ರಾಜ್ಯದಲ್ಲಿ ಲಾಕ್ ಡೌನ್ ವಿಸ್ತರಣೆ ಮಾಡಬೇಕೆ..?
ಬೆಂಗಳೂರು : ಸದ್ಯ ರಾಜ್ಯದಲ್ಲಿ ಜಾರಿ ಇರುವ ಲಾಕ್ ಡೌನ್ ಜೂನ್ 7ಕ್ಕೆ ಮುಕ್ತಾಯವಾಗಲಿದೆ. ಇದಕ್ಕೆ ಇನ್ನೂ ಏಳು ದಿನಗಳು ಬಾಕಿ ಇದೆ.
ಆದರೂ ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ವಿಸ್ತರಣೆ ಮಾಡಬೇಕೆ ಎಂಬ ಪ್ರಶ್ನೆ ಉದ್ಬವವಾಗಿದೆ.
ಈ ಮಧ್ಯೆ ರಾಜ್ಯದಲ್ಲಿ ಲಾಕ್ ಡೌನ್ ಮುಂದುವರೆಸಬೇಕೇ, ಬೇಡವೇ ಎನ್ನುವ ಕುರಿತು ಸಂಪುಟ ಸಹೋದ್ಯೋಗಿಗಳಲ್ಲೇ ಭಿನ್ನ ಹೇಳಿಕೆಗಳು ವ್ಯಕ್ತವಾಗಿವೆ.
ಈ ನಡುವೆ ಕೋವಿಡ್ ಕಾರ್ಯಪಡೆ ಮುಖ್ಯಸ್ಥರೂ ಸೇರಿದಂತೆ ಮೂವರು ಸಚಿವರು ಲಾಕ್ ಡೌನ್ ಮುಂದುವರೆಸುವ ಕುರಿತು ಒಲವು ತೋರಿದ್ದಾರೆ.
ಆದ್ರೆ ಕಳೆದ ಒಂದು ತಿಂಗಳಿನಿಂದ ಜನರು ಗೃಹಬಂಧನಕ್ಕೆ ಒಳಗಾಗಿದ್ದು, ಯಾವಾಗ ಅನ್‍ಲಾಕ್ ಪ್ರಕ್ರಿಯೆ ಆರಂಭಗೊಳ್ಳಿದೆ ಎಂದು ಕಾಯುತ್ತಿದ್ದಾರೆ.
ಜನರ ಆಶಯಕ್ಕೆ ಪೂರಕವಾಗಿ ಕೆಲ ಸಚಿವರು ಲಾಕ್ ಡೌನ್ ವಿಸ್ತರಣೆ ಬೇಡ ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.
ಕೋವಿಡ್ ಕಾರ್ಯಪಡೆ ಮುಖ್ಯಸ್ಥ ಡಾ.ಅಶ್ವತ್ಥ ನಾರಾಯಣ್, ಸದಸ್ಯರಾದ ಆರ್.ಅಶೋಕ್, ಡಾ.ಸುಧಾಕರ್ ಲಾಕ್ ಡೌನ್ ಮತ್ತೊಂದು ಅವಧಿಗೆ ವಿಸ್ತರಣೆಯಾಗಬೇಕು ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇತ್ತ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಲಾಕ್ ಡೌನ್ ವಿಸ್ತರಣೆ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಜೂನ್ ಐದು ಆರನೇ ತಾರೀಕು ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ.