ಖ್ಯಾತ ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ಗೆ ಕೋವಿಡ್ ಪಾಸಿಟೀವ್ ಪತ್ತೆ….

1 min read

ಖ್ಯಾತ ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ಗೆ ಕೋವಿಡ್ ಪಾಸಿಟೀವ್ ಪತ್ತೆ….

ಏಳು ಬಾರಿ ಬ್ಯಾಲನ್ ಡಿ’ಓರ್ ವಿಜೇತ ಲಿಯೋನೆಲ್ ಮೆಸ್ಸಿ ಸೋಮವಾರ ರಾತ್ರಿ ತಂಡದ ಫ್ರೆಂಚ್ ಪುಟ್ಬಾಲ್ ಕಪ್ ಪಂದ್ಯಕ್ಕೂ ಮೊದಲು ಕರೋನವೈರಸ್‌ಗೆ ತುತ್ತಾಗಿದ್ದಾರೆ.  ಪ್ಯಾರಿಸ್ ಸೇಂಟ್-ಜರ್ಮೈನ್ ತಂಡದ ನಾಲ್ವರು ಆಟಗಾರರಿಗೂ ಸಹ ಕರೋನ ಸೋಂಕು ತಗುಲಿದೆ.

“ಅವರು ನಮ್ಮ ವೈದ್ಯಕೀಯ ಸೇವೆಯೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದಾರೆ. ಅವರಿಗೆ ನೆಗೆಟಿವ್ ರಿಪೋರ್ಟ್ ವರದಿಯಾದಾಗ  ಫ್ರಾನ್ಸ್‌ಗೆ ಮರಳುತ್ತಾರೆ ಎಂದು  ”ಎಂದು ಪಿಎಸ್‌ಜಿ ಕೋಚ್ ಮಾರಿಸಿಯೊ ಪೊಚೆಟ್ಟಿನೊ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಶನಿವಾರ ರಾತ್ರಿ ಹೇಳಿಕೆಯಲ್ಲಿ ಒಬ್ಬ ಆಟಗಾರನಿಗೆ COVID-19 ಇದೆ ಎಂದು PSG ಹೇಳಿಕೆ ನೀಡಿತ್ತು. ಆ ಸಮಯದಲ್ಲಿ ಯಾರ ಹೆಸರು  ಬಹಿರಂಗಪಡಿಸಿರಲಿಲ್ಲ, ಆದರೆ ಭಾನುವಾರ ,ತಂಡದ ವೈದ್ಯಕೀಯ ಸುದ್ದಿಯಲ್ಲಿ  ಮೆಸ್ಸಿ, ಲೆಫ್ಟ್ ಬ್ಯಾಕ್ ಜುವಾನ್ ಬರ್ನಾಟ್, ಬ್ಯಾಕಪ್ ಗೋಲಿ ಸೆರ್ಗಿಯೊ ರಿಕೊ ಮತ್ತು 19 ವರ್ಷದ ಮಿಡ್‌ಫೀಲ್ಡರ್ ನಾಥನ್ ಬಿಟುಮಜಲಾ ಅವರು ಕೋವಿಡ್ ಪಾಸಿಟೀವ್ ಗೆ ಒಳಗಾಗಿದ್ದಾರೆ ಎಂದು ತಿಳಿಸಿದೆ.

ವರ್ಷದ ಮೊದಲ ದಿನವೆ ಇಸ್ರೆಲ್ – ಹಮಾಸ್ ನಡುವೆ ರಾಕೆಟ್ ದಾಳಿ

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd