ಪಠಾಣ್ ಚಿತ್ರದ ಪೋಟೋ ಲೀಕ್ – 8 ಪ್ಯಾಕ್ ನಲ್ಲಿ ಹಾಟ್ ಶಾರುಖ್
ಅದು 2007 ರಲ್ಲಿ ಬಿಡುಗಡೆಯಾದ ಓಂ ಶಾಂತಿ ಓಂ ಚಿತ್ರದಲ್ಲಿ ಶಾರುಖ್ ಮೊದಲ ಭಾರಿಗೆ ಶರ್ಟ ಬಿಚ್ಚಿ ಸಿಕ್ಸ್ ಪ್ಯಾಕ್ ಕಾಣಿಸಿಕೊಂಡಿದ್ದರು. ಅದಾದ ನಂತರ ಹಲವು ಚಿತ್ರಗಳಲ್ಲಿ ಶಾರುಕ್ ಮತ್ತೆ 8 ಪ್ಯಾಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಬಾಲಿವುಡ್ ಕಿಂಗ್ ಖಾನ್, ಅಭಿಮಾನಿಗಳಿಗೆ ಚಿತ್ರ ಬಿಡುಗಡೆಗೂ ಮುನ್ನವೆ ಸಿಹಿ ಸುದ್ದಿ ಸಿಕ್ಕದೆ. ಸ್ಪೇನ್ ನಲ್ಲಿ ಪಠಾಣ್ ಚಿತ್ರದ ಶೂಟಿಂಗ್ ವೇಳೆ ಲೀಕ್ ಆಗಿರುವ ಚಿತ್ರಗಳು ಮತ್ತೊಮ್ಮೆ ಶಾರುಕ್ 8 ಪ್ಯಾಕ್ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವುದನ್ನ ಬಹಿರಂಗಪಡಿಸಿವೆ. ಲೀಕ್ ಆಗಿರುವ ಪೋಟೊ ನೋಡಿ ಅಭಿಮಾನಿಗಳು ಸಖತ್ ಖುಷಿಯಾಗಿದ್ದಾರೆ.
ಸ್ಪೇನ್ ದೇಶದ ಚಿತ್ರೀಕರಣದಲ್ಲಿ ಲೀಕ್ ಆಗಿರುವ ಪೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಹಳದಿ ಬಣ್ಣದ ಸ್ವಿಮ್ ಸೂಟ್ ನಲ್ಲಿ ದೀಪಿಕಾ ಪಡುಕೋಣೆ ಕಾಣಿಸಿಕೊಂಡಿದ್ದಾರೆ. ಶಾರುಖ್ ಖಾನ್ ಉದ್ದ ಕೂದಲಿನಲ್ಲಿ ಶರ್ಟ್ ಲೆಸ್ ಆಗಿ ಕಾಣಿಸಿಕೊಂಡಿದ್ದಾರೆ.
ಸೋರಿಕೆಯಾದ ಚಿತ್ರಗಳನ್ನ ಹಂಚಿಕೊಳ್ಳಬೇಡಿ ಎಂದು ಯಶ್ ರಾಜ್ ಫಿಲಂಸ್ ಅಭಿಮಾನಿಗಳಿಗೆ ವಿನಂತಿಸಿದೆ.
ಸಿದ್ಧಾರ್ಥ್ ಆನಂದ್ ನಿರ್ದೇಶನದ, “ಪಠಾನ್” ಚಿತ್ರದಲ್ಲಿ ಶಾರುಖ್ ಖಾನ್, ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ಅಭಿನಯಿಸುತ್ತಿದ್ದಾರೆ. ಶಾರುಖ್ ಖಾನ್ ಮಾರ್ಚ್ 2 ರಂದು ಹಂಚಿಕೊಂಡಿದ್ದ ಪಠಾಣ್ ಟೀಸರ್ ಕೆಲವೇ ಕ್ಷಣಗಳಲ್ಲಿ ವೈರಲ್ ಆಗಿತ್ತು.
“ಇದು ತುಂಬಾ ತಡವಾಗುತ್ತಿದೆ ಎಂದು ನನಗೆ ಗೊತ್ತು. ಆದರೆ ಪಠಾಣ್ ಬಿಡುಗಡೆಯ ದಿನಾಂಕವನ್ನು ನೆನಪಿಸಿಕೊಳ್ಳಿ, 25 ಜನವರಿ, 2023 ರಂದು ಚಿತ್ರಮಂದಿರಗಳಲ್ಲಿ ಸಿಗೋಣ. ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ. ಎಂದು ಟ್ವೀಟ್ ಮಾಡಿದ್ದರು.
Shah Rukh Khan shows off his eight-pack abs in these leaked pics from Pathan set. Fans call him hot