Shaheen Afridi : ಅಫ್ರೀದಿ ಮಗಳ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಶಾಹೀನ್ ಅಫ್ರೀದಿ….
ಪಾಕಿಸ್ತಾನದ ಸ್ಟಾರ್ ವೇಗದ ಬೌಲರ್ ಶಾಹೀನ್ ಅಫ್ರಿದಿ ಶುಕ್ರವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಫೆಬ್ರವರಿ 3 ರಂದು ಕರಾಚಿಯ ಮಸೀದಿಯಲ್ಲಿ, ಪಾಕಿಸ್ತಾನದ ಮಾಜಿ ನಾಯಕ ಶಾಹಿದ್ ಅಫ್ರಿದಿ ಅವರ ಮಗಳು ಅನ್ಶಾ ಅವರೊಂದಿಗೆ ನಿಖಾಹ್ ಆಗಿದ್ದಾರೆ.
ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್, ಶಾದಾಬ್ ಖಾನ್ ಮತ್ತು ಮಾಜಿ ನಾಯಕ ಸರ್ಫರಾಜ್ ಅಹ್ಮದ್ ಸೇರಿದಂತೆ ಹಲವು ಸ್ಟಾರ್ ಆಟಗಾರರು ಶಾಹೀನ್ ಮದುವೆಯಲ್ಲಿ ಭಾಗವಹಿಸಿ ದಂಪತಿಗಳಿಗೆ ಶುಭ ಕೋರಿದ್ದಾರೆ. ಶಾಹೀನ್ ಮದುವೆಯ ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ.
ಶಾಹೀನ್ ಶಾ ಎರಡು ವರ್ಷಗಳ ಹಿಂದೆ ಶಾಹಿದ್ ಅಫ್ರಿದಿ ಮಗಳು ಅನ್ಶಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಕೊರೊನಾ ಮತ್ತು ಲಾಕ್ಡೌನ್ನಿಂದ ಮದುವೆಯನ್ನ ಮುಂದೂಡಲಾಗಿತ್ತು. ಗುರುವಾರ ರಾತ್ರಿ ಮೆಹಂದಿ ಕಾರ್ಯಕ್ರಮ ನಡೆದಿದ್ದು, ಎರಡು ದಿನಗಳ ಮುಂಚಿತವಾಗಿ ಶಾಹಿನ್ ಕುಟುಂಬ ಕರಾಚಿಗೆ ಬಂದಿಳಿದಿತ್ತು. ನಿಖಾಹ್ ನಂತರ ಅರತಕ್ಷತೆ ಸಮಾರಂಭ ನಡೆಯಲಿದೆ.
22 ವರ್ಷದ ವೇಗದ ಬೌಲರ್ ಶಾಹೀನ್ ಅಫ್ರಿದಿ 25 ಟೆಸ್ಟ್ ಪಂದ್ಯಗಳಿಂದ 99 ವಿಕೆಟ್ ಪಡೆದಿದ್ದಾರೆ. 32 ODI ಪಂದ್ಯಗಳನ್ನ ಆಡಿ 62 ವಿಕೆಟ್ ಮತ್ತು 47 T20 ಪಂದ್ಯಗಳ ಮೂಲಕ 58 ವಿಕೆಟ್ಗಳನ್ನ ಕಿತ್ತಿದ್ದಾರೆ.
Shaheen Afridi: Shaheen Afridi married with Afridi’s daughter…