Shikhar Dhawan | ಕೊಹ್ಲಿ ದಾಖಲೆ ಮೇಲೆ ಶಿಖರ್ ಕಣ್ಣು
ವೆಸ್ಟ್ ಇಂಡೀಸ್ ವಿರುದ್ಧ ಟೀಂ ಇಂಡಿಯಾ ಇಂದು ಏಕದಿನ ಸರಣಿಯ ಮೊದಲ ಪಂದ್ಯವನ್ನಾಡಲಿದೆ.
ಈ ಹಿನ್ನೆಲೆಯಲ್ಲಿ ಟೀಂ ಇಂಡಿಯಾದ ಆರಂಭಿಕ ಆಟಗಾರ ಶಿಖರ್ ಧವನ್ ಒಂದು ಅಪರೂಪದ ದಾಖಲೆ ಮೇಲೆ ಕಣ್ಣಾಕಿದ್ದಾರೆ.
ವಿಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾವನ್ನು ಶಿಖರ್ ಧವನ್ ಮುನ್ನೆಡಸಲಿದ್ದಾರೆ.
ಪೋರ್ಟ್ ಆಫ್ ಸ್ಪೇನ್ ವೇದಿಕೆ ಭಾರತ ಮತ್ತು ವೆಸ್ಟ್ ಇಂಡೀಸ್ ಕಾಳಗಕ್ಕೆ ಸಜ್ಜಾಗಿದೆ.
ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಜಸ್ ಪ್ರಿತ್ ಬುಮ್ರಾ, ಶಮಿ, ರಿಷಬ್ ಪಂತ್ , ಹಾರ್ದಿಕ್ ಪಾಂಡ್ಯ ಅನುಪಸ್ಥಿತಿಯಲ್ಲಿ ಟೀಂ ಇಂಡಿಯಾ ಇಂದು ಕೆರಿಬಿಯನ್ನರನ್ನು ಎದುರಿಸಲಿದೆ.
ಕಳೆದ ವರ್ಷದ ಶ್ರೀಲಂಕಾ ಪ್ರವಾಸದ ಬಳಿಕ ಟೀಂ ಇಂಡಿಯಾದ ಹಿರಿಯ ಆಟಗಾರ ಶಿಖರ್ ಧವರ್ ಭಾರತ ತಂಡವನ್ನು ಮುನ್ನೆಡಸಲಿದ್ದಾರೆ.
ಈ ನಡುವೆ ಅವರು ಕೆಲವು ದಾಖಲೆಗಳನ್ನುತಮ್ಮ ಹೆಸರಿಗೆ ಬರೆದುಕೊಳ್ಳುವ ಸಾಧ್ಯತೆಗಳಿವೆ.
ವೆಸ್ಟ್ ಇಂಡೀಸ್ ನೆಲದಲ್ಲಿ ಅತ್ಯಧಿಕ ಏಕದಿನ ಪಂದ್ಯಗಳನ್ನಾಡಿದ ಟೀಂ ಇಂಡಿಯಾ ಆಟಗಾರನಾಗಿ ಧವನ್ ದಾಖಲೆ ಬರೆಯಲಿದ್ದಾರೆ.

ಇಲ್ಲಿಯವರೆಗೂ 14 ಏಕದಿನ ಪಂದ್ಯಗಳನ್ನಾಡಿರುವ ಧವನ್, ಇಂದಿನ ಏಕದಿನದೊಂದಿಗೆ 15ನೇ ಮ್ಯಾಚ್ ಆಗಿರಲಿದೆ.
ಅದರೊಂದಿಗೆ ವಿರಾಟ್ ಕೊಹ್ಲಿ ಅವರ 15 ಏಕದಿನ ಪಂದ್ಯಗಳ ದಾಖಲೆಯನ್ನು ಸರಿಗಟ್ಟಲಿದ್ದಾರೆ.
ವೆಸ್ಟ್ ಇಂಡೀಸ್ ನೆಲದಲ್ಲಿ ಶಿಖರ್ 14 ಪಂದ್ಯಗಳನ್ನಾಡಿದ್ದು, 348 ರನ್ ಗಳನ್ನು ಗಳಿಸಿದ್ದಾರೆ.
ವಿಂಡೀಸ್ ವಿರುದ್ಧ ಅತ್ಯಧಿಕ ರನ್ ಸಾಧಿಸಿದ ಭಾರತೀಯ ಆಟಗಾರರ ಪಟ್ಟಿಯಲ್ಲಿ ಧವನ್ ಐದನೇ ಸ್ಥಾನದಲ್ಲಿದ್ದಾರೆ.
ಒಂದು ವೇಳೆ ಈ ಮೂರು ಏಕದಿನ ಪಂದ್ಯಗಳಲ್ಲಿ ಧವನ್ 110 ರನ್ ಗಳಿಸಿದ್ರೆ ಧೋನಿ, ರೋಹಿತ್, ಯುವರಾಜ್ ಸಿಂಗ್ ಅವರನ್ನು ದಾಟಿ ಎರಡನೇ ಸ್ಥಾನಕ್ಕೇರಲಿದ್ದಾರೆ.
ವಿಂಡೀಸ್ ನೆಲದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಆಟಗಾರರು
ವಿರಾಟ್ ಕೊಹ್ಲಿ 15 ಪಂದ್ಯ 790 ರನ್
ಎಂಎಸ್ ಧೋನಿ 15 ಪಂದ್ಯ 458 ರನ್
ಯುವರಾಜ್ ಸಿಂಗ್ 14 ಪಂದ್ಯ 419 ರನ್
ರೋಹಿತ್ ಶರ್ಮಾ 14 ಪಂದ್ಯ 408 ರನ್
ಶಿಖರ್ ಧವನ್ 14 ಪಂದ್ಯ 348 ರನ್
ಆದ್ರೆ ಶಿಖರ್ ಧವನ್ ಇಂಗ್ಲೆಂಡ್ ವಿರುದ್ಧದ ನಡೆದ ಏಕದಿನ ಸರಣಿಯಲ್ಲಿ ಅಷ್ಟಾಗಿ ಮಿಂಚಲಿಲ್ಲ. ಮೂರು ಏಕದಿನ ಪಂದ್ಯಗಳಲ್ಲಿ 31 ರನ್ ಮಾತ್ರ ಗಳಿಸಿದ್ದಾರೆ.








