ಅರುಣಚಲ ಪ್ರದೇಶದಲ್ಲಿ ಇಬ್ಬರು ಸೈನಿಕರು ನಾಪತ್ತೆ; ನದಿಯಲ್ಲಿ ಮುಳುಗಿರುವ ಶಂಕೆ…
ಅರುಣಾಚಲ ಪ್ರದೇಶದ 7 ನೇ ಗರ್ವಾಲ್ ರೈಫಲ್‌ನ ಇಬ್ಬರು ಸೈನಿಕರು ನಾಪತ್ತೆಯಾದ್ದಾರೆ. ಉತ್ತರಾಖಂಡದ ಮೂಲದ ಇಬ್ಬರು ಯೋಧರಾದ 7 ನೇ ಗರ್ವಾಲ್ ರೈಫಲ್ಸ್ ಪಡೆಯ ಹರೇಂದ್ರ ನೇಗಿ ಮತ್ತು ಪ್ರಕಾಶ್ ಸಿಂಗ್ ರಾಣಾ ಮೇ 28 ರಿಂದ ನಾಪತ್ತೆಯಾಗಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ.
ಸೈನಿಕರಿಬ್ಬರು 12 ದಿನಗಳಿಂದ ನಾಪತ್ತೆಯಾಗಿದ್ದು, ಅವರನ್ನು ಥಕ್ಲಾ ಪೋಸ್ಟ್‌ನಲ್ಲಿ ನಿಯೋಜಿಸಲಾಗಿತ್ತು. ನಾಪತ್ತೆಯಾಗಿರುವ ಸೈನಿಕನ ಬಗ್ಗೆ ಬೆಟಾಲಿಯನ್ ಅಧಿಕಾರಿಗಳು ಪತ್ನಿಗೆ ಮಾಹಿತಿ ನೀಡಿದ್ದಾರೆ.
ಯೋಧ ಪ್ರಕಾಶ್ ಸಿಂಗ್ ರಾಣಾ ಅವರ ಕುಟುಂಬ ಮೂಲತಃ ರುದ್ರಪ್ರಯಾಗದ ಉಖಿಮಠದವರು. ಪ್ರಸ್ತುತ ಅವರ ಕುಟುಂಬವು ಡೆಹ್ರಾಡೂನ್‌ನ ಸೈನಿಕ ಕಾಲೋನಿ ಅಂಬಿವಾಲಾದಲ್ಲಿ ವಾಸಿಸುತ್ತಿದೆ. ಬೆಟಾಲಿಯನ್ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಅವರ ಮನೆಗೆ ತೆರಳಿ ಯೋಧನ ಪತ್ನಿಗೆ ಧೈರ್ಯ ತುಂಬಿದ್ದಾರೆ.
ರಾಣಾ ಅವರ ಪತ್ನಿ ಮಮತಾ ರಾಣಾ ಅವರಿಗೆ ಮೇ 29 ರಂದು ಅವರ ಬೆಟಾಲಿಯನ್‌ನ ಸುಬೇದಾರ್ ಮೇಜರ್ ನಾಪತ್ತೆಯಾದ ಬಗ್ಗೆ ಮಾಹಿತಿ ನೀಡಿದರು. ಜೂನ್ 9 ರಂದು ಎರಡನೇ ಫೋನ್ ಕರೆ ಬಂದಿತು ಮತ್ತು ಇಬ್ಬರೂ ಸೈನಿಕರು ನದಿಯಲ್ಲಿ ಮುಳುಗಿದ್ದಾರೆ ಎಂದು ನಂಬಲಾಗಿದೆ ಎಂದು ಅವರು ನನಗೆ ಹೇಳಿದರು ಎಂದು ನೋವು ತೋಡಿಕೊಂಡಿದ್ದಾರೆ.
ಹರೇಂದ್ರ ನೇಗಿ ಅವರ ಪತ್ನಿ ಪೂನಂ ನೇಗಿ ಪ್ರತಿಕ್ರಿಯಿಸಿ, ಇಬ್ಬರು ಸೈನಿಕರು ನದಿಯ ಬಳಿ ಹೋಗಿದ್ದು ಯಾರಿಗೂ ತಿಳಿದಿಲ್ಲ ಎಂಬ ವಿಚಾರವನ್ನು ನಂಬಲು ನನಗೆ ಕಷ್ಟವಾಗುತ್ತಿದೆ ಎಂದು ಹೇಳಿದರು.
ಹರೇಂದ್ರ ನೇಗಿ ಮತ್ತು ಅವರ ಪತ್ನಿ ಪೂನಂ ನೇಗಿ ಅವರಿಗೆ ಒಂದು ವರ್ಷದ ಮಗುವಿದ್ದು, ಮದುವೆಯಾಗಿ ಕೇವಲ ಮೂರು ವರ್ಷಗಳಾಗಿವೆ.








