ಮಾಸ್ ಅವತಾರದಲ್ಲಿ ಕಿಂಗ್ ಖಾನ್ – ಜವಾನ್ ಮೂಲಕ ಕನ್ನಡಕ್ಕೆ ಬಂದ ಶಾರುಖ್
ಬಾಲಿವುಡ್ ನ ಕಿಂಗ್ ಖಾನ್ ಎಂದೇ ಕರೆಸಿಕೊಳ್ಳುವ ನಟ ಶಾರುಖ್ ಖಾನ್ ಬಹಳ ದಿನಗಳಿಂದ ಒಂದು ಹಿಟ್ ಚಿತ್ರಕ್ಕಾಗಿ ಕಾಯತ್ತಿದ್ದಾರೆ. ಜೀರೋ ಸಿನಿಮಾದ ಸೋಲಿನ ಬಳಿಕ ಹಿರಿತೆರೆಯಿಂದ ಅಂತರ ಕಾಯ್ದುಕೊಂಡಿದ್ದ ಶಾರುಕ್ ಇದೀಗ ಮತ್ತೆ ಬೆಳ್ಳಿ ತೆರೆಗೆ ಪುನರಾಗಮನಾ ಮಾಡುತ್ತಿದ್ದಾರೆ.
ಪಠಾಣ್ ಚಿತ್ರದ ಟೀಸರ್ ಅನೌನ್ಸ್ ಮೂಲಕ ಕಂಬ್ಯಾಕ್ ಘೋಷಿಸಿದ್ದ ಕಿಂಗ್ ಖಾನ್ ಮ್ತೊಂದು ಹೊಸ ಚಿತ್ರವನ್ನ ಘೋಷಿಸಿದ್ದಾರೆ. ನಿನ್ನೆ ಈ ಚಿತ್ರದ ಭರ್ಜರಿ ಟೀಸರ್ ರಿಲೀಸ್ ಮೂಲಕ ಸಿನಿಮಾದ ಹೆಸರು ಅನೌನ್ಸ್ ಮಾಡಿದ್ದಾರೆ.
ಶಾರುಖ್ ಖಾನ್ ಮುಂಬರುವ ಚಿತ್ರ ಜವಾನ್ ಎಂದು ಹೆಸರಿಡಲಾಗಿದೆ. ಬಿಡುಗಡೆಯಾಗಿರುವ ಟೀಸರ್ ಅಭಿಮಾನಿಗಳಿಗೆ ಸಖತ್ ಇಷ್ಟವಾಗುತ್ತಿದೆ. ಈ ಟೀಸರ್ ಬಿಡುಗಡೆಯಾದ ಬೆನ್ನಲ್ಲೇ ಶಾರುಖ್ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಮತ್ತೊಮ್ಮೆ ಆಕ್ಷನ್ ಮೋಡ್ನಲ್ಲಿ ನೋಡಲು ಅಭಿನಾನಿಗಳು ಉತ್ಸುಕರಾಗಿದ್ದಾರೆ.
ತಮಿಳು ನಿರ್ದೇಶಕ ಅಟ್ಲೀ ಆಕ್ಷನ್ ಕಟ್ ಹೇಳುತ್ತಿರವ ಸಿನಿಮಾಗೆ ನಾಯಕಿಯಾಗಿ ನಯನತಾರ ಕಾಣಿಸಿಕೊಳ್ಳುತ್ತಿದ್ದಾರೆ. `ಜವಾನ್’ ಸಿನಿಮಾ ಜೂನ್ 2ರಂದು 2023ಕ್ಕೆ ತೆರೆಗೆ ಅಬ್ಬರಿಸಲು ಮುಹೂರ್ತ ಫಿಕ್ಸ್ ಆಗಿದೆ. ಹಿಂದಿ, ತಮಿಳು,ತೆಲುಗು, ಸೇರಿದಂತೆ ಕನ್ನಡದಲ್ಲೂ ಜವಾನ್ ಸಿನಿಮಾ ತೆರೆ ಕಾಣಲಿದೆ.
ಈ ಮೂಲಕ ಶಾರುಕ್ ಚಿತ್ರ ಮೊದಲ ಭಾರಿಗೆ ಕನ್ನಡದಲ್ಲೂ ತೆರೆಕಾಣಲಿದೆ.