ಷೇರು ಮಾರುಕಟ್ಟೆಯಲ್ಲಿ ಏರಿಕೆ ಕಂಡ ಸೆನ್ಸೆಕ್ಸ್ ಹಾಗೂ ನಿಫ್ಟಿ – ರಿಲಯನ್ಸ್ ನಿಂದ ಹೊಸ ದಾಖಲೆ
ಮುಂಬೈ, ಜುಲೈ 7: ಸೋಮವಾರ ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಹಾಗೂ ನಿಫ್ಟಿ ಏರಿಕೆ ದಾಖಲಿಸಿದೆ. ಸೆನ್ಸೆಕ್ಸ್ ಸೂಚ್ಯಂಕ 465.86 ಪಾಯಿಂಟ್ ಗಳ ಏರಿಕೆ ಕಂಡು, ದಿನಾಂತ್ಯಕ್ಕೆ 36,487.28 ಪಾಯಿಂಟ್ ನೊಂದಿಗೆ ವ್ಯವಹಾರ ಮುಗಿಸಿತು. ನಿಫ್ಟಿ 156.30 ಪಾಯಿಂಟ್ ಗಳ ಏರಿಕೆ ಕಂಡು ದಿನಾಂತ್ಯಕ್ಕೆ 10,763.65 ಪಾಯಿಂಟ್ ನೊಂದಿಗೆ ವ್ಯವಹಾರ ಕೊನೆಗೊಳಿಸಿತು. ಬ್ಯಾಂಕ್ ನಿಫ್ಟಿ 346.60 ಪಾಯಿಂಟ್ ಏರಿಕೆ ಕಂಡಿತು.
ಕಲ್ಪತರು ಪವರ್ ಟ್ರಾನ್ಸ್ಮಿಷನ್ ಷೇರು ಮೌಲ್ಯದಲ್ಲಿ 25 ಪ್ರತಿಶತದಷ್ಟು ಏರಿಕೆ ಕಂಡಿದ್ದು ದಿನದ ಅಂತ್ಯಕ್ಕೆ 257 ರೂಪಾಯಿಯಲ್ಲಿ ವ್ಯವಹಾರ ನಡೆಸಿದೆ. ಇನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 180ರ ಆಸುಪಾಸಿನಲ್ಲೇ ಇದ್ದರೆ , ಕರ್ನಾಟಕದ ಹೆಮ್ಮೆಯ ಸಂಸ್ಥೆ ವಿ ಆರ್ ಎಲ್ 160ರ ಆಸುಪಾಸಿನಲ್ಲಿ ವ್ಯವಹಾರ ನಡೆಸುತ್ತಿದೆ.

ರಿಲಯನ್ಸ್ ಇಂಡಸ್ಟ್ರೀಸ್ ವಾರ್ಷಿಕ ಗರಿಷ್ಠ ಬೆಲೆಯಾದ 1858 ರುಪಾಯಿಯನ್ನು ತಲುಪಿ, ದಿನಾಂತ್ಯಕ್ಕೆ 1851.80 ರುಪಾಯಿಗೆ ವ್ಯವಹಾರ ಮುಗಿಸಿತು. ಅಷ್ಟೇ ಅಲ್ಲ ಹನ್ನೆರಡು ಲಕ್ಷ ಕೋಟಿ ರುಪಾಯಿ ಮಾರುಕಟ್ಟೆ ಮೌಲ್ಯವನ್ನು ಮುಟ್ಟಿದ ಮೊದಲ ಭಾರತೀಯ ಕಂಪೆನಿ ಎಂಬ ದಾಖಲೆಯನ್ನು ಬರೆದಿದೆ.
ನಿಫ್ಟಿಯಲ್ಲಿ ಏರಿಕೆ ದಾಖಲಿಸಿದ ಪ್ರಮುಖ ಐದು ಕಂಪೆನಿ ಷೇರುಗಳು
ಮಹೀಂದ್ರಾ ಅಂಡ್ ಮಹೀಂದ್ರಾ
ಬಜಾಜ್ ಫೈನಾನ್ಸ್
ಹಿಂಡಾಲ್ಕೋ
ಟಾಟಾ ಮೋಟಾರ್ಸ್
ರಿಲಯನ್ಸ್
ಸೆನ್ಸೆಕ್ಸ್ ನಲ್ಲಿ ಏರಿಕೆ ದಾಖಲಿಸಿದ ಪ್ರಮುಖ ಐದು ಕಂಪೆನಿ ಷೇರುಗಳು
ಮಹೀಂದ್ರಾ ಅಂಡ್ ಮಹೀಂದ್ರಾ
ಬಜಾಜ್ ಫೈನಾನ್ಸ್
ರಿಲಯನ್ಸ್
ಮಾರುತಿ ಸುಜುಕಿ
ಟಿಸಿಎಸ್








