ಚಾಕಲೇಟ್ ಎಂದು ಇಲಿ ಪಾಷಾಣ ತಿಂದ ಪುಟ್ಟ ಬಾಲಕ ಸಾವು…
ಚಾಕಲೇಟ್ ಎಂದು ಇಲಿ ಪಾಷಾಣ ತಿಂದು ಐದು ವರ್ಷದ ಮಗು ಸಾವನ್ನಪ್ಪಿರುವ ದುರ್ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಚಿಕ್ಕಮಕ್ಕಳಿಗೆ ಚಾಕ್ಲೆಟ್ ಎಂದರೇ ಪ್ರಾಣ, ಚಾಕ್ಲೇಟ್ ರೂಪದಲ್ಲಿ ಯಾವುದೇ ವಸ್ತು ಕಂಡರು ಮಕ್ಕಳು ಬಾಯೊಳಗೆ ಇಟ್ಟುಕೊಳ್ಳುತ್ತದೆ.
ಇದೇ ರೀತಿ ತೀರ್ಥಹಳ್ಳಿ ತಾಲೂಕಿನ ಬೆಚ್ಚವಳ್ಳಿಯ ಮೇಲಿನಕೊಪ್ಪದಲ್ಲಿ ಚಂದ್ರಪ್ಪ ಮತ್ತು ಗೀತಾ ಎಂಬುವವರ 5 ವರ್ಷದ ಪುತ್ರ ಪ್ರೀತಮ್ ಚಾಕೋಲೆಟ್ ಎಂದು ಇಲಿ ಪಾಷಾಣ ತಿಂದು ಬಿಟ್ಟಿದೆ. ಮಗು ತೀವ್ರವಾಗಿ ಅಸ್ವಸ್ಥಗೊಂಡಾಗ ಕಟುಂಬದವರು ಪರಿಶೀಲಿಸಿದಾಗ ಇಲಿ ಪಾಶಣ ತಿಂದಿರುವು ಬೆಳಕಿಗೆ ಬಂದಿದೆ.
ತೀವ್ರ ಅಸ್ವಸ್ಥಗೊಂಡ ಮಗುವನ್ನು ಆಸ್ಪತ್ರೆಗೆ ದಾಖಲಾಸಿಗಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಗು ಮೃತಪಟ್ಟಿದೆ. ಮಗುವಿನ ಸಾವಿನಿಂದಾಗಿ ಪೋಷಕ ದುಂಖಃ ಮುಗಿಲು ಮುಟ್ಟಿದೆ. ಈ ಬಗ್ಗೆ ಮಾಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Shivamogga: Little boy dies after eating rat poision as chocolate