ನಾನಿನ್ನೂ ಸತ್ತಿಲ್ಲ ಬದುಕಿದ್ದೇನೆ , ಖುಷಿಯಾಗಿದ್ದೇನೆ – ಸಾವಿನ ವದಂತಿಗೆ ಶಕೀಲಾ ಕೊಟ್ಟ ಸ್ಪಷ್ಟನೆ
ಅಡಲ್ಟ್ ಸಿನಿಮಾಗಳ ನಟಿಯಾಗಿ ಗುರುತಿಸಿಕೊಂಡಿದ್ದ ಶಕೀಲಾ ಸದ್ಯ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ ಎಂಬ ಸುದ್ದಿ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.. ಆದರೆ ಈ ಸುದ್ದಿ ತಿಳಿದು ಖುದ್ದು ಶಕೀಲಾ ಶಾಕ್ ಆಗಿದ್ದು, ಸೋಷಿಯಿಲ್ ಮೀಡಿಯಾದಲ್ಲಿ ವಿಡಿಯೋ ಶೇರ್ ಮಾಡುವ ಮೂಲಕ ಸ್ಪಷ್ಟನೆ ನೀಡಿದ್ದಾರೆ. 47 ವರ್ಷದ ಶಕೀಲಾ ಮೃತಪಟ್ಟಿದ್ದಾರೆ ಎನ್ನುವ ಸುದ್ದಿಗೆ ಸ್ಪಷ್ಟನೆ ಕೊಟ್ಟ ನಟಿ, ನಾನು ಮೃತಪಟ್ಟಿದ್ದೇನೆ ಎನ್ನುವ ಸುದ್ದಿ ಕೇಳಿದೆ. ಆ ರೀತಿ ಏನೂ ಇಲ್ಲ. ನಾನು ಆರೋಗ್ಯವಾಗಿ ಖುಷಿಯಾಗಿದ್ದೇನೆ. ನನಗೆ ಯಾವುದೇ ಸಮಸ್ಯೆ ಇಲ್ಲ. ನನ್ನ ಈ ನಗುಮುಖ ನೋಡಿದ್ರೆ ಏನಾದರೂ ಸಮಸ್ಯೆ ಇದೆ ಎಂದು ಅನಿಸುತ್ತದೆಯೇ. ನನ್ನ ಬಗ್ಗೆ ಕಾಳಜಿ ತೋರಿದ ಜನರಿಗೆ ಧನ್ಯವಾದಗಳು ಎಂದಿದ್ದಾರೆ.
ಕೆಜಿಎಫ್ 2 ಗೆ ಡಿಮ್ಯಾಂಡೋ ಡಿಮ್ಯಾಂಡು..! ‘ರಾಖಿ ಬಾಯ್’ ಖದರ್ ಮುಂದೆ ಬಾಲಿವುಡ್ ನಿಲ್..! ರೈಟ್ಸ್ ಗಾಗಿ ದುಂಬಾಲು ಬಿದ್ದ ಡಿಸ್ಟ್ರಿಬ್ಯೂಟರ್ಸ್..!
ಅಷ್ಟೇ ಅಲ್ಲ ನನ್ನ ಬಗ್ಗೆ ಕೆಟ್ಟದಾಗಿ ಸುದ್ದಿ ಹರಡಿಸಿದವರಿಗೆ ಥ್ಯಾಂಕ್ಸ್ ಹೇಳಬೇಕು. ಏಕಂದ್ರೆ, ನನ್ನ ಬಗ್ಗೆ ಜನ ಈಗಲೂ ಯೋಚಿಸುತ್ತಿದ್ದಾರೆ ಎಂದು ನನಗೆ ಇದರಿಂದ ತಿಳಿದಿದೆ. ಇಂತಹ ಸುದ್ದಿ ಸೃಷ್ಟಿಸಿದವರಿಗೂ ಧನ್ಯವಾದ ಎಂದಿದ್ದಾರೆ. ಇನ್ನೂ ಶಕೀಲಾ ಕಳೆದ ಮಾರ್ಚ್ ತಿಂಗಳಲ್ಲಿ ತಮಿಳುನಾಡು ರಾಜಕೀಯಕ್ಕೆ ಅಧಿಕೃತವಾಗಿ ಎಂಟ್ರಿಕೊಟ್ಟಿದ್ದಾರೆ. ತಮಿಳುನಾಡು ರಾಜ್ಯ ಕಾಂಗ್ರೆಸ್ನ ಮಾನವ ಹಕ್ಕು ಘಟಕದ ಕಾರ್ಯದರ್ಶಿಯಾಗಿ ಶಕೀಲ ಅವರನ್ನು ನೇಮಿಸಲಾಗಿದೆ.
ಅಶ್ಲೀಲ ವಿಡಿಯೋ ಪ್ರಕರಣ – ಪಶ್ಚಿಮ ಬಂಗಾಳ ಮಾಡೆಲ್ , ನಟಿ ಹಾಗೂ ಫೋಟೋಗ್ರಾಫರ್ ಬಂಧನ
ಶಕೀಲಾ ತಮ್ಮದೇ ಆದ ಪ್ರತ್ಯೇಕ ಒಟಿಟಿ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದರು. ಆ ಒಟಿಟಿಯಲ್ಲಿ ಸಾಫ್ಟ್ ಪೋರ್ನ್ ಮಾದರಿಯ ಸಿನಿಮಾಗಳನ್ನು ಪ್ರದರ್ಶಿಸುವ ಸಾಧ್ಯತೆ ಇದೆ. ಈ ಹಿಂದೆ ಶಕೀಲಾ ನಿರ್ಮಾಣದ ‘ಲೇಡೀಸ್ ನಾಟ್ ಅಲೌಡ್’ ಹಾಗೂ ಇನ್ನಿತರೆ ಸಿನಿಮಾಗಳಿಗೆ ಸೆನ್ಸಾರ್ ಮಂಡಳಿಯಿಂದ ಬಹಳ ಸಮಸ್ಯೆ ಎದುರಾಯಿತು. ಈ ಸಮಸ್ಯೆಯಿಂದ ಬಿಡುಗಡೆ ಪಡೆಯಲು ಇದೀಗ ಖುದ್ದು ಶಕೀಲಾ ಅವರೇ ಹೊಸ ಒಟಿಟಿ ಬಿಡುಗಡೆಗೊಳಿಸಲು ನಿರ್ಧರಿಸಿದ್ದಾರೆ.
ಇನ್ನೂ ಕನ್ನಡದ ನಿರ್ದೇಶಕ ಇಂದ್ರಜಿತ್ ಲಂಕೇಶ್, ಶಕೀಲ ಜೀವನ ಆಧರಿಸಿ ಸಿನಿಮಾ ಮಾಡಿದ್ದರು. ಸಿನಿಮಾದಲ್ಲಿ ರಿಚಾ ಚಡ್ಡಾ, ಶಕೀಲ ಪಾತ್ರದಲ್ಲಿ ನಟಿಸಿದ್ದರು. ಹಿಂದಿಯಲ್ಲಿ ತೆರೆಕಂಡ ಚಿತ್ರ ನಿರೀಕ್ಷೆ ಮಟ್ಟದ ಯಶಸ್ಸು ಸಾಧಿಸಿಲ್ಲ. 2012ರಲ್ಲಿ ನಾನು ಇನ್ಮುಂದೆ ಸಾಫ್ಟ್ ಪೋರ್ನ್ ಸಿನಿಮಾದಲ್ಲಿ ನಟಿಸಲ್ಲ ಎಂದು ಶಕೀಲಾ ಪ್ರಕಟಿಸಿಕೊಂಡರು. 47 ವರ್ಷದ ವಯಸ್ಸಿನ ಶಕೀಲಾಗೆ ಇನ್ನು ಮದುವೆ ಆಗಿಲ್ಲ. ಆದರೆ, ಮಂಗಳಮುಖಿ ಮಗುವೊಂದನ್ನು ದತ್ತು ಪಡೆದುಕೊಂಡು ಬೆಳೆಸುತ್ತಿದ್ದಾರೆ.
ಆನ್ ಲೈನ್ ಗೇಮ್ ನಲ್ಲಿ 40 ಸಾವಿರ ಕಳೆದುಕೊಂಡ ಬಾಲಕ ನೇಣಿಗೆ ಶರಣು..!








