Kalburgi : ಶರಣಬಸವೇಶ್ವರ ದೇವಸ್ಥಾನದಲ್ಲಿ ಪೀಠಾಧಿಪತಿ ಶರಣಬಸವಪ್ಪ ಅಪ್ಪಾ ಅವರ ಸಿಲಿಕಾನ್ ಪ್ರತಿಮೆ

1 min read

ಮಹಾದಾಸೋಹಿ ಕಲಬುರಗಿಯ ಶರಣಬಸವೇಶ್ವರ ದೇವಸ್ಥಾನ ಇದೀಗ ಮತ್ತಷ್ಟು ಜನಾಕರ್ಷಣೆಯ ಕೇಂದ್ರವಾಗಿದೆ..ಕಾರಣ ದೇವಸ್ಥಾನದ 8 ನೇ ಪೀಠಾಧಿಪತಿ ಶರಣಬಸವಪ್ಪ ಅಪ್ಪಾ ರವರ ಸಿಲಿಕಾನ್ ಪ್ರತಿಮೆ ಎಲ್ಲರ ಮನಸೂರೆಗೊಳ್ಳುತ್ತಿದೆ.

ಅಷ್ಟೇಅಲ್ಲ ಖುದ್ದು ಅಪ್ಪಾಜಿಯವರೇ ತಮ್ಮ ಪ್ರತಿಮೆ ಕಂಡು ದಂಗಾಗಿದ್ದಾರೆ.. ವಿಜಯಪುರ ಮೂಲದ ಕಲಾವಿದ ಆನಂದ ಬೀಳಗಿ ಈ ಕಲಾಕೃತಿಯನ್ನ ರಚಿಸಿದ್ದಾರೆ.ದೀರ್ಘಕಾಲ ಬಾಳಿಕೆ ಬರುವ ಈ ಪ್ರತಿಮೆ ತಯಾರಿಸಲು ಕಂಚು ಫೈಬರ್ ಮತ್ತು ಮೇಣವನ್ನ ಬಳಸಲಾಗಿದೆಯಂತೆ..

ವೈದ್ಯಕೀಯ ದರ್ಜೆಯ ಸಿಲಿಕಾನ್ ವಸ್ತುವು ಪ್ರತಿಮೆ ತಯಾರಿಸಲು ಬಳಸಲಾಗಿದೆ..ಕಲಾವಿದ ಆನಂದ ಬೀಳಗಿ ಸದ್ಯ ಬೆಂಗಳೂರಿನಲ್ಲಿ ವಾಸವಿದ್ದು ಶಿಲ್ಪಕರ ಎಂಬ ಹೆಸರಿನ ಸ್ಟುಡಿಯೊ ಸ್ಥಾಪಿಸಿ ಹತ್ತು ಹಲವು ಕಲಾಕೃತಿಗಳನ್ನ ತಯಾರಿಸಿದ್ದು ವಿಶೇಷ..

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd