Shivamogga | ಡಾ.ಮೋಹನ್ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ
ಶಿವಮೊಗ್ಗ : ಕನ್ನಡ ರಾಜ್ಯೋತ್ಸವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ ಮಾಡಿದ್ದು, ಸಾಗರದ ಜನಪ್ರಿಯ ಕಣ್ಣಿನ ತಜ್ಞ ಡಾ.ಮೋಹನ್ ಅವರಿಗೆ ಈ ಸಾಲಿನ ಪ್ರಶಸ್ತಿ ಲಭಿಸಿದೆ.
ಡಾ.ಮೋಹನ್ ಅವರು ಸಾಗರದ ಉಪವಿಭಾಗೀಯ ಸರ್ಕಾರಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಅಲ್ಲದೆ ಕಣ್ಣಿನ ಹಾಗೂ ಇತರೆ ವಿಷಯಗಳ ಕುರಿತು ಹತ್ತಾರು ಪುಸ್ತಕಗಳನ್ನು ಬರೆದು ಪ್ರಕಟ ಮಾಡಿದ್ದಾರೆ.
ಇವರು 22 ಪುಸ್ತಕಗಳನ್ನು ಕನ್ನಡದಲ್ಲಿ, ಒಂದು ಪುಸ್ತಕವನ್ನ ಇಂಗ್ಲೀಷ್ ನಲ್ಲಿ ಪ್ರಕಟಿಸಿದ್ದಾರೆ.
ಹಾಗೆ ಇವರ 1200 ಲೇಖನಗಳು ಇಂಗ್ಲೀಷ್ ನಲ್ಲಿ ಪ್ರಕಟವಾಗಿವೆ.
ಕನ್ನಡದಲ್ಲಿ ಮೂರು ಸಾವಿರ ಲೇಖನಗಳು ಪ್ರಕಟವಾಗಿವೆ.