ಸಿಡಿ ಪ್ರಕರಣ : ಯುವತಿಯ ಅಜ್ಜಿ ಮನೆಗೆ ನೋಟಿಸ್ ಅಂಟಿಸಿದ ಕಬ್ಬನ್ ಪಾರ್ಕ್ ಪೊಲೀಸ್..!
ವಿಜಯಪುರ: ಸಿಡಿ ಪ್ರಕರಣ ಯುವತಿ ವಿಡಿಯೋ ಬಿಡುಗಡೆ ಹಿನ್ನೆಲೆ ಆಕೆಯ ಮೂಲ ಕಂಡುಹಿಡಿಯಲು ಕಬ್ಬನಪಾರ್ಕ್ ಪೊಲೀಸರ ತಂಡ ವಿಜಯಪುರಕ್ಕೆ ಆಗಮಿಸಿದೆ. ತನಿಖೆಯ ಜಾಡು ಹಿಡಿದು ವಿಜಯಪುರ ಜಿಲ್ಲೆ ನಿಡಗುಂದಿ ಪಟ್ಟಣಕ್ಕೆ ಪೊಲೀಸರ ತಂಡ ಭೇಟಿ ನೀಡಿದೆ.
ಇನ್ನೂ ನಿಡಗುಂದಿ ಪಟ್ಟಣದಲ್ಲಿರುವ ಯುವತಿಯ ಅಜ್ಜಿ ಮನೆಗೂ ಬಂದು ತನಿಖೆ ನಡೆಸಿ ಮಾಹಿತಿ ಕಲೆಹಾಕಿದ್ದಾರೆ.
ಪಾಕಿಸ್ತಾನದ ಕಾಲೇಜಿನಲ್ಲಿ ಯುವತಿ ಪ್ರಪೋಸ್ : ವಿದ್ಯಾರ್ಥಿಗಳ ಅಮಾನತು
ಯುವತಿ ಬಾಲ್ಯದಲ್ಲಿ ಅದೇ ಮನೆಯಲ್ಲಿ ಅಜ್ಜಿ ಜೊತೆ ವಾಸವಾಗಿದ್ದಳು ಎನ್ನಲಾಗಿದೆ. ಹೀಗಾಗಿ ಇಲ್ಲಿಯೂ ಲಿಂಕ್ ಇರುವ ಕಾರಣದಿಂದ ಬೆಂಗಳೂರಿನಿಂದ ಪೊಲೀಸ್ ಟೀಂ ಇಲ್ಲಿಗೆ ಬಂದು ಪರಿಶೀಲನೆ ನಡೆಸಿದ್ದಾರೆ. ಅಷ್ಟೇ ಅಲ್ದೇ ಯುವತಿಯ ಅಜ್ಜಿ ಮನೆಗೆ ನೊಟೀಸ್ ಅಂಟಿಸಿದ್ದಾರೆ. ಏನಾದ್ರೂ ವಿಚಾರ ತಿಳಿದರೆ ಈ ನೋಟಿಸ್ ನಲ್ಲಿರುವ ಫೋನ್ ನಂಬರ್ ಅಥವಾ ಈಮೇಲ್ ಐಡಿ ಸಂಪರ್ಕಿಸುವಂತೆ ಸೂಚನೆ ನೀಡಿದ್ದಾರೆ.