ಪಾಕಿಸ್ತಾನದ ನೂತನ ಪ್ರಧಾನಿಯಾಗಿ  ಶಹಬಾಜ್ ಷರೀಫ್ ಆಯ್ಕೆ…..

1 min read

ಪಾಕಿಸ್ತಾನದ ನೂತನ ಪ್ರಧಾನಿಯಾಗಿ  ಶಹಬಾಜ್ ಷರೀಫ್ ಆಯ್ಕೆ…..

ಶಹಬಾಜ್ ಷರೀಫ್ ಪಾಕಿಸ್ತಾನದ ನೂತನ ಪ್ರಧಾನಿಯಾಗಲಿದ್ದಾರೆ. ಇಂದು ರಾತ್ರಿ ಎಂಟು ಗಂಟೆಗೆ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಮತ್ತೊಂದೆಡೆ, ಇಮ್ರಾನ್ ಖಾನ್ ಅವರನ್ನು ಬೆಂಬಲಿಸಿ ಪಾಕಿಸ್ತಾನದ ಅನೇಕ ನಗರಗಳಲ್ಲಿ ಪ್ರತಿಭಟನೆ ನಡೆಯುತ್ತಿವೆ. ಇಸ್ಲಾಮಾಬಾದ್, ಕರಾಚಿ, ಪೇಶಾವರ, ಮುಲ್ತಾನ್, ಕ್ವೆಟ್ಟಾದಲ್ಲಿ ಇಮ್ರಾನ್ ವಿರೋಧಿಗಳ ವಿರುದ್ಧ ಭಾರೀ ಘೋಷಣೆ ಮೊಳಗುತ್ತಿದೆ.

ಇದೇ ವೇಳೆ ಶಹಬಾಜ್ ಷರೀಫ್ ಪ್ರಧಾನಿಯಾದ ಮೇಲೆ ಭಾರತದ ಮೇಲೆ ಏನು ಪರಿಣಾಮ ಬೀರಲಿದೆ ಎಂಬ ಪ್ರಶ್ನೆಯೂ ಶುರುವಾಗಿದೆ.

ಅವಿಶ್ವಾಸ ನಿರ್ಣಯದ ಮೂಲಕ ಇಮ್ರಾನ್ ಖಾನ್ ಸರ್ಕಾರವನ್ನು ಉರುಳಿಸಿದ ನಂತರವೂ ಭಾರತದ ಬಗ್ಗೆ ಶಹಬಾಜ್ ಹೇಳಿಕೆ ನೀಡಿದ್ದರು. ನಾವು ಭಾರತದೊಂದಿಗೆ ಶಾಂತಿ ಬಯಸುತ್ತೇವೆ, ಆದರೆ ಕಾಶ್ಮೀರ ಸಮಸ್ಯೆಗೆ ಪರಿಹಾರವಿಲ್ಲದೆ ಇದು ಸಾಧ್ಯವಿಲ್ಲ ಎಂದು ಅವರು ಹೇಳಿದ್ದರು.

ಭಾರತ ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದಂತೆ ಶಹಬಾಜ್ ಹಲವು ಬಾರಿ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ. ಏಪ್ರಿಲ್ 2018 ರಲ್ಲಿ, ಪಾಕಿಸ್ತಾನದಲ್ಲಿ ಚುನಾವಣೆಗಳು ನಡೆಯುತ್ತಿರುವಾಗ, ರ್ಯಾಲಿಯಲ್ಲಿ ಶಹಬಾಜ್, ‘ನಮ್ಮ ರಕ್ತ ಕುದಿಯುತ್ತಿದೆ. ನಾವು ಕಾಶ್ಮೀರವನ್ನು ಪಾಕಿಸ್ತಾನದ ಭಾಗವಾಗಿ ಮಾಡುವುದನ್ನು ಮುಂದುವರಿಸುತ್ತೇವೆ ಎಂದಿದ್ದರು.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd