Shivanagowda Nayak | ತಾಕತ್ತಿದ್ದರೇ ಒಂದು ಸ್ಥಾನ ಗೆದ್ದು ತೋರಿಸಿ : ಹೆಚ್ ಡಿಕೆಗೆ ಸವಾಲು
ರಾಯಚೂರು : ನಿಮಗೆ ತಾಕತ್ತಿದ್ದರೇ ರಾಯಚೂರು ಜಿಲ್ಲೆಯಲ್ಲಿ ಒಂದು ಸ್ಥಾನ ಗೆದ್ದು ತೋರಿಸಿ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಬಿಜೆಪಿ ಶಾಸಕ ಶಿವನಗೌಡ ನಾಯಕ್ ಸವಾಲ್ ಹಾಕಿದ್ದಾರೆ.
ರಾಯಚೂರಿನಲ್ಲಿ ನಡೆದ ಜನ ಸಂಪರ್ಕ ಯಾತ್ರೆಯಲ್ಲಿ ಮಾತನಾಡಿದ ಶಿವನಗೌಡ, ಬಸವರಾಜ ಬೊಮ್ಮಾಯಿ ಸಾಹೇಬರೇ ಇತ್ತೀಚೆಗೆ ಹೆಚ್ ಡಿ ಕುಮಾರಸ್ವಾಮಿ ಮಾನ್ವಿ ಗ್ರಾಮಕ್ಕೆ ಬಂದು ನನ್ನ ಬೈದಿದ್ದರು.
ಹೆಚ್ ಡಿ ಕುಮಾರಸ್ವಾಮಿ ಬಟ್ಟೆ ಇರಲಾರದ ಜನರನ್ನು ನೋಡಿ ಅಭ್ಯಾಸ ಆಗಿಬಿಟ್ಟಿದೆ.
ಜೆಡಿಎಸ್ ಗೆ ತಾಕತ್ತಿದ್ದರೇ ಒಂದು ಸ್ಥಾನ ಜಿಲ್ಲೆಯಲ್ಲಿ ಗೆದ್ದು ತೋರಿಸಿ ಎಂದು ಓಪನ್ ಚಾಲೆಂಜ್ ಹಾಕಿದ್ದಾರೆ.
ಜಿಲ್ಲೆಯಲ್ಲಿ ಏಳು ವಿಧಾನಸಭಾ ಕ್ಷೇತ್ರಗಳಿದ್ದು ಐದು ಸೀಟುಗಳನ್ನು ನಾವು ಗೆಲ್ಲುತ್ತೇವೆ, ಇಲ್ಲದಿದ್ದರೇ ನಾವು ನಿಮಗೆ ಮುಖ ತೋರಿಸುವುದಿಲ್ಲ ಎಂದು ಮಾಜಿ ಸಿಎಂ ಯಡಿಯೂರಪ್ಪ, ಬೊಮ್ಮಾಯಿ ಅವರಿಗೆ ಶಿವನಗೌಡ ತಿಳಿಸಿದರು.






