ಟ್ವಿಟ್ಟರ್ ಸಿಇಓ ಎಲಾನಾ ಮಸ್ಕ್ ಆಗಾಗ ಸುದ್ದಿಯಾಗುತ್ತಲೇ ಇದ್ದಾರೆ. ಸದ್ಯ ಟ್ವಿಟ್ಟರ್ ಲೋಗೋದಿಂದ ನೀಲಿ ಹಕ್ಕಿ ತೆಗೆದು ನಾಯಿ ಚಿತ್ರ ಹಾಕಿದ್ದು, ಕುತೂಹಲಕ್ಕೆ ಕಾರಣವಾಗಿದೆ.
ಹಕ್ಕಿಯ ಜಾಗಕ್ಕೆ ಕ್ರಿಪ್ಟೋಕರೆನ್ಸಿ ಡಾಗ್ ಕಾಯಿನ್ ನ ನಾಯಿಯ ಮೀಮ್ಸ್ ಫೋಟೋ ಬಳಸಿ, ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ವಿಚಾರ ಹಂಚಿಕೊಂಡಿದ್ದಾರೆ. ಟ್ವಿಟ್ಟರ್ ಬದಲಾವಣೆ ಕೇವಲ ವೆಬ್ ಆವೃತ್ತಿಗೆ ಮಾತ್ರ ಸೀಮಿತವಾಗಿದೆ, ಮೊಬೈಲ್ನಲ್ಲಿ ಪಕ್ಷಿಯ ಲೋಗೋನೆ ಕಾಣಿಸಲಿದೆ.
ಟ್ವಿಟರ್ ನ ಸಿಇಓ ಅನಾಮಧೇಯ ಖಾತೆಯ ನಡುವಿನ ಸಂಭಾಷಣೆಯ ಸ್ಕ್ರೀನ್ಶಾಟ್ ಅನ್ನು ಹಂಚಿಕೊಂಡಿದ್ದಾರೆ. ಅಲ್ಲಿ ನಂತರದವರು ಪಕ್ಷಿ ಲೋಗೋವನ್ನು ನಾಯಿಗೆ ಬದಲಾಯಿಸಲು ಕೇಳಿಕೊಂಡಿದ್ದಾರೆ. ಈ ಪೋಸ್ಟ್ ಅನ್ನು ಟ್ವಿಟರ್ನಲ್ಲಿ ಹಂಚಿಕೊಂಡ ಮಸ್ಕ್, ಭರವಸೆ ನೀಡಿದಂತೆ ಎಂದು ಬರೆದಿದ್ದಾರೆ.