Shivamogga | ಶಿವಮೊಗ್ಗದಲ್ಲಿ ಇಬ್ಬರು ಶಂಕಿತ ಉಗ್ರರ ಬಂಧನ
ಶಿವಮೊಗ್ಗ : ಶಿವಮೊಗ್ಗದಲ್ಲಿ ಇಬ್ಬರು ಶಂಕಿತ ಉಗ್ರರರನ್ನು ಬಂಧಿಸಲಾಗಿದೆ.
ಯಾಸಿನ್ ಹಾಗೂ ಮಹಜ್ ಬಂಧಿತ ಆರೋಪಿಗಳಾಗಿದ್ದಾರೆ.
ಯಾಸಿನ್ ಹಾಗೂ ಮಹಜ್ ನಿಷೇಧಿತ ಸಂಘಟನೆಗಳೊಂದಿಗೆ ಗುರುತಿಸಿಕೊಂಡಿದ್ದರು.
ಅಲ್ಲದೆ ಶಿವಮೊಗ್ಗದ ಪ್ರೇಮ್ ಸಿಂಗ್ ಚಾಕು ಇರಿತ ಪ್ರಕರಣದ ಪ್ರಮುಖ ಆರೋಪಿ ಜಬಿ ಜೊತೆಗೆ ನಿಕಟ ಸಂಪರ್ಕ ಹೊಂದಿದ್ದರು ಎಂದು ತಿಳಿದುಬಂದಿದೆ.
ಮಹಜ್ ಕದ್ರಿಯಲ್ಲಿ ಗೋಡೆ ಬರಹ ಬರೆದ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾನೆ.
![Shivamogga Two suspected terrorists arrested](http://saakshatv.com/wp-content/uploads/2022/09/shivamog.png)
ಈ ಇಬ್ಬರನ್ನೂ ಶಿವಮೊಗ್ಗ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತರ ವಿರುದ್ಧ ಯುಎಪಿಎ ಪ್ರಕರಣ ದಾಖಲಾಗಿದೆ.
ಇವರು ನಿಷೇದಿತ ಉಗ್ರ ಸಂಘಟನೆ ಇಸ್ಲಾಮಿಕ್ ಸ್ಟೇಟ್ ನೊಂದಿಗೆ ನಿಕಟ ಸಂಪರ್ಕ ಹೊಂದಿದ್ದರಂತೆ.
ಸದ್ಯ ಬಂಧಿತ ಯಾಸಿನ್ ಮನೆಯಲ್ಲಿ ಮಹಜರು ಮುಕ್ತಾಯವಾಗಿದ್ದು, ಗುರುಪುರ ಹೊಳೆಯಂಚಿಗೆ ಯಾಸಿನ್ ನನ್ನು ಕರೆತರಲಾಗಿದೆ.
ಎಫ್ ಎಸ್ ಎಲ್ ತಂಡದ ಉಪಸ್ಥಿತಿಯಲ್ಲಿ ಮಹಜರು ಕಾರ್ಯ ಆರಂಭವಾಗಿದೆ.