ಪರೀಕ್ಷೆಯ ನೆಪದಲ್ಲಿ ನರ್ಸಿಂಗ್ ವಿದ್ಯಾರ್ಥಿಗಳಿಗೆ ಲೈಂಗಿಕ ಕಿರುಕುಳ : ಕಾಮುಕನ ಬಂಧನ..!
ಜಾರ್ಖಂಡ್ : NGO ಒಂದರ ನಿರ್ದೇಶಕನೊಬ್ಬ ನರ್ಸಿಂಗ್ ವಿದ್ಯಾರ್ಥಿಗಳಿಗೆ ಸಹಿಷ್ಣುತೆಯ ಮಟ್ಟ ಪರೀಕ್ಷಿಸುವ ನೆಪದಲ್ಲಿ ಅಸಭ್ಯವಾಗಿ ದೇಹವನ್ನ ಮುಟ್ಟುತ್ತಾ ಲೈಂಗಿಕ ದೌರ್ಜನ್ಯ ನೀಡುತ್ತಿದ್ದ. ಇದೀಗ ಈ ಕಾಮುನನ್ನ ಜಾರ್ಖಂಡ್ ಪೊಲೀಸರು ಅರೆಸ್ಟ್ ಮಾಡಿ ಕಂಬಿ ಹಿಂದೆ ತಳ್ಳಿದ್ದಾರೆ.
ಸಿಡಿ ಪ್ರಕರಣ : ಯುವತಿಯ ಅಜ್ಜಿ ಮನೆಗೆ ನೋಟಿಸ್ ಅಂಟಿಸಿದ ಕಬ್ಬನ್ ಪಾರ್ಕ್ ಪೊಲೀಸ್..!
ಬಬ್ಲು ಅಲಿಯಾಸ್ ಪರ್ವೇಜ್ ಆಲಂ ಎಂಬಾತ NGO ಜಿಒ ಸಹಕಾರದ ನರ್ಸಿಂಗ್ ಇನ್ಸ್ಟಿ ಟ್ಯೂಟ್ ನ ವಿದ್ಯಾರ್ಥಿನಿಯರಿಗೆ ಈತ ಬಹಳ ಸಮಯದಿಂದಲೂ ಲೈಂಗಿಕ ಕಿರುಕುಳ ನೀಡುತ್ತಿದ್ದ. ಎಲ್ಲೆಲ್ಲೋ ಮುಟ್ಟುತ್ತಾ ಅವರ ಬಟ್ಟೆಯ ಒಳಗೆ ಕೈ ಹಾಕುತ್ತಿದ್ದ. ಹೀಗೆ ಬಹಳ ಸಮಯದಿಂದ ವಿದ್ಯಾರ್ಥಿನಿಯರಿಗೆ ಈತ ಲೈಂಗಿಕ ಕಿರುಕುಳ ನೀಡಿದ್ದಾನೆ ಎನ್ನಲಾಗಿದೆ.
ಜಾರ್ಖಂಡ್ ನ ಖುಂಟಿ ಜಿಲ್ಲೆಯ ಟಿರ್ಲಾದಲ್ಲಿರುವ ನರ್ಸಿಂಗ್ ಇನ್ಸ್ಟಿ ಟ್ಯೂಟ್ ನಲ್ಲಿ ಈ ಘಟನೆ ನಡೆದಿದೆ. ಈ ಕಾಮುಕನ ವಿರುದ್ಧ ಹಲವು ವಿದ್ಯಾರ್ಥಿನಿಯರು ಆರೋಪ ಮಾಡಿದ್ದಾರೆ. ಇತ್ತೀಚೆಗೆ ಈ ವಿದ್ಯಾರ್ಥಿನಿಯರು ಸಾಮಾಜಿಕ ಕಾರ್ಯಕರ್ತರೊಂದಿಗೆ ಈ ವಿಚಾರವನ್ನ ಹಂಚಿಕೊಂಡಿದ್ದಾರೆ.
ಪಾಕಿಸ್ತಾನದ ಕಾಲೇಜಿನಲ್ಲಿ ಯುವತಿ ಪ್ರಪೋಸ್ : ವಿದ್ಯಾರ್ಥಿಗಳ ಅಮಾನತು
ಮೌಖಿಕ ದೂರಿನ ಆಧಾರದ ಮೇಲೆ ಸಾಮಾಜಿಕ ಕಾರ್ಯಕರ್ತೆಯಾದ ಲಕ್ಷ್ಮಿ ಬಖ್ಲಾ ಎಂಬುವರು ರಾಜ್ಯಪಾಲರಿಗೆ ಪತ್ರ ಬರೆದಿದ್ದರು. ಪತ್ರವನ್ನು ಆಧರಿಸಿ ಬ್ಲಾಕ್ ಡೆವಲಪ್ಮೆಂಟ್ ಆಫೀಸರ್ ನೇತೃತ್ವದಲ್ಲಿ ತನಿಖೆ ನಡೆಸಿದ್ದು, ಸ್ಥಳೀಯ ಮಹಿಳಾ ಪೊಲೀಸ್ ಠಾಣೆಯ ತಂಡವೊಂದು ಭೇಟಿ ನೀಡಿ ಬಬ್ಲು ವಿರುದ್ಧ ಮೊಕದ್ದಮೆ ದಾಖಲಿಸಿ ಬಂಧಿಸಲಾಗಿದೆ.