Sandalwood : ಅಪ್ಪು ನಿಧನದ ನೋವನ್ನ ಹೇಳಿಕೊಳ್ಳುವ ಸ್ಥಿತಿಯಲ್ಲಿಲ್ಲ : ಶಿವಣ್ಣ
ಪುನೀತ್ ರಾಜ್ ಕುಮಾರ್ ನಮ್ಮನ್ನಗಲಿ ಮೂರು ತಿಂಗಳುಗಳೇ ಕಳೆದುಹೋಗಿದೆ. ಆದರೆ ಇಂದು ಕೂಡ ಕುಟುಂಬಸ್ಥರು ಹಾಗೂ ಅಭಿಮಾನಿಗಳು ಆ ನೋವಿಂದ ಹೊರಬಂದಿಲ್ಲ..
ಸ್ಯಾಂಡಲ್ ವುಡ್ ಹ್ಯಾಟ್ರಿಕ್ ಸ್ಟಾರ್ ಶಿವರಾಜ್ ಕುಮಾರ್ ಅವರು ಮೈಸೂರಿನಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟಿಸಿದರು,.. ಈ ವೇಳೆ ಪುನೀತ್ ರಾಜ್ ಕುಮಾರ್ ಅವರನ್ನು ನೆನೆದು ಭಾವುಕರಾದರು..
shivarajkumar gets emotional while talking about puneeth rajkumar
ಅಪ್ಪು ನಿಧನ ನೆನಪಿಸಿಕೊಂಡಾಗೆಲ್ಲ ನಮ್ಮ ಧ್ವನಿಯೇ ಬದಲಾಗುತ್ತದೆ. ಆ ನೋವನ್ನ ಸಂಪೂರ್ಣವಾಗಿ ಹೇಳಿಕೊಳ್ಳುವ ಸ್ಥಿತಿಯಲ್ಲೂ ಇಲ್ಲ. ಬದಲಾಗಿ ನಾವು ಆ ನೋವಿನ ಜೊತೆಗೆ ಬದುಕುತ್ತಿದ್ದೇವೆ. ಮುಂದೆಯೂ ನೋವಿನ ಜೊತೆಗೆ ಬದುಕುತ್ತೇವೆ ಎಂದು ಭಾವುಕರಾದರು..
ಅಪ್ಪುದು ಅದ್ಭುತವಾದ ಆತ್ಮ. ಹೀಗಾಗಿಯೇ ಅಪ್ಪುವನ್ನ ಜನ ಈಗಲೂ ನೆನಪಿಸಿಕೊಂಡು ಇಷ್ಟಪಡುತ್ತಾರೆ. ಅಪ್ಪು ಗಳಿಸಿರುವ ಈ ಪ್ರೀತಿ ಕಂಡು ನನಗೆ ಹೆಮ್ಮೆ ಆಗುತ್ತಿದೆ. ಶಕ್ತಿಧಾಮಕ್ಕೆ ಇತ್ತಿಚಿಗೆ ನಾನು ಹೆಚ್ಚಾಗಿ ಬರುತ್ತಿದ್ದೇನೆ. ನಮ್ಮ ಮನಸ್ಸುಗಳಿಗೂ ಒಂದು ಬದಲಾವಣೆ ಆಗುತ್ತದೆ. ಮಕ್ಕಳಿಗೂ ಹೊಸ ಅನುಭವ ಆಗುತ್ತದೆ ಎಂದರು.