ಸಾಮಾಜಿಕ ಜಾಲತಾಣದಲ್ಲಿ ಲಸಿಕೆ ಪಡೆದ ಪ್ರಮಾಣಪತ್ರ ಹಂಚಿಕೊಳ್ಳಬೇಡಿ

1 min read
Should not post covid19 vaccination certificate on social media

ಸಾಮಾಜಿಕ ಜಾಲತಾಣದಲ್ಲಿ ಲಸಿಕೆ ಪಡೆದ ಪ್ರಮಾಣಪತ್ರ ಹಂಚಿಕೊಳ್ಳಬೇಡಿ

ಸಾಮಾಜಿಕ ಜಾಲತಾಣದಲ್ಲಿ ಲಸಿಕೆ ಪಡೆದ ಪ್ರಮಾಣಪತ್ರಗಳನ್ನು ಹಂಚಿಕೊಳ್ಳದಿರುವಂತೆ ಬಳಕೆದಾರರಿಗೆ ಸರ್ಕಾರ ಎಚ್ಚರಿಕೆ ನೀಡಿದೆ. ಇದು ನಿಮಗೆ ಅಪಾಯಕಾರಿಯಾಗಬಹುದು ಎಂದು ತಿಳಿಸಿದೆ. ಲಸಿಕೆಯ ಮೊದಲ ಪ್ರಮಾಣವನ್ನು ಈಗಾಗಲೇ ಪಡೆದ ಜನರು ಯಾವುದೇ ಅರಿವಿಲ್ಲದೆ ತಮ್ಮ ಪ್ರಮಾಣಪತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಆದರೆ ಅವರ ಮಾಹಿತಿಯು ಎಷ್ಟು ಸಾರ್ವಜನಿಕವಾಗಿದೆ ಎಂಬುದರ ಬಗ್ಗೆ ಅವರಿಗೆ ತಿಳಿದಿಲ್ಲ.
Vaccination

ಇದಕ್ಕೆ ಸಂಬಂಧಿಸಿದಂತೆ ಸೈಬರ್ ಫ್ರೆಂಡ್ ಖಾತೆಯಿಂದ ಗೃಹ ಸಚಿವಾಲಯ ಟ್ವಿಟರ್‌ನಲ್ಲಿ ಸಲಹೆ ನೀಡಿದೆ. ಈ ಟ್ವಿಟರ್ ಖಾತೆಯಲ್ಲಿ ಸೈಬರ್ ಸುರಕ್ಷತೆಯ ಬಗ್ಗೆ ಬಳಕೆದಾರರಿಗೆ ಮಾಹಿತಿ ನೀಡಿದೆ. ಜೊತೆಗೆ ಬಳಕೆದಾರರು ತಮ್ಮ ವ್ಯಾಕ್ಸಿನೇಷನ್ ಪ್ರಮಾಣಪತ್ರಗಳನ್ನು ಹಂಚಿಕೊಳ್ಳಬಾರದು ಎಂದು ಎಚ್ಚರಿಕೆ ನೀಡಿದೆ.
ವ್ಯಾಕ್ಸಿನೇಷನ್ ಪ್ರಮಾಣಪತ್ರ ಹಂಚಿಕೊಳ್ಳುವುದು ಅಪಾಯಕಾರಿಯಾಗಿದ್ದು, ಹ್ಯಾಕರ್ ಗಳು ನಿಮ್ಮ ವೈಯಕ್ತಿಕ ಮಾಹಿತಿಯನ್ನು ಕದಿಯಬಹುದು ಎಂದು ಸೈಬರ್ ಫ್ರೆಂಡ್ ಟ್ವೀಟ್ ಮಾಡಿದೆ.

ನೀವು ಪ್ರಮಾಣಪತ್ರವನ್ನು ಹೇಗೆ ಪಡೆಯುತ್ತೀರಿ

ನೀವು ಕೋವಿಡ್‌ನ ಮೊದಲ ಲಸಿಕೆ ಪಡೆದ ಕೂಡಲೇ, ಸರ್ಕಾರವು ನಿಮಗೆ ಪ್ರಮಾಣಪತ್ರವನ್ನು ನೀಡುತ್ತದೆ. ಇದರಲ್ಲಿ ಲಸಿಕೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಲಾಗುತ್ತದೆ. ಪ್ರಮಾಣಪತ್ರದಲ್ಲಿ, ವ್ಯಾಕ್ಸಿನೇಷನ್ ಸೆಂಟರ್, ಆಧಾರ್ ಕಾರ್ಡ್‌ನ ಕೊನೆಯ 4 ಅಂಕಿಯ ಸಂಕೇತಗಳು ಮತ್ತು ನಿಮ್ಮ ಎರಡನೇ ಡೋಸ್ ದಿನಾಂಕವೂ ಇರುತ್ತದೆ. ಮೊದಲ ಪ್ರಮಾಣಪತ್ರವು ತಾತ್ಕಾಲಿಕವಾಗಿದ್ದು, ಎರಡೂ ಪ್ರಮಾಣಗಳ ನಂತರ ಮಾತ್ರ ನೀವು ಎರಡನೇ ಪ್ರಮಾಣಪತ್ರವನ್ನು ಪಡೆಯುತ್ತೀರಿ.

ವ್ಯಾಕ್ಸಿನೇಷನ್ ಪ್ರಮಾಣಪತ್ರವು ನಿಮ್ಮ ಆಧಾರ್ ಕಾರ್ಡ್‌ನಂತಿರುತ್ತದೆ. ಭವಿಷ್ಯದಲ್ಲಿ ನೀವು ಹೊರ ದೇಶಕ್ಕೆ ಹೋದರೆ, ನಿಮ್ಮ ವ್ಯಾಕ್ಸಿನೇಷನ್ ಪ್ರಮಾಣಪತ್ರಗಳನ್ನು ತೋರಿಸಬೇಕಾಗಬಹುದು. ಮೊದಲ ಡೋಸ್ ನಂತರ, ನಿಮ್ಮ ಪ್ರಮಾಣಪತ್ರವನ್ನು ನೀವು ಸುಲಭವಾಗಿ ಡೌನ್‌ಲೋಡ್ ಮಾಡಬಹುದು. ಕೋವಿನ್ ಪೋರ್ಟಲ್ ಅಥವಾ ಆರೋಗ್ಯ ಸೇತು ಅಪ್ಲಿಕೇಶನ್‌ಗೆ ಹೋಗಿ ನೀವು ಪ್ರಮಾಣ ಪತ್ರ ಡೌನ್‌ಲೋಡ್ ಮಾಡಬಹುದು.
wearing masks

ಎಚ್ಚರಿಕೆ – ದೇಶಾದ್ಯಂತ ಕೊರೋನಾ ಸೋಂಕು ತೀವ್ರಗತಿಯಲ್ಲಿ ಹರಡುತ್ತಿದೆ. ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್‌ ಪಡೆಯುವುದನ್ನು ಮರೆಯದಿರಿ. ನಮ್ಮ ಮತ್ತು ನಮ್ಮ ‌ಕುಟುಂಬದ ಆರೋಗ್ಯ ನಮ್ಮ ‌ಕೈಯಲ್ಲಿದೆ. ಇದು ‌ಸಾಕ್ಷಾಟಿವಿ ಕಳಕಳಿ.

#covid19 #vaccinationcertificate #socialmedia

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd