Shimoga | ಬೋರ್ ವೆಲ್ ನಲ್ಲಿ ಉಕ್ಕುತ್ತಿರುವ ನೀರು
ಶಿವಮೊಗ್ಗ : ಮಲೆನಾಡು ಭಾಗದಲ್ಲಿ ಕಳೆದೊಂದು ವಾರದಿಂದ ನಿರಂತರ ಮಳೆ ಆಗುತ್ತಿದೆ.
ಇದರಿಂದ ಶಿವಮೊಗ್ಗದಲ್ಲಿ ಅಂತರ್ಜಲ ಮಟ್ಟ ಹೆಚ್ಚಳವಾಗಿದೆ.
ಪರಿಣಾಮ ಬೋರ್ ವೆಲ್ ನಲ್ಲಿ ಮೋಟರ್ ಸಹಾಯವಿಲ್ಲದೆ ನೀರು ಉಕ್ಕುತ್ತಿವೆ.
ಶಿವಮೊಗ್ಗದ ಹೊಸನಗರ ತಾಲೂಕಿನ ಹಾರೋಹಿತ್ತಲಿನಲ್ಲಿ ಈ ಘಟನೆ ನಡೆದಿದೆ.

ಹಾರೋಹಿತ್ತಲು ಗ್ರಾಮದ ಹೆಡತ್ರಿ ಷಣ್ಮುಖಪ್ಪ ಎಂಬುವವರ ಜಮೀನಿನಲ್ಲಿ ಇರುವ ಬೋರ್ವೆಲ್ ನಲ್ಲಿ ನೀರು ಉಕ್ಕುತ್ತಿವೆ.
ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ಅಲ್ಲದೇ ಗ್ರಾಮಸ್ಥರು ಷಣ್ಮುಖಪ್ಪ ಜಮೀನಿಗೆ ಭೇಟಿ ನೀಡುತ್ತಿದ್ದಾರೆ.