ಗುರುವಾರದಿಂದ ಶಿಫ್ಟ್ ಲೆಸ್ ಮೆಟ್ರೋ ಸಂಚಾರ
ಬೆಂಗಳೂರು : ಅನ್ ಲಾಕ್ ಹಿನ್ನೆಲೆ ನಗರದಲ್ಲಿ ಹಂತ ಹಂತವಾಗಿ ಮೆಟ್ರೋ ಸಂಚಾರ ಪುನಾರಂಭಗೊಂಡಿದೆ.
ಸದ್ಯ ಮೆಟ್ರೊದಲ್ಲಿ ಸ್ಮಾರ್ಟ್ ಕಾರ್ಡ್ ಬಳಕೆದಾರರಿಗೆ ಮಾತ್ರ ಪ್ರಯಾಣಿಸಲು ಅವಕಾಶ ನೀಡಲಾಗಿದೆ.
ಜೊತೆಗೆ 2 ಶಿಫ್ಟ್ ಮಾತ್ರ ಮೆಟ್ರೊ ಸಂಚರಿಸುತ್ತಿದೆ. ಹೀಗಾಗಿ ಬಿಎಂಆರ್ ಸಿಎಲ್ ವಿರುದ್ಧ ಪ್ರಯಾಣಿಕರು ಆಕ್ರೋಶ ಹೊರಹಾಕಿದ್ದರು.
ಇದೀಗ ಪ್ರಯಾಣಿಕರ ಒತ್ತಡಕ್ಕೆ ಮಣಿದಿರುವ ಬಿಎಂಆರ್ ಸಿಎಲ್ ಸಂಪೂರ್ಣ ಪ್ರಮಾಣದಲ್ಲಿ ಮೆಟ್ರೋ ಓಡಿಸಲು ತೀರ್ಮಾನಿಸಿದೆ.
ಪ್ರಸ್ತುತ ಸಂಜೆ 7 ಗಂಟೆಯಿಂದ ನೈಟ್ ಕಫ್ರ್ಯೂ ಜಾರಿಯಲ್ಲಿರುವ ಕಾರಣ ನೇರಳೆ ಹಾಗೂ ಹಸಿರು ಮಾರ್ಗಗಳಲ್ಲಿ ಬೆಳಗ್ಗೆ 7 ರಿಂದ ಸಂಜೆ 6 ತನಕ ಮೆಟ್ರೋ ಓಡಾಟ ಇವೆ. ಗುರುವಾರದಿಂದ ಶಿಫ್ಟ್ ಲೆಸ್ ಸಂಚಾರ ಇರಲಿದೆ.
ಇದಲ್ಲದೆ ಕೊರೊನಾದಿಂದಾಗಿ ಕಳೆದ ಒಂದೂವರೆ ವರ್ಷದಿಂದ ಮೆಟ್ರೋದಲ್ಲಿ ಟೋಕನ್ ಟೆಕೆಟಿಂಗ್ ವ್ಯವಸ್ಥೆಯನ್ನು ಸ್ಥಗಿತಗೊಳಿಸಲಾಗಿತ್ತು.
ಸೋಂಕು ಹರಡದಂತೆ ತಡೆಯುವ ಸಲುವಾಗಿ ಕೇವಲ ಸ್ಮಾರ್ಟ್ ಕಾರ್ಡ್ ಹೊಂದಿರುವವರಿಗೆ ಮಾತ್ರ ಪ್ರಯಾಣಕ್ಕೆ ಅವಕಾಶ ನೀಡಲಾಗಿತ್ತು.
ಇದೀಗ ಸೋಂಕು ನಿಯಂತ್ರಣಕ್ಕೆ ಬಂದ ಹಿನ್ನೆಲೆ ಟೋಕನ್ ಟಿಕೆಟ್ ನೀಡಲು ಬಿಎಂಆರ್ ಸಿಎಲ್ ನಿರ್ಧರಿಸಲಾಗಿದೆ.