ವಿಜಯಪುರ: ವ್ಯಕ್ತಿಯೊಬ್ಬ ಶೀಲ ಶಂಕಿಸಿ ಪತ್ನಿಯ ಕೊಲೆ ಮಾಡಿರುವ ಘಟನೆಯೊಂದು ತಿಕೋಟ ತಾಲೂಕಿನ ಹುಬನೂರು ತಾಂಡಾ -2 ರಲ್ಲಿ ನಡೆದಿದೆ.
ರೇಶ್ಮಾ ರಾಠೋಡ್ (25) ಹತ್ಯೆಯಾದ ಮಹಿಳೆ. ಅಶೋಕ್ ರಾಠೋಡ್ (33) ಪತ್ನಿ ಹತ್ಯೆಗೈದ ಆರೋಪಿ ಎನ್ನಲಾಗಿದೆ. ಈತ ಪತ್ನಿಯ ಶೀಲ ಶಂಕಿಸಿ ಕೊಲೆ ಮಾಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಪ್ರತಿ ದಿನ ಕುಡಿಯುತ್ತಿದ್ದ ಆರೋಪಿ, ಶೀಲ ಶಂಕಿಸಿ ಪತ್ನಿಯನ್ನು ಹೊಡೆಯುತ್ತಿದ್ದ. ಹೀಗಾಗಿ ರೋಸಿ ಹೋದ ಮಹಿಳೆ ತಮ್ಮ ತವರು ಮನೆಗೆ ಹೋಗಿದ್ದರು.
ಹೀಗಾಗಿ ಸಿಟ್ಟಾಗಿದ್ದ ಆರೋಪಿ ಮಹಿಳೆಯ ಮೇಲೆ ಸಲಾಕೆಯಿಂದ ಹಲ್ಲೆ ಮಾಡಿದ್ದಾನೆ. ತೀವ್ರ ರಕ್ತಸ್ರಾವದಿಂದ ಮಹಿಳೆ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ. ಈ ದಂಪತಿಗೆ 11 ವರ್ಷಗಳ ಹಿಂದೆ ಮದುವೆಯಾಗಿದ್ದು, ಮೂವರು ಮಕ್ಕಳಿದ್ದಾರೆ. ಈ ಕುರಿತು ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.