ಆಸ್ಪತ್ರೆ ಸೇರಿದ ಮಾಲಿಕರನ್ನ ನೋಡಲು ಬಾಗಿಲ ಬಳಿ ನಿಂತ ಶ್ವಾನ…
777 ಚಾರ್ಲಿ ಸಿನಿಮಾದಲ್ಲಿ ಹೀರೋ ಆಸ್ಪತ್ರೆ ಸೇರಿದಾಗ ನಾಯಿ ಆಸ್ಪತ್ರೆಯ ಹೊರಗಡೆಯೇ ಕಾಯುವ ದೃಶ್ಯವೊಂದು ಸಿನಿಮಾ ನೋಡಿದ ಪ್ರೇಕ್ಷಕರ ಮನಸ್ಸನ್ನ ತಟ್ಟಿತ್ತು. ಈಗ ಅಂಥಹದೇ ಘಟನೆಯೊಂದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೋಕಿನಲ್ಲಿ ವರದಿಯಾಗಿದೆ.
ಪಶುವೈದ್ಯ ಡಾ.ಯುವರಾಜ್ ಎಂಬವರು, ಅಲ್ಲಿನ ಆಸ್ಪತ್ರೆಯೊಂದರ ಮುಂದೆ ತನ್ನ ಮಾಲೀಕನನ್ನು ನೋಡಲು ನಾಯಿಯೊಂದು ಕಾಯುತ್ತಾ ಕುಳಿತಿರುವ ಫೋಟೋವನ್ನು ತಮ್ಮ ಪೇಸ್ ಬುಕ್ ಖಾತೆಯಲ್ಲಿ ಹಾಕಿಕೊಂಡಿದ್ದಾರೆ. ಈ ಪೋಟೋ ಎಫ್ ಬಿ ಯಲ್ಲಿ ಸಖತ್ ಸುದ್ದಿ ಮಾಡುತ್ತಿದೆ.
ಫೇಸ್ಬುಕ್ನಲ್ಲಿರೋ ಫೋಟೋದಲ್ಲಿ ಕಾಣಸಿಕ್ಕಿರುವ ನಾಯಿ ಹೆಸರು ಪುಪ್ಪಿ. ತೀರ್ಥಹಳ್ಳಿಯ ಸೊಪ್ಪುಗುಡ್ಡೆ ನಿವಾಸಿ ನಾಗರತ್ನ ಶಾಸ್ತ್ರಿ ಎಂಬವರು ಸಾಕಿದ್ದ ನಾಯಿಯದು. ನಾಗರತ್ನ ಶಾಸ್ತ್ರಿಯವರು ಅನಾರೋಗ್ಯದಿಂದ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆಗಿನಿಂದಲೂ ಸಾಕುನಾಯಿ ಪುಪ್ಪಿ ಆಸ್ಪತ್ರೆಯ ಬಾಗಿಲು ಕಾಯಲು ಆರಂಭಿಸಿದೆ. ಅಲ್ಲಿಯೇ ಕಾವಲು ಕಾಯ್ತಿದ್ದ, ಪುಪ್ಪಿ ನಾಗರತ್ನರವರನ್ನು ಅಡ್ಮಿಟ್ ಮಾಡಿದ್ದ ವಾರ್ಡ್ ಕಡೆ ನೋಡುತ್ತಾ, ಈಗ ಬರುತ್ತಾರೇನೋ? ಎಂಬಂತೆ ಕಾಯುತ್ತಿತ್ತು. ಅಲ್ಲದೆ ನಾಗರತ್ನರವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುತ್ತಲೇ ನಾಯಿ ತನ್ನದೇ ದಾಟಿಯಲ್ಲಿ ಕುಣಿಯಲು ಆರಂಭಿಸಿತ್ತು ಎನ್ನುತ್ತಾರೆ ಅಲ್ಲಿನ ಆಸ್ಪತ್ರೆ ಸಿಬ್ಬಂದಿ
ಇನ್ನೂ ಈ ಬಗ್ಗೆ ಸುದ್ದಿ ಮೀಡಿಯಾವೊಂದಕ್ಕೆ ಮಾತನಾಡಿರುವ ನಾಗರತ್ನರವರ ಪುತ್ರಿ ಸುಧಾ ಒಂದುವರೆ ತಿಂಗಳಿನ ನಾಯಿಯನ್ನು ತಂದು ಸಾಕಿದ್ದೇವೆ, ಈಗದ್ದಕ್ಕೆ 8 ತಿಂಗಳು. ಅಮ್ಮನಿಗೆ ವಯಸ್ಸಾಗಿದ್ದು, ಅನಾರೋಗ್ಯ ಹಿನ್ನೆಲೆ ಆಸ್ಪತ್ರೆಗೆ ಸೇರಿಸಿದ್ದೆವು. ಈ ಪುಪ್ಪಿ ಆಸ್ಪತ್ರೆಗೆ ನಮ್ಮ ಜೊತೆಗೆ ಬಂದು ನಿಲ್ಲುತ್ತಿತ್ತು. ಅದು ನಮ್ಮನೆ ನಾಯಿ ಎಂಬುದು ಎಲ್ಲರಿಗೂ ಗೊತ್ತಾಗಿ ಹೋಗಿದೆ ಎಂದಿದ್ಧಾರೆ. ಅಲ್ಲದೆ ಅಮ್ಮನ ನಿಧನದ ಬಳಿಕ ಪುಪ್ಪಿಯು ಆಹಾರವನ್ನು ಸೇವಿಸ್ತಿಲ್ಲವಂತೆ. ಮನೆಯಲ್ಲಿ ಯಾರಿಗೆ ಆರೋಗ್ಯ ಸಮಸ್ಯೆಯಾದರೂ ಪುಪ್ಪಿ ಸಹ ಡಲ್ ಆಗುತ್ತದೆ ಎನ್ನುತ್ತಾರೆ ಸುಧಾ.
Shivamogga: A dog standing near the door to see its owner in the hospital…