ಹಾಸನ: ತನ್ನ ಪ್ರಿಯಕರನೊಂದಿಗೆ ಸೇರಿ ಪತಿಯನ್ನೆ ಕೊಲೆ (Murder)ಮಾಡಿ ಪೆಟ್ರೋಲ್ ಹಾಕಿ ಮೂರು ದಿನ ಸುಟ್ಟಿರುವ ಭಯಾನಕ ಘಟನೆಯೊಂದು ಅರಸೀಕೆರೆಯ (Arasikere) ಹೊರ ವಲಯದ ತಿರುಪತಿ ಕ್ರಾಸ್ ಹತ್ತಿರ ನಡೆದಿದೆ.
ಮುಜಾಮಿಲ್ ಕೊಲೆಯಾಗಿರುವ ವ್ಯಕ್ತಿ ಎಂದು ಗುರುತಿಸಲಾಗಿದೆ. ಆತನ ಪತ್ನಿ ಹಾಗೂ ಆಕೆಯ ಪ್ರಿಯಕರ ಯಾಸೀನ್ ಕೊಲೆಗೈದ ಆರೋಪಿಗಳಾಗಿದ್ದಾರೆ. ಅಕ್ರಮ ಸಂಬಂಧಕ್ಕೆ ಮುಜಾಮಿಲ್ ಅಡ್ಡಿಯಾಗಿದ್ದಕ್ಕೆ ಆರೋಪಿಗಳು ಕೊಲೆ ಮಾಡಿದ್ದರೆ ಎನ್ನಲಾಗಿದೆ.
ಕೊಲೆಯಾದ ಮುಜಾಮಿಲ್‍ನ ಪತ್ನಿ ಜೊತೆ ಯಾಸೀನ್ ಅಕ್ರಮ ಸಂಬಂಧ ಹೊಂದಿದ್ದ. ಈ ವಿಚಾರ ಪತಿಗೆ ಗೊತ್ತಾಗಿ ಪತ್ನಿಯೊಂದಿಗೆ ಜಗಳ ಮಾಡಿದ್ದಾರೆ. ಹೀಗಾಗಿ ಆತನ ಕೊಲೆಗೆ ಸ್ಕೆಚ್ ಹಾಕಿದ್ದ ಪತ್ನಿ ಹಾಗೂ ಯಾಸೀನ್, ಡಿ.15ರಂದು ಮದ್ಯ ಸೇವಿಸಿದ್ದ ಮುಜಾಮಿಲ್ ನನ್ನು ನಗರದ ಹೊರ ವಲಯಕ್ಕೆ ಕರೆದೊಯ್ದು ತಲೆ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ.
ನಂತರ ಶವವನ್ನು ಚರಂಡಿಗೆ ಹಾಕಿ ಮೂರು ದಿನಗಳ ಕಾಲ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಹೊಗೆ ಬಾರಂದೆ ನೋಡಿಕೊಳ್ಳಲು ಗುಜರಿ ಅಂಗಡಿಯಿಂದ ಕಬ್ಬಿಣದ ವಸ್ತುಗಳನ್ನು ತಂದು ಚರಂಡಿ ಮುಚ್ಚಿದ್ದಾರೆ ಎನ್ನಸಲಾಗಿದೆ. ಆನಂತರ ಪತ್ನಿ
ಆಕೆಯ ಪುತ್ರ ಜಾಹೀದ್ ಖಾನ್ ಪೊಲೀಸ್ ಠಾಣೆಗೆ ತೆರಳಿ ಮುಜಾಮಿಲ್ ಕಾಣೆಯಾಗಿದ್ದ ಬಗ್ಗೆ ದೂರು ದಾಖಲಿಸಿದ್ದಾರೆ. ತನಿಖೆ ನಡೆಸಿದ ಪೊಲೀಸರು ಮುಜಾಮಿಲ್ ಶವ ಪತ್ತೆ ಹಚ್ಚಿದ್ದರು. ಆನಂತರ ತನಿಖೆ ನಡೆಸಿದಾಗ ಈ ರಹಸ್ಯ ಬಯಲಿಗೆ ಬಂದಿದೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ನಮ್ಮ ಗೆಲುವನ್ನು ಕದಿಯಲಾಗಿದೆ.. ಮಮತಾ ಕಿಡಿ
ಪಶ್ಚಿಮ ಬಂಗಾಳ ಚುನಾವಣಾ ಫಲಿತಾಂಶದ ಹಿನ್ನೆಲೆ, ಮಮತಾ ಬ್ಯಾನರ್ಜಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಮ್ಮ ಪಕ್ಷ ಟಿಎಂಸಿ ಯ ಸೋಲಿಗೆ ಚುನಾವಣಾ ಆಯೋಗವೇ ಕಾರಣ ಎಂದು ಅವರು...








