ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ಗೆ ಎಂಟ್ರಿಕೊಟ್ಟ ಭಾರತದ ಶಫಾಲಿ ವರ್ಮಾ..!
ಶಫಾಲಿ ವರ್ಮಾ..ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಭರವಸೆಯ ಬೆಳಕು. ವಿಶ್ವ ಮಹಿಳಾ ಕ್ರಿಕೆಟ್ ನಲ್ಲಿ ತನ್ನ ಅಬ್ಬರದ ಬ್ಯಾಟಿಂಗ್ ಮೂಲಕ ಗಮನ ಸೆಳೆಯುತ್ತಿರುವ ಶಫಾಲಿ ವರ್ಮಾ ಅವರನ್ನು ಲೇಡಿ ಸೆಹ್ವಾಗ್ ಅಂತನೇ ಕರೆಯಲಾಗುತ್ತಿದೆ.
ಸದ್ಯ ಇಂಗ್ಲೆಂಡ್ ಪ್ರವಾಸದಲ್ಲಿರುವ ಶಫಾಲಿ ವರ್ಮಾ ಚೊಚ್ಚಲ ಟೆಸ್ಟ್ ಮತ್ತು ಏಕದಿನ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದಾರೆ. ಈ ಮೂಲಕ ಮೂರು ಮಾದರಿಯ ಕ್ರಿಕೆಟಿಗೂ ಶಫಾಲಿ ವರ್ಮಾ ಎಂಟ್ರಿಕೊಟ್ಟಿದ್ದಾರೆ.
ಚೊಚ್ಚಲ ಟೆಸ್ಟ್ ಪಂದ್ಯದ ಎರಡು ಇನಿಂಗ್ಸ್ ಗಳಲ್ಲೂ ಅರ್ಧಶತಕ ದಾಖಲಿಸಿರುವ ಶಫಾಲಿ ವರ್ಮಾ ಮೊದಲ ಏಕದಿನ ಪಂದ್ಯದಲ್ಲಿ ಮಿಂಚು ಹರಿಸಲು ವಿಫಲರಾಗಿದ್ದಾರೆ.
ಆದ್ರೂ ಶಫಾಲಿ ವರ್ಮಾ ಹೊಸ ದಾಖಲೆಯೊಂದನ್ನು ಬರೆದಿದ್ದಾರೆ. ಮೂರು ಮಾದರಿಯ ಕ್ರಿಕೆಟ್ ನಲ್ಲೂ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಎಂಟ್ರಿಯಾದ ಕಿರಿಯ ಆಟಗಾರ್ತಿ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯಕ್ಕೂ ಮುನ್ನ ಭಾರತ ಮಹಿಳಾ ತಂಡದ ನಾಯಕಿ ಮಿಥಾಲಿ ರಾಜ್ ಅವರು ಏಕದಿನ ಕ್ಯಾಪ್ ನೀಡುವ ಮೂಲಕ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ಗೆ ಸ್ವಾಗತಿಸಿದ್ರು.
17ರ ಹರೆಯದ ಶಫಾಲಿ ಶರ್ಮಾ ಮೂರು ಮಾದರಿಯ ಕ್ರಿಕೆಟ್ ನಲ್ಲೂ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ಗೆ ಎಂಟ್ರಿಕೊಟ್ಟ ಅತೀ ಕಿರಿಯ ಆಟಗಾರ್ತಿಯರಲ್ಲಿ ಐದನೇಯವರು. ಇದಕ್ಕು ಮೊದಲು ಅಫಘಾನಿಸ್ತಾನದ ಮುಜೀಬ್ ಉರ್ ರಹಮಾನ್, ಇಂಗ್ಲೆಂಡ್ ನ ಸಾರಾ ಟೇಲರ್ ಮತ್ತು ಆಸ್ಟ್ರೆಲಿಯಾದ ಎಲಿಸ್ಸೆ ಪೆರಿ ಹಾಗು ಪಾಕಿಸ್ತಾನದ ಮಹಮ್ಮದ್ ಅಮೀರ್ ನಂತರದ ಸ್ಥಾನದಲ್ಲಿ ಶಫಾಲ ವರ್ಮಾ ಇದ್ದಾರೆ.