ವಿರಾಟ್ ಅಭಿಮಾನಿಗಳಿಗೆ ಶಾಕ್ : ಕೊಹ್ಲಿ ಔಟ್.. ರಾಹುಲ್ ಇನ್

1 min read
Kohli saaksha tv

ವಿರಾಟ್ ಅಭಿಮಾನಿಗಳಿಗೆ ಶಾಕ್ : ಕೊಹ್ಲಿ ಔಟ್.. ರಾಹುಲ್ ಇನ್

ಐಸಿಸಿ ಟಿ20 ಶ್ರೇಯಾಂಕ ಪಟ್ಟಿಯನ್ನು ಬುಧವಾರ ಬಿಡುಗಡೆ ಮಾಡಿದೆ.

ಬ್ಯಾಟಿಂಗ್ ವಿಭಾಗದಲ್ಲಿ ಟೀಂ ಇಂಡಿಯಾ ಆರಂಭಿಕ ಆಟಗಾರ ಕೆಎಲ್ ರಾಹುಲ್ ಮಾತ್ರ ಟಾಪ್-5 ರಲ್ಲಿ ಕಾಣಿಸಿಕೊಂಡಿದ್ದಾರೆ.

ಟಿ20 ಮಾಜಿ ನಾಯಕ ವಿರಾಟ್ ಕೊಹ್ಲಿ ಅವರನ್ನು ಅಗ್ರ 10ರ ಪಟ್ಟಿಯಿಂದ ಕೈಬಿಡಲಾಗಿದೆ.

ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯನ್ನು ಟೀಂ ಇಂಡಿಯಾ 3-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿದೆ.

ಈ ಸರಣಿಯಲ್ಲಿ ರೋಹಿತ್ ಮತ್ತು ರಾಹುಲ್ ಉತ್ತಮ ಪ್ರದರ್ಶನ ನೀಡಿದ್ದರು.

ಮೊದಲೆರಡು ಪಂದ್ಯಗಳನ್ನು ಆಡಿದ ರಾಹುಲ್ 80 ರನ್ ಗಳಿಸಿದ್ದರು. ಇದರೊಂದಿಗೆ ಶ್ರೇಯಾಂಕದಲ್ಲಿ 729 ಅಂಕಗಳೊಂದಿಗೆ ಐದನೇ ಸ್ಥಾನಕ್ಕೇ ಏರಿದ್ದಾರೆ.

ಸರಣಿಯಲ್ಲಿ ಅಗ್ರ ಸ್ಕೋರರ್ ಆಗಿರುವ ರೋಹಿತ್ ಶರ್ಮಾ ಎರಡು ಸ್ಥಾನ ಮೇಲೇರಿ 13ನೇ ಸ್ಥಾನಕ್ಕೆ ತಲುಪಿದ್ದಾರೆ.

Kohli saaksha tv

ಪಾಕಿಸ್ತಾನದ ನಾಯಕ ಬಾಬರ್ ಅಜಮ್ 809 ಅಂಕಗಳೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ, ಡೇವಿಡ್ ಮಲಾನ್ (ಇಂಗ್ಲೆಂಡ್) 805 ಅಂಕಗಳೊಂದಿಗೆ ಮತ್ತು ದಕ್ಷಿಣ ಆಫ್ರಿಕಾದ ಮಾಕ್ರ್ರಾಮ್ 796 ಅಂಕಗಳೊಂದಿಗೆ ನಂತರದ ಸ್ಥಾನದಲ್ಲಿದ್ದಾರೆ.

ಪಾಕಿಸ್ತಾನದ ಮೊಹಮ್ಮದ್ ರಿಜ್ವಾನ್ 735 ಅಂಕಗಳೊಂದಿಗೆ ಒಂದು ಸ್ಥಾನ ಸುಧಾರಿಸಿ ನಾಲ್ಕನೇ ಸ್ಥಾನಕ್ಕೆ ತಲುಪಿದ್ದಾರೆ.

ಬೌಲಿಂಗ್ ವಿಭಾಗದಲ್ಲಿ ವನಿಂದು ಹಸರಂಗ (ಶ್ರೀಲಂಕಾ) 797 ಅಂಕಗಳೊಂದಿಗೆ ಪ್ರಥಮ, ತಬ್ರಿಜ್ ಶಾಂಸಿ (ದಕ್ಷಿಣ ಆಫ್ರಿಕಾ) 784 ಅಂಕಗಳೊಂದಿಗೆ ದ್ವಿತೀಯ, ಆಡಮ್ ಜಂಪಾ (ಆಸ್ಟ್ರೇಲಿಯಾ) 725 ಅಂಕಗಳೊಂದಿಗೆ ತೃತೀಯ ಸ್ಥಾನದಲ್ಲಿದ್ದಾರೆ.

ಟೀಂ ಇಂಡಿಯಾದ ಯಾವ ಬೌಲರ್ ಗಳೂ ಟಾಪ್ ಟೆನ್ ನಲ್ಲಿ ಇಲ್ಲ. ಆಲ್ ರೌಂಡ್ ವಿಭಾಗದಲ್ಲಿ ಮೊಹಮ್ಮದ್ ನಬಿ (ಅಫ್ಘಾನಿಸ್ತಾನ) 265 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಶಕೀಬ್ ಅಲ್ ಹಸನ್ (ಬಾಂಗ್ಲಾದೇಶ) 231 ಅಂಕಗಳೊಂದಿಗೆ ಮತ್ತು ಲಿಯಾಮ್ ಲಿವಿಂಗ್‍ಸ್ಟೋನ್ (ಇಂಗ್ಲೆಂಡ್) 179 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd