ವಿರಾಟ್ ಸ್ಥಾನದಲ್ಲಿ ನಾನಿದ್ದಿದ್ದರೇ, ಮದ್ವೆಯಾಗುತ್ತಿರಲಿಲ್ಲ ಎಂದಿದ್ದೇಕೆ ಅಖ್ತರ್ Shoaib Akhtar Blames Virat Kohli’s ‘Early’ Marriage saakshatv
ವಿರಾಟ್ ಕೊಹ್ಲಿ ನಾಯಕತ್ವದಿಂದ ಕೆಳಗಿಳಿದಿದ್ದೇ ಇಳಿದಿದ್ದು, ಮಾಜಿ ಕ್ರಿಕೆಟಿಗರೆಲ್ಲರೂ ಒಂದಲ್ಲಾ ಒಂದು ವಿಷಯವಾಗಿ ವಿರಾಟ್ ಬಗ್ಗೆ ಮಾತನಾಡುತ್ತಲೇ ಇದ್ದಾರೆ.
ಇದಕ್ಕೆ ಪಾಕಿಸ್ತಾನದ ಮಾಜಿ ಆಟಗಾರರು ಕೂಡ ಹೊರತಾಗಿಲ್ಲ. ಪ್ರತಿ ಬಾರಿ ವಿರಾಟ್ ಬಗ್ಗೆ ಒಂದಲ್ಲಾ ಒಂದು ಹೇಳಿಕೆ ಕೊಡುವ ಶೋಯೆಬ್ ಅಖ್ತರ್, ಇದೀಗ ವಿರಾಟ್ ವಿವಾಹದ ಬಗ್ಗೆ ಮಾತನಾಡಿದ್ದಾರೆ.
ನಾನು ವಿರಾಟ್ ಕೊಹ್ಲಿ ಸ್ಥಾನದಲ್ಲಿ ಇದ್ದಿದ್ದರೇ ಅನುಷ್ಕಾ ಶರ್ಮಾ ಅವರನ್ನು ಮದುವೆಯಾಗುತ್ತಿರಲ್ಲ ಎಂದು ಅಖ್ತರ್ ಹೇಳಿದ್ದಾರೆ.
ಮುದುವೆ ಆಟಗಾರನ ಜೀವನದ ಮೇಲೆ ಹಿಚ್ಚಿನ ಜವಾಬ್ದಾರಿಯನ್ನು ತಂದೊಡ್ಡುತ್ತದೆ. ವಿರಾಟ್ ಕೊಹ್ಲಿಯೇ ಹೇಳಿದಂತೆ ಅವರು ಎಂದೂ ನಾಯಕರಾಗಬೇಕು ಅಂದುಕೊಂಡಿಲ್ಲ ಎಂದಿದ್ದಾರೆ.
ವಿರಾಟ್ ಕೊಹ್ಲಿ “ಸುಮಾರು 7 ವರ್ಷಗಳಿಂದ ನಾಯಕರಾಗಿದ್ದಾರೆ. ನಾನು ವಿರಾಟ್ ನಾಯಕರಾಗಿರಬೇಕು ಎಂದೂ ಅಂದುಕೊಂಡಿರಲಿಲ್ಲ.
ಅವರು ಬ್ಯಾಟಿಂಗ್‌ನತ್ತ ಗಮನಹರಿಸಿ 100 ರಿಂದ 120 ರನ್ ಗಳಿಸಬೇಕೆಂದು ನಾನು ಬಯಸಿದ್ದೆ ಎಂದಿದ್ದಾರೆ ಅಖ್ತರ್. Shoaib Akhtar Blames Virat Kohli’s ‘Early’ Marriage saakshatv
ಇನ್ನು ವಿರಾಟ್ ಪಾರ್ಮ್ ಬಗ್ಗೆ ಮಾತನಾಡಿದ ಅಖ್ತರ್, ಆಟಗಾರನಿಗೆ ನಾಯಕತ್ವ ಜವಾಬ್ದಾರಿ ಹೆಚ್ಚಿನ ಹೊರೆಯನ್ನು ನೀಡುತ್ತದೆ.
ಹೀಗಾಗಿ ವಿರಾಟ್ ಕೊಹ್ಲಿ ಜಾಗದಲ್ಲಿ ನಾನಿದ್ದರೆ ಇಷ್ಟು ಬೇಗ ಮದುವೆಯಾಗುತ್ತಿರಲಿಲ್ಲ. ಮದುವೆಯಾಗುವುದರಲ್ಲಿ ತಪ್ಪೇನಿಲ್ಲ, ಎಂದಿಗೂ ಮದುವೆಯಾಗಬೇಡಿ ಎಂದೂ ನಾನು ಹೇಳುವುದಿಲ್ಲ.
ಆದ್ರೆ ವಿರಾಟ್ ಕೊಹ್ಲಿ 120 ಶತಕಗಳನ್ನು ಬಾರಿಸಿದ ನಂತರ ಮದುವೆಯಾಗಬೇಕಿತ್ತು. ಅಭಿಮಾನಿಗಳಿಗೆ ವಿರಾಟ್ ಕೊಹ್ಲಿ ಎಂದರೆ ಹುಚ್ಚು.
ವಿರಾಟ್ ಇನ್ನೂ 20 ವರ್ಷಗಳ ಕಾಲ ಕ್ರಿಕೆಟ್‌ನಲ್ಲಿ ಮುಂದುವರಿಯಬೇಕು ಎಂದು ಅಖ್ತರ್ ಹೇಳಿದ್ದಾರೆ.