ಜೋಹಾನ್ಸ್ ಬರ್ಗ್ ನಲ್ಲಿ ಶಾರ್ದೂಲ್ ಶೈನ್.. ಆಫ್ರಿಕಾ ಶೇಕ್

1 min read
Shardul saaksha tv

ಜೋಹಾನ್ಸ್ ಬರ್ಗ್ ನಲ್ಲಿ ಶಾರ್ದೂಲ್ ಶೈನ್.. ಆಫ್ರಿಕಾ ಶೇಕ್ Shardul saaksha tv

ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ನಲ್ಲಿ ಲಾರ್ಡ್ ಶಾರ್ದೂಲ್ ಠಾಕೂರ್ ಅದ್ಭುತವಾಗಿ ಬೌಲಿಂಗ್ ಮಾಡುತ್ತಿದ್ದಾರೆ. ಬ್ಯಾಕ್ ಟು ಬ್ಯಾಕ್ ವಿಕೆಟ್ ಗಳನ್ನು ತೆಗೆಯುವ ಮೂಲಕ ಹರಿಣಗಳ ಬೆನ್ನೆಲುಬನ್ನ ಮುರಿದಿದ್ದಾರೆ.

ಸದ್ಯ ಪ್ರಮುಖ ಐದು ವಿಕೆಟ್ ಗಳನ್ನು ಪಡೆದಿರುವ ಶಾರ್ದೂಲ್, ಪಂದ್ಯವನ್ನು ಟೀಂ ಇಂಡಿಯಾದತ್ತ ತಿರುಗುವಂತೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಟ್ವಿಟ್ಟರ್ ನಲ್ಲಿ ಶರ್ದೂಲ್ ಸಖತ್ ಟ್ರೆಂಡ್ ಆಗುತ್ತಿದ್ದು,  ಪ್ರಶಂಸೆಯ ಸುರಿಮಳೆಯಾಗುತ್ತಿದೆ.

ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತಕ್ಕೆ ಮೊದಲಿನಿಂದಲೂ ಹಿನ್ನಡೆಯಾಗುತ್ತಿದೆ. ಮೊದಲು ಬ್ಯಾಟಿಂಗ್ ನಲ್ಲಿ ಟೀಂ ಇಂಡಿಯಾ ಮಿಂಚಲಿಲ್ಲ. ಜೊತೆಗೆ ಆಫ್ರಿಕಾ ಬ್ಯಾಟರ್ ಗಳ ವಿಕೆಟ್ ಗಾಗಿ ನಮ್ಮ ಬೌಲರ್ ಗಳು ಪರದಾಡುವಂತಾಗಿತ್ತು.

ಆಫ್ರಿಕಾ ನಾಯಕ ಎಲ್ಗರ್ ಮತ್ತು ಕಿಗಾನ್ ಪೀಟರ್ಸನ್ ಟೀಂ ಇಂಡಿಯಾ ಬೌಲರ್ ಗಳ ಬೆವರಿಳಿಸಿದರು. ಒಂದು ಹಂತದಲ್ಲಿ ಈ ಪಂದ್ಯ ಭಾರತೀಯರ ಕೈ ಜಾರಿತು ಎಂದು ಎಲ್ಲರೂ ಅಂದುಕೊಂಡಿದ್ದರು.

Shardul saaksha tv

ಈ ಸಂಕಷ್ಟದ ಸ್ಥಿತಿಯಲ್ಲಿ ದಾಳಿಗೆ ಬಂದ ಶರ್ದೂಲ್ ಆಫ್ರಿಕಾ ಲೆಕ್ಕಾಚಾರಗಳನ್ನು ಉಲ್ಟಾಪಲ್ಟಾ ಮಾಡಿದರು.

ಕ್ರೀಸ್ ಕಚ್ಚಿ ಆಡುತ್ತಿದ್ದ ಎಲ್ಗರ್, ಪೀಟರ್ಸನ್, ತೆಂಬ ಬಹುಮಾ ವಿಕೆಟ್ ತೆಗೆದರು. ಇದಾದ ಬಳಿಕ ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಕೈಲ್ ವೆರ್ರೆನ್ನೆ ವಿಕೆಟ್ ತೆಗೆದು ಭಾರತಕ್ಕೆ ಮರುಜೀವ ತಂದುಕೊಟ್ಟರು.

ಹೀಗಾಗಿ ಸೋಶಿಯಲ್ ಮೀಡಿಯಾದಲ್ಲಿ ಶರ್ದೂಲ್ ಹೆಸರು ಟ್ರೆಂಡ್ ಆಗುತ್ತಿದೆ.

‘‘ಲಾರ್ಡ್ ಶಾರ್ದೂಲ್… ಟೀಂ ಇಂಡಿಯಾ ಫೈಯರ್ ಪ್ಲೇ ಆಟದಲ್ಲಿ ನಂಬಿಕೆ ಇಟ್ಟಿದೆ. ಅದಕ್ಕಾಗಿಯೇ ಲಾರ್ಡ್ ಹೊಸ ಬ್ಯಾಟ್ಸ್‌ಮನ್‌ಗಳಿಗೆ ಎಂದಿಗೂ ಬೌಲಿಂಗ್ ಮಾಡುವುದಿಲ್ಲ.

ಎದುರಾಳಿಗಳು ಬೃಹತ್ ಜೊತೆಯಾಟ ದಾಖಲಿಸುತ್ತಿರುವಾಗ ಶರ್ದೂಲ್ ಅಖಾಡಕ್ಕೆ ಇಳಿಯುತ್ತಾನೆ, ಅವರನ್ನು ಔಟ್ ಮಾಡುತ್ತಾನೆ” ಎಂದು ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ವಾಸಿಂ ಜಾಫರ್ ಹೇಳಿದ್ದಾರೆ.

ಇರ್ಫಾನ್ ಪಠಾಣ್ ಕೂಡ ಶಾರ್ದೂಲ್ ಅದ್ಭುತವಾಗಿ ಬೌಲಿಂಗ್ ಮಾಡಿದ್ದಾರೆ ಎಂದು ಹೊಗಳಿದ್ದಾರೆ.

 

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd