Shivamogga | ಅಗ್ನಿಪಥ್ ಯೋಜನೆಯ ವಿರುದ್ದ ಹೋರಾಟ ರಾಜಕೀಯಪ್ರೇರಿತ :  ಬಿ.ವೈ.ರಾಘವೇಂದ್ರ

1 min read
shivamogga-b-y-ragavendra-spoke-about-agneepath-scheme saaksha tv

shivamogga-b-y-ragavendra-spoke-about-agneepath-scheme saaksha tv

Shivamogga | ಅಗ್ನಿಪಥ್ ಯೋಜನೆಯ ವಿರುದ್ದ ಹೋರಾಟ ರಾಜಕೀಯಪ್ರೇರಿತ :  ಬಿ.ವೈ.ರಾಘವೇಂದ್ರ

ಶಿವಮೊಗ್ಗ : ಅಗ್ನಿಪಥ್ ಯೋಜನೆಯನ್ನು ವಿರೋಧಿಸಿ ದೇಶದಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ.

ಈ ಬಗ್ಗೆ ಸಂಸದ ಬಿ.ವೈ. ರಾಘವೇಂದ್ರ ಪ್ರತಿಕ್ರಿಯೆ ನೀಡಿದ್ದು, ದುರುದ್ದೇಶ ಹಾಗೂ ರಾಜಕೀಯಪ್ರೇರಿತವಾಗಿ ಅಗ್ನಿಪಥ್ ಯೋಜನೆಯ ವಿರುದ್ದ ಹೋರಾಟ ನಡೆಸಲಾಗಿದೆ ಎಂದು ಆರೋಪಿಸಿದ್ದಾರೆ.

ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದರು,. ಅಗ್ನಿಪಥ್ ಯೋಜನೆ ವಿರುದ್ದದ ಹೋರಾಟ ಸರಿಯಲ್ಲ.

ಇದನ್ನು ಎರಡೇ ದಿನದಲ್ಲಿ ತಡೆಯುವ ಪ್ರಯತ್ನ ಮಾಡಲಾಗಿದೆ. ಇದರ ಹಿಂದೆ ಕಾಣದ ಕೈಗಳ ಕೆಲಸವಿದೆ.

shivamogga-b-y-ragavendra-spoke-about-agneepath-scheme saaksha tv
shivamogga-b-y-ragavendra-spoke-about-agneepath-scheme saaksha tv

ಈ ಯೋಜನೆಯಲ್ಲಿ ಸಣ್ಣ ವಯಸ್ಸಿನಲ್ಲಿಯೇ ದೇಶಸೇವೆ ಮಾಡುವ ಅವಕಾಶ ಕಲ್ಪಿಸಲಾಗಿದೆ. ಇದಕ್ಕಾಗಿ ಅವರಿಗೆ ಒಳ್ಳೆಯ ಸಂಬಳವನ್ನೂ ಸಹ ನೀಡಲಾಗುತ್ತದೆ.

ಸೇವೆ ಮುಗಿಸಿ ಬಂದ ಮೇಲೆ ಅವರ ಕೈಗೆ ಒಂದು ಹಿಡಿಗಂಟು ಕೊಡಲಾಗುತ್ತದೆ ಎಂದು ಯೋಜನೆ ಬಗ್ಗೆ ಸಂಸದರು ಮಾಹಿತಿ ನೀಡಿದರು.  

ಅಗ್ನಿಪಥ್ ಯೋಜನೆ ವಿರುದ್ಧ ಉತ್ತರ ಪ್ರದೇಶ, ತೆಲೆಂಗಾಣ ಸೇರಿದಂತೆ ಹಲವು ರಾಜ್ಯಗಳಲ್ಲಿ ಯುವಕರು ಪ್ರತಿಭಟನೆ ನಡೆಸುತ್ತಿದ್ದಾರೆ.

ಇದೀಗ ರಾಜ್ಯದಲ್ಲಿ ಅಗ್ನಿಪಥ್ ಯೋಜನೆ ವಿರೋಧಿಸಿ ಪ್ರತಿಭಟನೆಗಳು ನಡೆದಿವೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd