Shimoga | ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ – ಇಬ್ಬರು ಸಾವು
ಶಿವಮೊಗ್ಗ : ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಹೊಡೆದು ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಶಿವಮೊಗ್ಗ ಹೊರವಲಯದ ಅಬ್ಬಲಗೆರೆ ಬಳಿ ನಡೆದಿದೆ.
ನ್ಯಾಮತಿ ಮೂಲದ ರಾಮ್ ಕುಮಾರ್ (22) ಹಾಗು ಮಲ್ಲಿಕಾರ್ಜುನ (30) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಐಪಿಸಿ ಕಂಪನಿಯಲ್ಲಿ ಕಾರ್ಮಿಕರಾಗಿರುವ ಇವರಿಬ್ಬರು ರಾತ್ರಿ ಪಾಳಿ ಕೆಲಸ ಮಾಡಿ, ಮುಂಜಾನೆ ಶಿಫ್ಟ್ ಮುಗಿಸಿಕೊಂಡು ಮನೆಗೆ ವಾಪಸ್ಸಾಗುತ್ತಿದ್ದರು.

ಇದೇ ಸಂದರ್ಭದಲ್ಲಿ ಅಬ್ವಲಗೆರೆ ಬಳಿ ಡಿಸೈಲ್ ಖಾಲಿಯಾಗಿ ಲಾರಿಯೊಂದು ರಸ್ತೆ ಬದಿ ನಿಂತಿತ್ತು.
ಬೈಕ್ ನಲ್ಲಿ ಬಂದವರಿಗೆ ತಕ್ಷಣಕ್ಕೆ ಎದುರಾದ ವಾಹನ ತಪ್ಪಿಸಲು ಹೋಗಿ ನೇರವಾಗಿ ಲಾರಿಗೆ ಡಿಕ್ಕಿ ಹೊಡೆದಿದ್ದಾರೆ.
ಪರಿಣಾಮ ಇಬ್ಬರು ಸ್ಥಳದಲ್ಲಿ ಸಾವನ್ಬಪ್ಪಿದ್ದಾರೆ. ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.