ಶಿವಮೊಗ್ಗ – ಕಲ್ಲಂಗಡಿ ಹಣ್ಣಿನಿಂದ ಬೆಲ್ಲ ತಯಾರಿಸಿದ ಹೋಟೆಲ್ ಉದ್ಯಮಿ ಜಯರಾಮ್ ಎನ್ ಶೆಟ್ಟಿ
ನಡೆಯುತ್ತಿರುವ ಜಾಗತಿಕ ಕೊರೋನವೈರಸ್ ಸಾಂಕ್ರಾಮಿಕದಿಂದ ಅನಿಶ್ಚಿತತೆ ತಲೆದೋರಿದೆ. ಮುಂದೇನು ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ.
ಆದರೆ ಶಿವಮೊಗ್ಗ ಜಿಲ್ಲೆಯ ಹೋಟೆಲ್ ಉದ್ಯಮಿ, ಕಲ್ಲಂಗಡಿ ಕೃಷಿಕರ ಬಿಕ್ಕಟ್ಟಿಗೆ ಸಿಹಿ ಪರಿಹಾರವನ್ನು ನೀಡಿದ್ದಾರೆ.
ಮುಂಬೈಯಲ್ಲಿ ಹೋಟೆಲ್ ನಡೆಸುತ್ತಿದ್ದ ಮತ್ತು 30 ವರ್ಷಗಳಿಂದ ಮಹಾನಗರದಲ್ಲಿ ವಾಸಿಸುತ್ತಿದ್ದ 42 ವರ್ಷದ ಜಯರಾಮ್ ಎನ್ ಶೆಟ್ಟಿ ಅವರು ಕಳೆದ ವರ್ಷ ಲಾಕ್ ಡೌನ್ ಸಮಯದಲ್ಲಿ ತನ್ನ ಗ್ರಾಮಕ್ಕೆ ಮರಳಿದ್ದರು. ಬಳಿಕ ಅವರು ತಮ್ಮ ಕುಟುಂಬದ ಭೂಮಿಯಲ್ಲಿ ಕಲ್ಲಂಗಡಿ ಹಣ್ಣು ಬೆಳೆಸಲು ಪ್ರಾರಂಭಿಸಿದರು. ಆದರೆ ಬೆಳೆಸಿದ ಕಲ್ಲಂಗಡಿ ಹಣ್ಣು ಮಾರಾಟವಾಗದೆ ಉಳಿದಾಗ ಅದರಿಂದ ಬೆಲ್ಲವನ್ನು ತಯಾರಿಸುತ್ತಿದ್ದಾರೆ.
ಅವರು ತನ್ನ ನಾಲ್ಕು ಎಕರೆ ಪ್ರದೇಶದಲ್ಲಿ ಕಲ್ಲಂಗಡಿ ಬೆಳೆಸಿದರು ಮತ್ತು ಅವರ ಸ್ನೇಹಿತರ ಜಮೀನಿನ ನಾಲ್ಕು ಎಕರೆ ಜಾಗದಲ್ಲಿ ಕೂಡ ಕಲ್ಲಂಗಡಿ ಹಣ್ಣು ಬೆಳೆಸಿದರು.
ಆದರೆ ವ್ಯಾಪಾರಿಗಳು ಇದನ್ನು ಪ್ರತಿ ಕೆಜಿಗೆ 1 ರೂ ಗೆ ಕೇಳಿದಾಗ ಅವರು ಎಂಟು ಟನ್ ಹಣ್ಣು ಕೊಳೆಯುವುದನ್ನು ತಡೆಗಟ್ಟಲು, ಕಲ್ಲಂಗಡಿ ರಸದಿಂದ ಬೆಲ್ಲವನ್ನು ತಯಾರಿಸಲು ನಿರ್ಧರಿಸಿದರು.
ಈ ಪ್ರಕ್ರಿಯೆಯನ್ನು ವಿವರಿಸಿದ ಅವರು, ಹಣ್ಣಿನಿಂದ ರಸವನ್ನು ಹೊರತೆಗೆದು ಎರಡು ಬಾರಿ ಫಿಲ್ಟರ್ ಮಾಡಲಾಗುತ್ತದೆ ಎಂದು ಹೇಳಿದ್ದಾರೆ. ನಂತರ ರಸವನ್ನು ನಾಲ್ಕು ಗಂಟೆಗಳ ಕಾಲ ಅಥವಾ ದಪ್ಪವಾಗುವವರೆಗೆ ಕುದಿಸಲಾಗುತ್ತದೆ. ಒಂದು ಟನ್ ಕಲ್ಲಂಗಡಿಯಿಂದ ಸುಮಾರು 75 ಕೆಜಿ ಬೆಲ್ಲವನ್ನು ಹೊರತೆಗೆಯಬಹುದು ಎಂದು ಜಯರಾಮ್ ತಿಳಿಸಿದ್ದಾರೆ.
ಚೆನ್ನಾಗಿ ಹಣ್ಣಾಗಿರುವ ಕಲ್ಲಂಗಡಿ ಹಣ್ಣುಗಳ ಸಿಪ್ಪೆ ಬೀಜಗಳನ್ನೆಲ್ಲಾ ತೆಗೆದು ಹಣ್ಣಿನ ತಿರುಳಿನಿಂದ ಜ್ಯೂಸ್ ಮಾಡಿ ಅದನ್ನು ಸೋಸಲಾಗುತ್ತದೆ. ನಂತರ ಬೆಲ್ಲ ಕಾಯಿಸಲು ಬಳಸುವ ದೊಡ್ಡ ಕೊಪ್ಪರಿಗೆಗೆ ಆ ಜ್ಯೂಸ್ ಅನ್ನು ಹಾಕಲಾಗುತ್ತದೆ. ಬಳಿಕ ಒಂದೇ ಸಮನಾದ ಬೆಂಕಿಯ ಉರಿಯಲ್ಲಿ ನಾಲ್ಕು ಗಂಟೆಗಳ ಕಾಲ ಅಥವಾ ದಪ್ಪವಾಗುವವರೆಗೆ ಕುದಿಸಿದಾಗ ನೀರಿನ ಅಂಶ ಆವಿಯಾಗಿ ಬೆಲ್ಲದ ರೂಪ ಬರಲಾರಂಭಿಸುತ್ತದೆ.
ಒಂದು ಟನ್ ಕಲ್ಲಂಗಡಿ ಹಣ್ಣಿನಿಂದ ಸುಮಾರು 700 ಲೀಟರ್ ರಸ ಸಿಗುತ್ತದೆ. ಅದರಿಂದ 80 ರಿಂದ 85 ಕೆಜಿ ಬೆಲ್ಲ ಪಡೆಯಬಹುದು. ಇದು ಲ್ಯಾಬ್ ಟೆಸ್ಟ್ ನಲ್ಲಿ ಸಹ ಪಾಸ್ ಆಗಿದ್ದು, ಸರಕಾರ ಇದಕ್ಕೆ ಅವಕಾಶ ನೀಡಿದರೆ ಕಲ್ಲಂಗಡಿ ಬೆಳೆಗಾರರು ನಿಶ್ಚಿಂತೆಯಿಂದ ಬೆಳೆ ಬೆಳೆಸಬಹುದು.
ಎಚ್ಚರಿಕೆ – ದೇಶದಲ್ಲಿ ಕೊರೋನಾ ಸೋಂಕಿನ ಹಾವಳಿ ಕಡಿಮೆಯಾಗಿದ್ದರೂ ಸಂಪೂರ್ಣವಾಗಿ ನಿಂತಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್ ಪಡೆಯುವುದನ್ನು ಮರೆಯದಿರಿ. ಇದು ಸಾಕ್ಷಾಟಿವಿ ಕಳಕಳಿ.
ಕೊರೋನಾ ಚಿಕಿತ್ಸೆಯಲ್ಲಿ ಸತು ಎಷ್ಟು ಪರಿಣಾಮಕಾರಿ? ಯಾವ ಆಹಾರ ಸೇವನೆಯಿಂದ ಸತುವನ್ನು ಪಡೆಯಬಹುದು?#Saakshatv #healthtips #zincbeneficial #coronatreatment https://t.co/7DuN8YHYEh
— Saaksha TV (@SaakshaTv) May 28, 2021
ಇನ್ನು ಮುಂದೆ ಆನ್‌ಲೈನ್ ನಲ್ಲಿ ಆಧಾರ್ ಮರುಮುದ್ರಣ ಸಾಧ್ಯವಿಲ್ಲ!#UIDAI #Aadhaar #reprint https://t.co/CmkUBpFY20
— Saaksha TV (@SaakshaTv) May 29, 2021
ಉಡುಪಿ – ಕೋರ್ಟ್ ಮೆಟ್ಟಿಲೇರಿದ ಅಪ್ರಾಪ್ತ ಬಾಲಕನಿಗೆ ಸನ್ಯಾಸ ದೀಕ್ಷೆ#Udupi #Shiroormutt https://t.co/0e2wwvp7Wk
— Saaksha TV (@SaakshaTv) May 29, 2021
ರಾತ್ರಿ ಮಲಗುವ ಮೊದಲು ಬಿಸಿ ಹಾಲಿನಲ್ಲಿ ತುಪ್ಪ ಬೆರೆಸಿ ಕುಡಿಯುವುದರ ಪ್ರಯೋಜನಗಳು#Saakshatv #healthtips #ghee #milk https://t.co/SIi4LM1jhG
— Saaksha TV (@SaakshaTv) May 29, 2021
ತೊಂಡೆಕಾಯಿ ಬಜ್ಜಿ#Saakshatv #cookingrecipe #thondekayibajji https://t.co/pfPteVFxqX
— Saaksha TV (@SaakshaTv) May 29, 2021
#Shivamogga #watermelon #jaggery