ಸಿಲಿಂಡರ್ ತಲೆ ಮೇಲಿಟ್ಟು ಪ್ರತಿಭಟಿಸಿದ್ದ ಶೋಭಾ ಜೀ ಆಪ್ ಕಂಹಾ ಹೈ : ಸಿದ್ದರಾಮಯ್ಯ Siddaramaiah Saaksha tv
ತುಮಕೂರು : ಯುಪಿಎ ಸರ್ಕಾರದಲ್ಲಿ ಅಡುಗೆ ಅನಿಲ ಬೆಲೆ ಜಾಸ್ತಿಯಾದಾಗ ಶೋಭಾ ಕರಂದ್ಲಾಜೆ ಅವರು ಸಿಲಿಂಡರ್ ಅನ್ನು ತಲೆ ಮೇಲೆ ಹೊತ್ತು ಪ್ರತಿಭಟನೆ ಮಾಡಿದ್ದರು.
ಈಗ ಸಿಲಿಂಡರ್ ಬೆಲೆ ಹೆಚ್ಚಾಗಿದ್ದು, ಆಗ ಪ್ರತಿಭಟಿಸಿದ್ದ ಶೋಭಾ ಜೀ ಆಪ್ ಕಂಹಾ ಹೈ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಸ್ಯ ಮಾಡಿದ್ದಾರೆ.
ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಡುಗೆ ಅನಿಲ ಬೆಲೆ ಏರಿಕೆ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ನರೇಂದ್ರ ಮೋದಿ ಜೀ, ಅಮಿತ್ ಶಾ ಜೀ, ಯಡಿಯೂರಪ್ಪ ಜೀ, ನಿಮಗೆ ನಾಚಿಕೆ ಆಗಲ್ವಾ ಎಂದು ಸಿದ್ದರಾಮಯ್ಯ ಕಿಡಿಕಾರಿದರು.
ಹಾಗೇ ತಲೆಮೇಲೆ ಸಿಲಿಂಡರ್ ಹೊತ್ತು ಪ್ರತಿಭಟಿಸಿದ್ದ ಶೋಭಾ ಕರಂದ್ಲಾಜೆ ಈಗ ಎಲ್ಲೋದ್ರು ಎಂದು ಕುಟುಕಿದರು.
ಇದೇ ವೇಳೆ ಸಿದ್ದರಾಮಯ್ಯ ಪರ್ಸೆಂಟೇಜ್ ಕಿಂಗ್ ಎಂಬ ಈಶ್ವರಪ್ಪ ಹೇಳಿಕೆಗೆ ತಮ್ಮದೇಯಾದ ದಾಟಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಈಶ್ವರಪ್ಪ ಒಬ್ಬ ಪೆದ್ದ ಎಂದು ತಿರುಗೇಟು ನೀಡಿದರು.
ಇನ್ನು ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಸಿದ್ದರಾಮಯ್ಯ, ಕಳೆದ ಬಾರಿ ಪರಿಷತ್ ನಲ್ಲಿ ತುಮಕೂರಿನಲ್ಲಿ ಸೋತಿದ್ದಿವಿ.
ಆದರೆ ಈ ಬಾರಿ ಗೆಲ್ತೀವಿ, ಆರ್. ರಾಜೇಂದ್ರ ಅವರು ಇಲ್ಲಿ ಅಭ್ಯರ್ಥಿಯಾಗಿದ್ದಾರೆ. ನೂರಕ್ಕೆ ನೂರು ಈ ಬಾರಿ ರಾಜೇಂದ್ರ ಗೆಲ್ಲುತ್ತಾರೆ ಎಂದರು.