ಪಾಕಿಸ್ತಾನದ ಮಾಜಿ ನಾಯಕ ಶಾಹೀದ್ ಆಫ್ರಿದಿ ಮತ್ತು ಟೀಮ್ ಇಂಡಿಯಾದ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್ ನಡುವಿನ ಸಂಬಂಧ ಹಾವು – ಮುಂಗೂಸಿ ಥರಾ ಇದೆ. ಮೈದಾನದಲ್ಲಿ ಗಂಭೀರ್ ಮತ್ತು ಆಫ್ರಿಧಿ ಜಗಳ ಮಾಡಿಕೊಂಡಿರುವುದನ್ನು ನೋಡಿದ್ದೇವೆ. ಹಾಗೇ ಸಾಮಾಜಿಕ ಜಾಲ ತಾಣದಲ್ಲೂ ಪದಗಳಲ್ಲಿ ಕಿತ್ತಾಡಿಕೊಂಡಿರುವುದನ್ನು ಸಹ ಗಮನಿಸಿದ್ದೇವೆ.
ಅದೇ ರೀತಿ ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯವರನ್ನು ಕಂಡ್ರೆ ಗೌತಮ್ ಗಂಭೀರ್‍ಗೆ ಅಷ್ಟಕ್ಕಷ್ಟೇ..ಗಂಭೀರ್ ಪ್ರಕಾರ ಧೋನಿ ಅದೃಷ್ಟದ ನಾಯಕ. ಧೋನಿ ಗಂಗೂಲಿ ರೀತಿಯಲ್ಲಿ ಟೀಮ್ ಇಂಡಿಯಾವನ್ನು ಬೆಳೆಸಿಲ್ಲ. ಯುವ ಕ್ರಿಕೆಟಿಗರಿಗೆ ಅವಕಾಶ ನೀಡಿಲ್ಲ ಎಂದು ಹೇಳಿದ್ದರು. ಧೋನಿ ನಾಯಕತ್ವದಲ್ಲಿ ಗಂಭೀರ್ ಅಡಿದ್ರೂ ಕೂಡ ಧೋನಿ ಜತೆಗೆ ಗಂಭೀರ್ ಸಂಬಂಧ ಚೆನ್ನಾಗಿರಲಿಲ್ಲ ಎಂಬುದು ಎಲ್ಲರಿಗೂ ತಿಳಿದಿರುವ ವಿಷ್ಯವೇ.
ಇದೀಗ ಆಫ್ರಿದಿ ಗಂಭೀರ್‍ಗೆ ಮತ್ತೊಂದು ರೀತಿಯಲ್ಲಿ ಟಾಂಗ್ ಕೊಟ್ಟಿದ್ದಾರೆ. ಆಫ್ರಿಧಿ ಧೋನಿಯವರನ್ನು ಬೆಂಬಲಿಸಿಕೊಂಡು ಗಂಭೀರ್‍ಗೆ ಉರಿಯುವಂತೆ ಮಾಡಿದ್ದಾರೆ. ಸದಾ ಧೋನಿಯ ಮೇಲೆ ಅಸಮಾಧಾನ ಹೊರಹಾಕುತ್ತಿರುವ ಗಂಭೀರ್ ಗೆ ಆಫ್ರಿದಿ ನೀಡಿರುವ ಹೇಳಿಕೆಯನ್ನು ಅಷ್ಟೊಂದು ಸುಲಭವಾಗಿ ಅರಗಿಸಿಕೊಳ್ಳಲು ಸಾಧ್ಯವಿಲ್ಲ.
ಸಂದರ್ಶನವೊಂದರಲ್ಲಿ ಶಾಹಿದ್ ಆಫ್ರಿದಿಗೆ ಪ್ರಶ್ನೆಯೊಂದು ಎದುರಾಗಿತ್ತು. ನಿಮ್ಮ ಪ್ರಕಾರ ಮಹೇಂದ್ರ ಸಿಂಗ್ ಧೋನಿ ಮತ್ತು ರಿಕಿ ಪಾಂಟಿಂಗ್ ನಡುವೆ ಯಾರು ಶ್ರೇಷ್ಠ ನಾಯಕರು ? ಈ ಪ್ರಶ್ನೆಗೆ ಶಾಹೀದ್ ಆಫ್ರಿದಿ ಗಂಭೀರ್ ಅವರನ್ನು ಟಾರ್ಗೆಟ್ ಮಾಡಿಕೊಂಡೇ ಉತ್ತರ ನೀಡಿದ್ದಾರೆ. ನನ್ನ ಪ್ರಕಾರ ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಶ್ರೇಷ್ಠ ನಾಯಕ ಎಂದು ಹೇಳಿದ್ದಾರೆ.
ಇಲ್ಲಿ ಶಾಹೀದ್ ಆಫ್ರಿದಿ ಅವರು ಧೋನಿಯವರ ಬಗ್ಗೆ ಗಂಭೀರ್ ನೀಡುತ್ತಿದ್ದ ಹೇಳಿಕೆಗಳನ್ನು ಮುಂದಿಟ್ಟುಕೊಂಡೇ ಈ ರೀತಿಯ ಉತ್ತರ ನೀಡಿದ್ದಾರೆ ಅಂದ್ರೂ ಅಚ್ಚರಿಪಡಬೇಕಾಗಿಲ್ಲ. ಈ ಸಂದರ್ಶನದ ವಿಡಿಯೋ ಈಗ ವೈರಲ್ ಆಗಿದೆ. ನೆಟ್ಟಿಗರು ನಾನಾ ರೀತಿಯಲ್ಲಿ ಕಮೆಂಟ್ ಕೂಡ ಮಾಡುತ್ತಿದ್ದಾರೆ.
ಹಾಗೇ ನೋಡಿದ್ರೆ ಧೋನಿ ಮತ್ತು ಪಾಂಟಿಂಗ್ ಇಬ್ಬರು ಕೂಡ ಶ್ರೇಷ್ಠ ನಾಯಕರೇ. ಇಬ್ಬರ ನಡುವೆ ಹೋಲಿಕೆ ಮಾಡುವುದು ಸರಿಯಲ್ಲ. ಆದ್ರೆ ಶಾಹೀದ್ ಆಫ್ರಿದಿಯ ಪ್ರಕಾರ ಮಹೇಂದ್ರ ಸಿಂಗ್ ಧೋನಿಯ ನಾಯಕತ್ವದಲ್ಲಿ ಅನೇಕ ಯುವ ಕ್ರಿಕೆಟಿಗರು ಬೆಳಕಿಗೆ ಬಂದಿದ್ದಾರೆ. ಹೀಗಾಗಿ ಪಾಂಟಿಂಗ್ ಬದಲು ನಾನು ಧೋನಿಯನ್ನು ಆಯ್ಕೆ ಮಾಡುತ್ತೇನೆ ಎಂದು ಹೇಳಿದ್ದಾರೆ. ಇತ್ತೀಚೆಗೆ ಗಂಭೀರ್ ಧೋನಿ ನಾಯಕತ್ವದಲ್ಲಿ ಯುವ ಕ್ರಿಕೆಟಿಗರು ಬೆಳಕಿಗೆ ಬರಲಿಲ್ಲ. ಧೋನಿ ನಾಯಕತ್ವಲ್ಲಿದ್ದ ಬಹುತೇಕ ಆಟಗಾರರು ಗಂಗೂಲಿಯ ಬೆಳೆಸಿದ್ದ ಹು
ಡುಗರು. ಹೀಗಾಗಿ ಧೋನಿ ಅದೃಷ್ಟವಂತ ನಾಯಕ ಎಂದು ಹೇಳಿದ್ದರು. ಗಂಭೀರ್ ಹೇಳಿಕೆಗೆ ವಿರುದ್ಧವಾಗಿ ಶಾಹೀದ್ ಆಫ್ರಿದಿ ಧೋನಿ ಯುವ ಕ್ರಿಕೆಟಿಗರನ್ನು ಬೆಳೆಸಿದ್ದಾರೆ ಎಂದು ಹೇಳಿದ್ದಾರೆ. ಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಟೀಮ್ ಇಂಡಿಯಾದ 2007ರ ಟಿ-ಟ್ವೆಂಟಿ ವಿಶ್ವಕಪ್, 2011ರ ಏಕದಿನ ವಿಶ್ವಕಪ್ ಮತ್ತು 2013ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದುಕೊಂಡಿತ್ತು.
ಇನ್ನು ರಿಕಿ ಪಾಂಟಿಂಗ್ ನಾಯಕತ್ವಲ್ಲಿ ಆಸ್ಟ್ರೇಲಿಯಾದ 2003ರ ಮತ್ತು 2007ರ ಏಕದಿನ ವಿಶ್ವಕಪ್ ಗೆದ್ದುಕೊಂಡಿತ್ತು. ಹಾಗೇ ಮೂರು ಮಾದರಿಯ ಕ್ರಿಕೆಟ್ ನಲ್ಲಿ ಧೋನಿ ಒಟ್ಟು 332 ಪಂದ್ಯಗಳಿಗೆ ನಾಯಕನಾಗಿದ್ದರು. ಇದ್ರಲ್ಲಿ 178 ಪಂದ್ಯಗಳಲ್ಲಿ ಗೆಲುವು ಹಾಗೂ 120 ಪಂದ್ಯಗಳಲ್ಲಿ ಸೋಲು ಅನುಭವಿಸಿದ್ದಾರೆ. ಆರು ಪಂದ್ಯಗಳು ಟೈ ಆಗಿವೆ/ 15 ಪಂದ್ಯಗಳು ಡ್ರಾಗೊಂಡಿವೆ.
ರಿಕಿ ಪಾಂಟಿಂಗ್ ಮೂರು ಮಾದರಿಯ ಕ್ರಿಕೆಟ್ ನಲ್ಲಿ ಒಟ್ಟು 324 ಪಂದ್ಯಗಳಲ್ಲಿ ಆಸ್ಟ್ರೇಲಿಯಾ ತಂಡವನ್ನು ಮುನ್ನಡೆಸಿದ್ದಾರೆ. ಇದ್ರಲ್ಲಿ 220 ಪಂದ್ಯಗಳಲ್ಲಿ ಜಯ ಸಾಧಿಸಿದ್ರೆ, 77ಪಂದ್ಯಗಳನ್ನು ಸೋಲು ಅನುಭವಿಸಿದ್ದಾರೆ. 2 ಪಂದ್ಯ ಟೈ ಹಾಗೂ 15 ಪಂದ್ಯಗಳು ಡ್ರಾಗೊಂಡಿವೆ.
ಅಂಕಿ ಅಂಶಗಳು ಏನು ಬೇಕಾದ್ರೂ ಹೇಳಲಿ, ಇಲ್ಲಿ ಶಾಹೀದ್ ಆಫ್ರಿದಿ ಧೋನಿಯವರನ್ನು ಮುಂದಿಟ್ಟುಕೊಂಡು ಗಂಭೀರ್‍ಗೆ ಟಾಂಗ್ ಕೊಟ್ಟಿರುವುದಂತೂ ಸತ್ಯ.