Shivamogga | ಕಾಲು ಜಾರಿ ತುಂಗಾ ನದಿಗೆ ಬಿದ್ದ ವ್ಯಕ್ತಿ ಸಾವು
ಶಿವಮೊಗ್ಗ : ತುಂಗಾ ನದಿಗೆ ವ್ಯಕ್ತಿಯೊಬ್ಬ ಕಾಲು ಜಾರಿ ಬಿದ್ದು ಮೃತಪಟ್ಟಿರುವ ಘಟನೆ ತೀರ್ಥಹಳ್ಳಿ ತಾಲೂಕಿನ ಮಾಳೂರು ಸಮೀಪ ನಡೆದಿದೆ. 48 ವರ್ಷದ ಅನ್ಸರ್ ಮೃತ ವ್ಯಕ್ತಿಯಾಗಿದ್ದಾರೆ.
ಕಳೆದ ಮೂರು ದಿನಗಳ ಹಿಂದೆ ಅನ್ಸರ್ ಕಾಲು ಜಾರಿ ನದಿಗೆ ಬಿದ್ದಿದ್ದರು. ಅಂದಿನಿಂದ ಅವರ ಶೋಧ ಕಾರ್ಯ ನಡೆದಿದ್ದು, ಇಂದು ಮೃತದೇಹ ಪತ್ತೆಯಾಗಿದೆ.
ಅನ್ಸರ್ ಅವರ ಅಗಲಿಕೆಯಿಂದ ಪತ್ನಿ, ಪುತ್ರ, ಪುತ್ರಿ ಅನಾಥರಾಗಿದ್ದಾರೆ.

ಕೂಲಿ ಕೆಲಸ ಮಾಡಿಕೊಂಡು ಕುಟುಂಬದ ನಿರ್ವಹಣೆ ಆಗಬೇಕಿದ್ದು ಮಕ್ಕಳ ಭವಿಷ್ಯದ ಕತ್ತಲಿಗೆ ಸರಿದಂತಾಗಿದೆ.
ಹೀಗಾಗಿ ಆಡಳಿತ ವ್ಯವಸ್ಥೆ ಕುಟುಂಬಕ್ಕೆ ಪರಿಹಾರ ಒದಗಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಇನ್ನು ಮೃತದೇಹವನ್ನು ನದಿಯಿಂದ ಹೊರತೆಗೆದಿರುವ ಪೊಲೀಸರು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಿದ್ದಾರೆ.
ಅಂದಹಾಗೆ ಇದೇ ತಿಂಗಳ ಆರಂಭದಲ್ಲಿ ಹೊಸನಗರ ತಾಲೂಕು ಪುರಪ್ಪೆಮನೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ದೊಡ್ಡಬಿಳಗೋಡು ಗ್ರಾಮದಲ್ಲಿ ವ್ಯಕ್ತಿಯೊಬ್ಬರು ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಕಾಲು ಜಾರಿ ಬಾವಿಗೆ ಬಿದ್ದಿದ್ದರು.