ಲೈಂಗಿಕ ಕಿರುಕುಳ : ವಿಧಾನಸಭಾ ಚುನಾವಣೆಯಿಂದ ಹೊರನಡೆದ ಕೇರಳದ ಮೊದಲ “ಮಂಗಳಮುಖಿ” ಅಭ್ಯರ್ಥಿ

1 min read

ಲೈಂಗಿಕ ಕಿರುಕುಳ : ವಿಧಾನಸಭಾ ಚುನಾವಣೆಯಿಂದ ಹೊರನಡೆದ ಕೇರಳದ ಮೊದಲ “ಮಂಗಳಮುಖಿ” ಅಭ್ಯರ್ಥಿ

ಕೇರಳ ವಿಧಾನಸಭಾ ಚುನಾವಣೆಗೆ DASP ಪಾರ್ಟಿಯಿಂದ ಸ್ಪರ್ಧಿಸಿದ್ದ ಮೊದಲ ಟ್ರಾನ್ಸ್ ಜೆಂಡರ್ ಅಭ್ಯರ್ಥಿ ಯಾಗಿದ್ದ ಅನನ್ಯಾ ಕುಮಾರಿ ಅಲೆಕ್ಸ್ ಅವರು ಪಕ್ಷದಿಂದ ಹೊರ ನಡೆದಿದ್ದಾರೆ. ಅಲ್ಲದೇ ಪಕ್ಷದ ಸದಸ್ಯರ ವಿರುದ್ಧ ತಿಂಗ ತಾರತಮ್ಯ , ಕಿರುಕುಳದ ಆರೋಪ ಮಾಡಿ ಆಕ್ರೋಶ ಹೊರಹಾಕಿದ್ದಾರೆ.

ಮಲಪ್ಪುರಂ ಜಿಲ್ಲೆಯ ವೆಂಗರಾ ಕ್ಷೇತ್ರದಿಂದ  ನಾಮಪತ್ರ ಸಲ್ಲಿಸಿದ್ದ ಅನನ್ಯಾ ಕುಮಾರಿ ಅಲೆಕ್ಸ್  ಪಕ್ಷದ ಸದಸ್ಯರ ಸದಸ್ಯರ ವಿರುದ್ಧ ಲಿಂಗ ತಾರತಮ್ಯ ಮತ್ತು ಕಿರುಕುಳದ ದೂರು ದಾಖಲಿಸಿದ್ದಾರೆ. ಅಷ್ಟೇ ಅಲ್ಲದೇ ಇಂತಹ ಪಕ್ಷದ ಪರ ಮತಚಲಾಯಿಸಿದಂತೆ ಮತದಾರರಲ್ಲಿ ಮನವಿ ಸಹ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಹೇಳಿಕೊಂಡಿರುವ ಅನನ್ಯಾ ಅವರು ನಾನು ಡೆಮಾಕ್ರಟಿಕ್ ಸೋಷಿಯಲ್ ಜಸ್ಟೀಸ್ ಪಾರ್ಟಿಯಿಂದ ಲಿಂಗ ಕಳಂಕ, ಲಿಂಗ ತಾರತಮ್ಯ ಮತ್ತು ಲೈಂಗಿಕ ಕಿರುಕುಳವನ್ನು ಎದುರಿಸುತ್ತಿದೆ. ಈ  ಕಾರಣದಿಂದಾಗಿ ಚುನಾವಣಾ ಕಣದಿಂದ ನಾನು ಹಿಂದೆ ಸರಿದಿದ್ದೇನೆ. ಹೆಚ್ಚಿನ ಪ್ರಚಾರ ಗಿಟ್ಟಿಸಿಕೊಳ್ಳಲು ಈ ಪಕ್ಷದ ಸದಸ್ಯೆರು ನನ್ನನ್ನು ಚುನಾವಣಾ ಚಟುವಟಿಕೆಗಳಲ್ಲಿ ಬಳಸಿಕೊಂಡಿದ್ದರು.  ಯಾರು ಸಹ ಈ ಪಕ್ಷಕ್ಕೆ ಮತ ಹಾಕಬೇಡಿ ಎಂದು  ಮನವಿ ಮಾಡಿಕೊಂಡಿದ್ದಾರೆ.

ಅಷ್ಟೇ ಅಲ್ದೇ ಪಕ್ಷದ ಸದಸ್ಯರು ನನಗೆ ಇಷ್ಟವಿಲ್ಲದೇ ಇದ್ದರೂ ಒತ್ತಾಯಪೂರ್ವಕವಾಗಿ ವೆಂಗರಾ ಕ್ಷೇತ್ರದ ಅಭ್ಯರ್ಥಿಗಳ ವಿರುದ್ಧ ಮಾತನಾಡಲು ಒತ್ತಾಯಿಸಿದ್ದರು, ಅಲ್ದೇ ನನ್ನನ್ನು ‘ಬುರ್ಖಾ’ ಧರಿಸುವಂತೆ ಒತ್ತಡ ಕೂಡ ಹೇರಿದ್ದರು. ನಾನು ಇದನ್ನ ನಿರಾಕರಿಸಿದ್ದು, ಅವರ ಕಿರುಕುಳದಿಂದಾಗಿ ಪಕ್ಷದಿಂದ ಹೊರನಡೆದಿದ್ದೇನೆ ಎಂದು ಕಿಡಿಕಾರಿದ್ದಾರೆ.

ಪಾಷಾಣವಾಯ್ತು ಕಲ್ಲಂಗಡಿ | ಹೈದರಾಬಾದ್ ನಲ್ಲಿ ಇಬ್ಬರು ಸಾವು

ಪಬ್ ಜೀ ಆಡಲು ಮನೆಯಿಂದ ಹೊರ ಹೋದ 12 ರ ಬಾಲಕನ ಬರ್ಬರ ಹತ್ಯೆ..!

ಫೇಸ್ ಬುಕ್ ನಿಜವಾಗ್ಲೂ ಎಷ್ಟು ಸೇಫ್..?

ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದವರ ಹೆಸರುಗಳು ಸಾರಿಗೆ ಇಲಾಖೆ ವೆಬ್ ಸೈಟ್ ಗಳಲ್ಲಿ ಪ್ರಕಟ..!

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd