ಇಸ್ಲಾಮಾಬಾದ್: ಶತೃ ರಾಷ್ಟ್ರ ಪಾಕ್ ನಲ್ಲಿ (Pakistan) ಶಿಯಾ (Shia) ಮತ್ತು ಸುನ್ನಿ (Sunni) ಮುಸ್ಲಿಂರ ಮಧ್ಯೆ ಘರ್ಷಣೆ ನಡೆದಿದ್ದು, 46 ಜನ ಸಾವನ್ನಪ್ಪಿದ್ದಾರೆ.
ಅಲ್ಲದೇ, ಈ ಘಟನೆಯಲ್ಲಿ ಇಲ್ಲಿಯವರೆಗೆ ಬರೋಬ್ಬರಿ 150ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ಕೃಷಿ ವಿಷಯದಲ್ಲಿ ಎರಡು ಕುಟುಂಬಗಳ ಮಧ್ಯೆ ಶುರುವಾದ ಜಗಳ ಘರ್ಷಣೆಗೆ ತಿರುಗಿ ಹಿಂಸಾಚಾರಕ್ಕೆ ಕಾರಣವಾಗಿದೆ. ಎರಡೂ ಬಣಗಳು ಜಾಗದ ಹಕ್ಕುಗಳಿಗೆ ಮಾತ್ರವಲ್ಲದೇ ಪಂಥೀಯ ಭಾವನೆಯ ಅಡಿ ಪರಸ್ಪರ ಸಂಘರ್ಷಕ್ಕೆ ಇಳಿದಿವೆ.
ಎರಡು ಬಣಗಳ ಸದಸ್ಯರು ಮಿಲಿಟರಿಯವರು ಬಳಸುವ ಶಸ್ತ್ರಾಸ್ತ್ರಗಳನ್ನು ಹೊಂದಿದ್ದರಿಂದ ಹೆಚ್ಚಿನ ಸಾವು-ನೋವುಗಳು ಸಂಭವಿಸಿವೆ ಎನ್ನಲಾಗಿದೆ.
ಈ ವಿವಾದ ಅಲ್ಲಿನ ಕುರ್ರಂ ಜಿಲ್ಲೆಯ 10 ಪ್ರದೇಶಗಳಿಗೆ ಹಬ್ಬಿದೆ ಎನ್ನಲಾಗಿದೆ.