾನವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚು ಸಮರ್ಥವಾಗಿ ಅಥವಾ ಪರಿಣಾಮಕಾರಿಯಾಗಿ ಪ್ರಭಾವ ಬೀರುವಲ್ಲಿ ಹಿಂದೆ ಉಳಿದಿದೆ. ಅದರ ಪರಿಹಾರವಾಗಿ ಅವರು ಕೊಟ್ಟ ಸಲಹೆ ಎಲ್ಲರಿಗೂ ಶಾಕ್ ಮೂಡಿಸಿದೆ.
ಸಮಾಜದಲ್ಲಿ ತೀವ್ರ ಆಕ್ರೋಶ:
ಈ ಹೇಳಿಕೆಗೆ ಪಾಕಿಸ್ತಾನದಲ್ಲೇ ವಿರೋಧ ವ್ಯಕ್ತವಾಗಿದೆ. ಸಾಮಾಜಿಕ ಕಾರ್ಯಕರ್ತರು, ಮಹಿಳಾ ಹಕ್ಕುಗಳ ಸಂಘಟನೆಗಳು ಮತ್ತು ಸಾಮಾನ್ಯ ನಾಗರಿಕರು ಸೇಥಿಯ ಈ ಅಭಿಪ್ರಾಯವನ್ನು ಖಂಡಿಸುತ್ತಿದ್ದಾರೆ. ಹೆಣ್ಣುಮಕ್ಕಳನ್ನು ರಾಜತಾಂತ್ರಿಕ ಸಾಧನಗಳಾಗಿ ಬಳಸುವುದು ನಾಚಿಕೆಗೇಡು ಎಂಬಂತ ಸಾರ್ವಜನಿಕ ಅಭಿಪ್ರಾಯ ವ್ಯಕ್ತವಾಗಿದೆ.
ನಜಮ್ ಸೇಥಿಯ ಈ ಹೇಳಿಕೆ ಪಾಕಿಸ್ತಾನದಲ್ಲಿ ಮಾತ್ರವಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಪಾಕಿಸ್ತಾನದ ಇಮೇಜ್‌ಗೆ ಧಕ್ಕೆಯಾಗಿದೆ. ರಾಜತಾಂತ್ರಿಕತೆಯ ಹೆಸರಿನಲ್ಲಿ ಇಂತಹ ವಿವಾದಿತ ಹಾಗೂ ಮಹಿಳಾವಿರೋಧಿ ಹೇಳಿಕೆಗಳು ನೀಡಿರುವುದು ವಿವಾದಕ್ಕೆ ಕಾರಣವಾಗಿದೆ. ಇದೀಗ, ಈ ಹೇಳಿಕೆಗೆ ಸರಕಾರ ಮತ್ತು ರಾಜಕೀಯ ನಾಯಕರು ಸ್ಪಷ್ಟನೆ ನೀಡಬೇಕು ಎಂಬ ಒತ್ತಡವೂ ಹೆಚ್ಚಾಗಿದೆ.








