Shivasena : ರಾಹುಲ್ ಗಾಂಧಿ ಅವರನ್ನ ಅಪ್ಪಿಕೊಂಡ ಆದಿತ್ಯ ಠಾಕ್ರೆಗೆ ಗೋಮೂತ್ರ ಸ್ನಾನಕ್ಕೆ ಆಗ್ರಹ..!!!
ಭಾರತ್ ಜೋಡೋ ಯಾತ್ರೆಯಲ್ಲಿ ಭಾಗವಹಿಸಿದ್ದ ಉದ್ಧವ್ ಠಾಕ್ರೆ ಪುತ್ರ ಆದಿತ್ಯ ಠಾಕ್ರೆ ರಾಹುಲ್ ಗಾಂಧಿಯವರನ್ನ ತಬ್ಬಿಕೊಂಡ ಕಾರಣಕ್ಕೆ ಅವರಿಗೆ ಗೋಮೂತ್ರದಿಂದ ಶುದ್ಧೀಕರಣದ ಅಗತ್ಯವಿದೆ ಎಂದು ಮಹಾರಾಷ್ಟ್ರದ ಆಡಳಿತರೂಢ ಬಿಜೆಪಿ ಹಾಗೂ ಬಾಳಾಸಾಹೇಬಾಂಚಿ ಶಿವಸೇನಾ ಆಗ್ರಹಿಸಿದೆ.
ಸಾರ್ವಕರ್ ಬ್ರಿಟೀಷರೊಂದಿಗೆ ಕ್ಷಮಾಪಣೆ ಕೇಳುವ ಮೂಲಕ ಸ್ವಾತಂತ್ರ್ಯ ಹೋರಾಟಗಾರರಿಗೆ ಅವಮಾನ ಮಾಡಿದ್ದರು ಎಂದು ರಾಹುಲ್ ಗಾಂಧಿ ಹೇಳಿದ ಬೆನ್ನಲ್ಲೇ ಈ ರೀತಿ ಆಗ್ರಹಿಸಲಾಗ್ತಿದೆ..
ಸ್ವಾತಂತ್ರ್ಯವೀರ ವಿನಾಯಕ ದಾಮೋದರ ಸಾವರ್ಕರ್ ಅವರನ್ನು ಟೀಕೆ ಮಾಡಿದ ರಾಹುಲ್ ಗಾಂಧಿಯನ್ನು, ಆದಿತ್ಯ ಠಾಕ್ರೆ ಆಲಿಂಗಿಸಿದ್ದಾರೆ. ಹೀಗಾಗಿ ಅವರಗೆ ಗೋಮೂತ್ರ ಸಿಂಪಡಸಬೇಕು. ಅಥವಾ ಪೂರ್ಣ ಪ್ರಮಾಣದ ಗೋಮೂತ್ರ ಸ್ನಾನ ಮಾಡಿಸಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ..








