ಗಬ್ಬರ್ ಸಿಂಗ್ ಶಿಖರ್ ಧವನ್ ಅಬ್ಬರ ಮುಗೀತಾ..?
ಆರಂಭಿಕ ಆಟಗಾರನಾಗಿ ಭಾರತಕ್ಕೆ ಹಲವು ಅದ್ಭುತ ವಿಜಯಗಳನ್ನು ತಂದುಕೊಟ್ಟಿರುವ ಗಬ್ಬರ್ ಸಿಂಗ್ ಖ್ಯಾತಿಯ ಶಿಖರ್ ಧವನ್ ಮತ್ತೆ ಭಾರತ ತಂಡಕ್ಕೆ ಆಯ್ಕೆ ಆಗುವುದು ಅನುಮಾನವಾಗಿದೆ.
ಸಾಮಾನ್ಯವಾಗಿ ಶಿಖರ್ ಧವನ್ ಅಂದ್ರೆ ನೆನಪಾಗೋದು ಅವರ ಗಬ್ಬರ್ ಸಿಂಗ್ ಆಟ. ಮುಖಮೂತಿ ನೋಡದೇ ಬೌಲರ್ ಗಳನ್ನು ದಂಡಿಸಿರುವ ಶಿಖರ್ ಆಟಕ್ಕೆ ಎಂದೋ ಕ್ರೀಡಾಭಿಮಾನಿಗಳು ಪಿಧಾ ಆಗಿದ್ದಾರೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಗಬ್ಬರ್ ಸಿಂಗ್ ಅಬ್ಬರ ಕಡಿಮೆಯಾಗಿದೆ. ಕೆಲ ದಿನಗಳ ಹಿಂದೆ ಶಿಖರ್ ಧವನ್, ದಕ್ಷಿಣ ಆಫ್ರಿಕಾ ಪ್ರವಾಸಕ್ಕಾಗಿ ಮತ್ತೆ ಟೀಂ ಇಂಡಿಯಾ ಸೇರಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದ್ರೆ ವಿಜಯ್ ಹಜಾರೆಯಲ್ಲಿ ಧವನ್ ಪ್ರದರ್ಶನ ನೋಡಿದರೇ ಟೀಂ ಇಂಡಿಯಾಗೆ ಆಯ್ಕೆ ಆಗೋದು ಡೌಟ್ ಎನ್ನಲಾಗುತ್ತಿದೆ.
ಪ್ರಸ್ತುತ ವಿಜಯ್ ಹಜಾರೆ ಟೂರ್ನಿಯಲ್ಲಿ ಮೂರು ಮ್ಯಾಚ್ ಗಳನ್ನ ಆಡಿರುವ ಧವನ್ ಕೇವಲ 26 ರನ್ ಮಾತ್ರ ಗಳಿಸಿದ್ದಾರೆ. ಜಾರ್ಖಂಡ್ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ ಶಿಖರ್ ಶೂನ್ಯ ಸುತ್ತಿದ್ದರೇ, ಹೈದರಾಬಾದ್‌ನೊಂದಿಗಿನ ಎರಡನೇ ಪಂದ್ಯದಲ್ಲಿ ಕೇವಲ 12 ರನ್‌ಗಳು ಮಾತ್ರ ಸಾಧಿಸಿ ಪೆವಿಲಿಯನ್ ಸೇರಿಕೊಂಡರು. ಇನ್ನು ಶನಿವಾರ ಉತ್ತರ ಪ್ರದೇಶದೊಂದಿಗೆ ನಡೆದ ಪಂದ್ಯದಲ್ಲಿ 14 ರನ್‌ಗಳನ್ನು ಮಾತ್ರ ಸಾಧಿಸಿದರು.