ಶಿವಮೊಗ್ಗ: ಈ ಬಾರಿ ರಾಜ್ಯದ್ಯಾಂತ ಉತ್ತಮ ಮಳೆಯಾಗಿದೆ. ಮಲೆನಾಡು ಬಾಗದಲ್ಲಂತೂ ಈ ಬಾರೀ ದಾರಕಾರ ಮಳೆಯಾಗಿದ್ದು, ಹಳ್ಳ – ಕೊಳ್ಳ, ನದಿ, ಕೆರೆ ಕಟ್ಟೆಗಳು ಸಂಪೂರ್ಣ ಭರ್ತಿಯಾಗಿವೆ. ಅದರಂತೆ ಸತತ ಮೂರನೇ ವರ್ಷವೂ ಭದ್ರ ಜಲಾಶಯ ಗರಿಷ್ಠಮಟ್ಟ ತಲುಪುತ್ತಿದ್ದು, ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ, ಚಿತ್ರಗುರ್ಗ ಜಿಲ್ಲೆಗಳ ಜನರಲ್ಲಿ ಸಂತಸ ಮೂಡಿಸಿದೆ.
ಭದ್ರೆಯ ಭರ್ತಿಗೆ ನಾಲ್ಕು ಅಡಿ ಬಾಕಿ ಇದ್ದು ಯಾವುಧೇ ಕ್ಷಣದಲ್ಲಿ ಕ್ರಸ್ಟ್ ಗೇಟ್‌ಗಳನ್ನು ತೆರೆದು ನದಿಗೆ ನೀರು ಹರಿಸುವ ಸಾಧ್ಯತೆ ಇದೆ. ಹಿಂದಿನ ಎರಡು ವರ್ಷಗಳೂ ಭದ್ರಾ ಜಲಾಶಯ ಗರಿಷ್ಠ ಮಟ್ಟ 186 ತಲುಪಿತ್ತು. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ, ಶಿವಮೊಗ್ಗ ಜಿಲ್ಲೆಯ ಭದ್ರಾವತಿ, ಶಿವಮೊಗ್ಗ, ದಾವಣಗೆರೆ ಜಿಲ್ಲೆಯ ಚನ್ನಗಿರಿ, ಹೊನ್ನಾಳಿ, ದಾವಣಗೆರೆ, ಹರಿಹರ, ಹರಪನಹಳ್ಳಿ ತಾಲ್ಲೂಕಿನ 1,82,818 ಹೆಕ್ಟೇರ್ ಜಮೀನುಗಳಿಗೆ ಭದ್ರಾ ಜಲಾಶಯ ನೀರುಣಿಸುತ್ತದೆ.