ಚೆನ್ನೈ: ತಮಿಳು ಚಿತ್ರೋದ್ಯಮದ ಹಿರಿಯ ನಟ ಹಾಗೂ ಡಿಎಂಡಿಕೆ ನಾಯಕ ವಿಜಯಕಾಂತ್(71) ಅವರು ವಿಧಿವಶರಾಗಿದ್ದಾರೆ ಎನ್ನಲಾಗಿದೆ.
ಕೊರೊನಾದಿಂದ ಬಳಲುತ್ತಿದ್ದ ಅವರು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕೊರೊನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರಿಗೆ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ವಿಜಯಕಾಂತ್ ಅವರು ಚಿತ್ರರಂಗದಿಂದ ತಮ್ಮ ವೃತ್ತಿ ಜೀವನ ಆರಂಭಿಸಿದ್ದರು.
ಅವರು ಸುಮಾರು 154 ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಆನಂರ ರಾಜಕೀಯ ರಂಗ ಪ್ರವೇಶ ಮಾಡಿದ್ದರು. ರಾಜಕೀಯ ರಂಗ ಪ್ರವೇಶ ಮಾಡಿದ ಅವರು DMDK ಪಕ್ಷ ಸ್ಥಾಪಿಸಿದರು. ವಿರುಧಾಚಲಂ ಮತ್ತು ರಿಷಿವಂಡಿಯಂ ವಿಧಾನಸಭಾ ಕ್ಷೇತ್ರಗಳಲ್ಲಿ ಜಯ ಸಾಧಿಸಿದ್ದರು. ಆನಂತರ 2011 ರಿಂದ 2016 ರವರೆಗೆ ತಮಿಳುನಾಡು ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗುತ್ತಿದ್ದಂತೆ ರಾಜಕೀಯದಲ್ಲಿ ಅವರು ಉತ್ತುಂಗ ಸ್ಥಾನಕ್ಕೆ ಏರಿದರು. ಆದರೆ, ಇತ್ತೀಚೆಗೆ ಅವರ ಆರೋಗ್ಯ ಕೈಕೊಟ್ಟಿದ್ದು, ರಾಜಕೀಯ ರಂಗದಿಂದ ದೂರಾಗುವಂತೆ ಮಾಡಿತ್ತು. ನಾಯಕನ ಅಗಲಿಕೆಗೆ ಚಿತ್ರರಂಗ, ರಾಜಕೀಯ ನಾಯಕರು, ಅಭಿಮಾನಿಗಳು ಶೋಕ ವ್ಯಕ್ತಪಡಿಸಿದ್ದಾರೆ.