ವೃತ್ತಿಪರ ಟೆನಿಸ್ ಗೆ ನಿವೃತ್ತಿ ಘೋಷಿಸಿದ ಸೆರೆನಾ ವಿಲಿಯಮ್ಸ್… – Serena Williams tennis retirement
23 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದಿರುವ ಅಮೆರಿಕದ ದಂತಕಥೆ ಸೆರೆನಾ ವಿಲಿಯಮ್ಸ್ ವೃತ್ತಿಪರ ಟೆನಿಸ್ ಗೆ ನಿವೃತ್ತಿ ಘೋಷಿಸಿದ್ದಾರೆ. ವೋಗ್ ಮ್ಯಾಗಜೀನ್ ಗೆ ಬರೆದಿರುವ ಲೇಖನವೊಂದರಲ್ಲಿ ತನ್ನ ನಿವೃತ್ತಿಯನ್ನು ಘೋಷಿಸಿದ್ದಾರೆ.
40 ವರ್ಷದ ಟೆನಿಸ್ ತಾರೆ ತನ್ನ ಟೆನಿಸ್ ವೃತ್ತಿಜೀವನದಿಂದ ನಿವೃತ್ತಿ ಕೈಗೊಳ್ಳುವು ಕುರಿತು ವಿವರಿಸಿದ್ದಾರೆ.ತನ್ನ ಕುಟುಂಬವನ್ನು ಮತ್ತಷ್ಟು ವಿಸ್ತರಿಸುವ ಕುಟುಂಬಕ್ಕೆ ಸಮಯ ಮೀಸಲಿಡುವ ಉದ್ದೇಶ ನಿವೃತ್ತಿಗೆ ಪ್ರಮುಖ ಕಾರಣ ಎಂದು ಹೇಳಿದ್ದಾರೆ.
ಈ ವರ್ಷದ ಆರಂಭದಲ್ಲಿ, ಅವರು ವಿಂಬಲ್ಡನ್‌ನಲ್ಲಿ ತಮ್ಮ ಮೊದಲ ಸಿಂಗಲ್ಸ್ ಪಂದ್ಯದಲ್ಲೇ ಹೊರಬಿದ್ದಿದ್ದರು. ಆದರೂ ಅವರು US ಓಪನ್ ನಂತರ ಅಧಿಕೃತವಾಗಿ ಆಟಕ್ಕೆ ವಿದಾಯ ಹೇಳಲಿದ್ದಾರೆ.
319 ವಾರಗಳ ಕಾಲ ಮಹಿಳಾ ಟೆನಿಸ್ ಅಸೋಸಿಯೇಷನ್ (WTA) ನಿಂದ ಸಿಂಗಲ್ಸ್ ವಿಶ್ವದ ನಂಬರ್ ಒನ್ ಶ್ರೇಯಾಂಕವನ್ನು ಹೊಂದಿರುವ ದಾಖಲೆ ಸೆರೆನಾ ವಿಲಿಯಂಸ್ ಹೆಸರಿನಲ್ಲಿದೆ. ಇದರಲ್ಲಿ 186 ಸತತ ವಾರಗಳ ಜಂಟಿ ದಾಖಲೆಯೂ ಸೇರಿದೆ. ಸೆರೆನಾ ವರ್ಷಾಂತ್ಯದ ನಂಬರ್ ಒನ್ ಐದು ಬಾರಿ ಮುಗಿಸಿದ್ದಾಳೆ. ಸೆರೆನಾ 23 ಗ್ರ್ಯಾಂಡ್ ಸ್ಲ್ಯಾಮ್ ಸಿಂಗಲ್ಸ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
Serena Williams announces her retirement from professional tennis








