ಟ್ರಂಪ್ ಸೋಲಿನಿಂದ ಭಾರತ ಏನಾದರೂ ಪಾಠ ಕಲಿತರೆ ಒಳ್ಳೆಯದು : ಶಿವಸೇನಾ ( Shiv Sena )
ಮಹಾರಾಷ್ಟ್ರ : ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಜೋ ಬಿಡೆನ್ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಈ ಬಗ್ಗೆ ಶಿವಸೇನಾ ( Shiv Sena ) ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಲಿನಿಂದ ಭಾರತ ಏನಾದರು ಪಾಠ ಕಲಿತರೆ ಒಳ್ಳೆಯದು ಎಂದು ಅಮೆರಿಕ ಅಧ್ಯಕ್ಷೀಯ ಚುನಾವಣಾ ಸನ್ನಿವೇಶವನ್ನು ಬಿಹಾರ ವಿಧಾನಸಭಾ ಚುನಾವಣೆಯೊಂದಿಗೆ ಹೋಲಿಸಿ ಹೇಳಿದೆ.
ತನ್ನ ಮುಖವಾಣಿ `ಸಾಮ್ನಾ’ ಮೂಲಕ ಶಿವಸೇನೆ, “ಟ್ರಂಪ್ ಎಂದಿಗೂ ದೇಶದ ಮುಖ್ಯಸ್ಥ ಸ್ಥಾನಕ್ಕೆ ಅರ್ಹರಲ್ಲ. ಅಮೆರಿಕ ಜನರು ಟ್ರಂಪ್ ಬಗ್ಗೆ ಮಾಡಿದ ತಪ್ಪನ್ನು ಕೇವಲ ನಾಲ್ಕು ವರ್ಷಗಳಲ್ಲಿ ಸರಿಪಡಿಸಿದ್ದಾರೆ.
ಟ್ರಂಪ್ ಗೆ ಕನಿಷ್ಠ ಒಂದು ಭರವಸೆಯನ್ನೂ ಸಹ ಪೂರೈಸಲು ಸಾಧ್ಯವಾಗಲಿಲ್ಲ. ನಾವು ಟ್ರಂಪ್ ಸೋಲಿನಿಂದ ಏನನ್ನಾದರು ಕಲಿತರೆ ಒಳ್ಳೆಯದು” ಎಂದು ಅಭಿಪ್ರಾಯಪಟ್ಟಿದೆ.
ಎಟಿಎಂ ಕಾರ್ಡ್ ನೀಡಲು ಪತ್ನಿಯ ನಿರಾಕರಣೆ – ಪತ್ನಿಯನ್ನು ಥಳಿಸಿದ ಪತಿ
ಅಲ್ಲದೆ ಅಮೆರಿಕದಲ್ಲಿ ಈಗಾಗಲೇ ಅಧಿಕಾರ ಬದಲಾಗಿದೆ. ಬಿಹಾರ ವಿಧಾನಸಭಾ ಚುನಾವಣೆಯಲ್ಲಿ, ನಿತೀಶ್ ಕುಮಾರ್ ನೇತೃತ್ವದ ಎನ್ ಡಿಎ ಸ್ಪಷ್ಟವಾಗಿ ಸೋತಿದೆ.
ದೇಶ ಮತ್ತು ರಾಜ್ಯದಲ್ಲಿ ನಮ್ಮನ್ನು ಹೊರತುಪಡಿಸಿ ಪರ್ಯಾಯ ಆಯ್ಕೆಗಳಿಲ್ಲ ಎಂಬ ಭ್ರಮೆಯಲ್ಲಿರುವ ನಾಯಕರನ್ನು ತೆಗೆದುಹಾಕುವ ಕೆಲಸವನ್ನು ಜನ ಮಾಡಬೇಕಿದೆ” ಎಂದಿದೆ.
ಇದೇ ವೇಳೆ ಬಿಜೆಪಿ ವಿರುದ್ಧ ಪರೋಕ್ಷವಾಗಿ ದಾಳಿ ಮಾಡಿರುವ ಶಿವಸೇನಾ, ನಮ್ಮ ದೇಶದಲ್ಲಿ ಟ್ರಂಪ್ ಅವರನ್ನು ಎಷ್ಟು ಪ್ರೀತಿಯಿಂದ ಸ್ವಾಗತಿಸಲಾಯಿತು ಎಂಬುದನ್ನು ಮರೆಯಬಾರದು.
ತಪ್ಪು ಮನುಷ್ಯನೊಂದಿಗೆ ನಿಲ್ಲುವುದು ನಮ್ಮ ಸಂಸ್ಕøತಿಯಲ್ಲ. ಭಾರತೀಯ ಮೂಲದ ಕಮಲಾ ಹ್ಯಾರಿಸ್ ಅಮೆರಿಕದ ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ.
ಆದರೆ, ಟ್ರಂಪ್ ಆಕೆಯ ಸಾಧನೆಯನ್ನು ಖಂಡಿಸಿದರು, ಅವರು ಮಹಿಳೆಯನ್ನು ಗೌರವಿಸಲಿಲ್ಲ. ನಮ್ಮ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಂತಹ ವ್ಯಕ್ತಿಯನ್ನು ಬೆಂಬಲಿಸಿದರು.
ಶೌಚಾಲಯದ ನೀರನ್ನು ಬಳಸಿ ಪಾನಿಪೂರಿ ತಯಾರಿಸುತ್ತಿದ್ದ ವ್ಯಕ್ತಿಯ ಬಂಧನ
ಭಾರತ ನಮಸ್ತೆ ಟ್ರಂಪ್ ಕಾರ್ಯಕ್ರಮ ಆಯೋಜಿಸಿದರೂ ಅಮೆರಿಕಾದ ಜನರು ಟ್ರಂಪ್‍ಗೆ ‘ಬೈ-ಬೈ’ ಎಂದು ಹೇಳುವ ಮೂಲಕ ತಮ್ಮ ತಪ್ಪು ಸರಿಪಡಿಸಿದ್ದಾರೆ.
ಅದೇ ರೀತಿ, ಪ್ರಧಾನಿ ಮೋದಿ, ನಿತೀಶ್ ಕುಮಾರ್ ಸೇರಿದಂತೆ ಇತರ ನಾಯಕರು ಯುವ ತೇಜಸ್ವಿ ಯಾದವ್ ಅವರ ಮುಂದೆ ನಿಲ್ಲಲು ಸಾಧ್ಯವಿಲ್ಲ” ಎಂದು ಟೀಕಿಸಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel